ಮೈಸೂರು ಎಂಐಟಿ ಎಂಜಿನಿಯರ್ ವಿದ್ಯಾರ್ಥಿಗಳಿಂದ ಕುಂತಿಬೆಟ್ಟದಲ್ಲಿ ಶ್ರಮದಾನ

| Published : May 06 2024, 12:30 AM IST

ಮೈಸೂರು ಎಂಐಟಿ ಎಂಜಿನಿಯರ್ ವಿದ್ಯಾರ್ಥಿಗಳಿಂದ ಕುಂತಿಬೆಟ್ಟದಲ್ಲಿ ಶ್ರಮದಾನ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಎಂಐಟಿ ಕಾಲೇಜಿನ ಶ್ರಮದಾನದಲ್ಲಿ ಎಂಐಟಿ ಸಂಸ್ಥೆ ಅಧ್ಯಕ್ಷ ನ್ಯಾಮನಹಳ್ಳಿ ಮುರಳಿ, ಪ್ರಾಂಶುಪಾಲ ನರೇಶ್ ಕುಮಾರ್, ಸಿಎಸ್ ವಿಭಾಗದ ಮುಖ್ಯಸ್ಥ ಡಾ.ಶಿವಮೂರ್ತಿ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಎಸ್.ಮನೋಜ್, ಜಿ.ಮಿಲಿಂದ್ ಶರ್ಮಾ, ಕೆ.ನಿಸರ್ಗ, ಬಿ.ಎಸ್.ನಿಶಾಂತ್ ಕುಮಾರ್, ಪಿ.ಆರ್.ನಿಶಾಂತ್, ಎನ್.ಆರ್.ಪ್ರವೀಣ್, ಆರ್.ನಿತಿನ್, ಎಸ್.ರಕ್ಷಿತ್, ರವೀಂದ್ರ ಗೌಡ ಎಸ್ ಪಾಟೀಲ್, ಎಸ್.ಸಮರ್ಥ ಚೌದರಿ, ಆರ್.ಶ್ರೇಯಸ್, ಜಿ.ಎನ್.ಸುಮಂತ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕುಂತಿಬೆಟ್ಟದ ಕಲ್ಯಾಣಿ, ದೇವಸ್ಥಾನ ಸೇರಿದಂತೆ ಅನೇಕ ಸ್ಥಳಗಳನ್ನು ಮೈಸೂರಿನ ಮಹಾರಾಜ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿ‌ನ ವಿದ್ಯಾರ್ಥಿಗಳು ಸ್ವಚ್ಛತೆ ಮಾಡಿ ಪ್ರವಾಸಿ ಕ್ಷೇತ್ರಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿದ್ದಾರೆ.

ಮೈಸೂರಿನ ಎಂಐಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 3ನೇ ವರ್ಷದ ಎಂಜಿನಿಯರ್ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು 5 ದಿನಗಳ ಕಾಲ ಬೆಳಗ್ಗೆಯಿಂದ ಸಂಜೆ ತನಕ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಕುಂತಿಬೆಟ್ಟದಲ್ಲಿರುವ ಪ್ರವಾಸಿ ಸ್ಥಳವಾದ ಕಲ್ಯಾಣಿ, ದೇವಸ್ಥಾನದ ಆವರಣ, ದಾರಿಗಳು, ಬೆಟ್ಟ ಹತ್ತುವ ಮೆಟ್ಟಿಲುಗಳು, ಕೆಲ ಬಂಡೆಗಳು, ಗುಹೆ, ಬೃಹತ್ ಬಸವ ವಿಗ್ರಹ ಸೇರಿದಂತೆ ಇನ್ನಿತರ ಸ್ಥಳಗಳನ್ನು ಎಂಐಟಿ ವಿದ್ಯಾರ್ಥಿಗಳು ಸಂಪೂರ್ಣ ಸ್ವಚ್ಛಗೊಳಿಸಿ, ಸುಂದರವಾಗಿ ಕಾಣುವಂತೆ ಶ್ರಮಿಸಿದ್ದಾರೆ.

ಮೈಸೂರು ಎಂಐಟಿ ಕಾಲೇಜಿನ ಶ್ರಮದಾನದಲ್ಲಿ ಎಂಐಟಿ ಸಂಸ್ಥೆ ಅಧ್ಯಕ್ಷ ನ್ಯಾಮನಹಳ್ಳಿ ಮುರಳಿ, ಪ್ರಾಂಶುಪಾಲ ನರೇಶ್ ಕುಮಾರ್, ಸಿಎಸ್ ವಿಭಾಗದ ಮುಖ್ಯಸ್ಥ ಡಾ.ಶಿವಮೂರ್ತಿ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಎಸ್.ಮನೋಜ್, ಜಿ.ಮಿಲಿಂದ್ ಶರ್ಮಾ, ಕೆ.ನಿಸರ್ಗ, ಬಿ.ಎಸ್.ನಿಶಾಂತ್ ಕುಮಾರ್, ಪಿ.ಆರ್.ನಿಶಾಂತ್, ಎನ್.ಆರ್.ಪ್ರವೀಣ್, ಆರ್.ನಿತಿನ್, ಎಸ್.ರಕ್ಷಿತ್, ರವೀಂದ್ರ ಗೌಡ ಎಸ್ ಪಾಟೀಲ್, ಎಸ್.ಸಮರ್ಥ ಚೌದರಿ, ಆರ್.ಶ್ರೇಯಸ್, ಜಿ.ಎನ್.ಸುಮಂತ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿದ್ದರು.

ಕುಂತಿಬೆಟ್ಟ ಪ್ರವಾಸಿ ಕ್ಷೇತ್ರವನ್ನು ಸ್ವಚ್ಛಗೊಳಿಸಿದ ಮೈಸೂರಿನ ಎಂಐಟಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕುಂತಿಬೆಟ್ಟದ ಪ್ರವಾಸಿಗರು ಹಾಗೂ ಕುಂತಿಬೆಟ್ಟದಲ್ಲಿರುವ ಶ್ರೀಶಂಕರಾನಂದ ವಿದ್ಯಾಸಂಸ್ಥೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.ನಿರುದ್ಯೋಗಿಗಳಿಗೆ ಮೇ 15 ರಿಂದ ಉಚಿತ ತರಬೇತಿ

ಮಂಡ್ಯ: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯಿಂದ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೇಟಿಂಗ್ ಕುರಿತ 30 ದಿನಗಳ ಉಚಿತ ತರಬೇತಿಯು ಮೇ 15 ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 45 ವರ್ಷದ ವಯೋಮಾನದ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು ಮೇ 8 ರಂದು ಕೊನೆ ದಿನ. ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದೆ. ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮಿಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೊ-9380162042, 9740982585 ಅನ್ನು ಸಂಪರ್ಕಿಸಬಹುದು ಎಂದು ಬೆಂಗಳೂರಿನ ನೆಲಮಂಗಲ ತಾಲೂಕು ಅರಿಶಿನಕುಂಟೆಯ ರುಡ್ ಸೆಟ್ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.3 ದಿನಗಳ ಕಾಲ ಆನ್ ಲೈನ್ ಮೂಲಕ ತರಬೇತಿ ಕಾರ್ಯಾಗಾರ

ಮಂಡ್ಯ: ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಂಗಸಂಸ್ಥೆ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣೆ ಸಂಸ್ಥೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಸಹಯೋಗದೊಂದಿಗೆ Application of UAVs and Drones for Agriculture ವಿಷಯ ಕುರಿತು ಮೇ 14 ರಿಂದ 16 ರವರೆಗೆ 3 ದಿನಗಳ ಕಾಲ ಆನ್ ಲೈನ್ ಮೂಲಕ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ವಿಷಯಾಧರಿತ ಉಪನ್ಯಾಸಗಳನ್ನು ನೀಡಲು ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ ನುರಿತ ವಿಜ್ಞಾನಿಗಳನ್ನು ಆಹ್ವಾನಿಸಲಾಗುತ್ತಿದೆ. ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು ಮೇ 10 ರೊಳಗೆ ತಮ್ಮ ಹೆಸರು ನೊಂದಾಯಿಸಿಕೊಂಡು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೊ-9743084194 ಅಥವಾ www.kstacademy.in ವೆಬ್ ಸೈಟ್ ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ.ರಮೇಶ್ ತಿಳಿಸಿದ್ದಾರೆ.