ಮಹರ್ಷಿ ವಾಲ್ಮೀಕಿ ಪ್ರಬುದ್ಧ ವೇದಿಕೆ ಮೈಸೂರು ಭಾಗದಲ್ಲಿ ನಾಯಕ ಸಮುದಾಯ ಹತ್ತು ಹಲವು ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಾಯಕ ಸಮುದಾಯ ಬಲಿಷ್ಠವಾಗಿ ಸಂಘಟನೆಯಾದರೆ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ಮಹರ್ಷಿ ವಾಲ್ಮೀಕಿ ಪ್ರಬುದ್ಧ ವೇದಿಕೆ ವತಿಯಿಂದ ಪೈಲ್ವಾನ್ ಚಿಕ್ಕಬಸವಯ್ಯ ಫಂಕ್ಷನ್ ಹಾಲ್ ನಲ್ಲಿ ಏರ್ಪಡಿಸಿದ 2026 ನೇ ಹೊಸ ವರ್ಷದ ಕ್ಯಾಲೆಂಡರ್ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಪ್ರಬುದ್ಧ ವೇದಿಕೆ ಮೈಸೂರು ಭಾಗದಲ್ಲಿ ನಾಯಕ ಸಮುದಾಯ ಹತ್ತು ಹಲವು ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದೆ. ಪರಿವಾರ ಇತ್ತೀಚಿಗೆ ಎಸ್ಟಿ ಗೆ ಸೇರಿದ್ದು ಆ ಸಮುದಾಯಕ್ಕೆ ಸಿಕ್ಕ ನ್ಯಾಯವಾಗಿದೆ. ರಾಜಕೀಯವಾಗಿ ಸಮುದಾಯ ಮುಂದೆ ಬರಬೇಕಿದೆ. ಇಂತಹ ಸಂಘ ಸಂಸ್ಥೆಯು ಶಿಕ್ಷಣ, ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು, ನಾಯಕ ಸಮುದಾಯದ ಪ್ರತಿಸಲ ರಾಜಕೀಯವಾಗಿ ನನಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಾ ಬರುತ್ತಿದೆ ಅವರ ಋಣ ಸದಾ ನನ್ನ ಮೇಲಿದೆ. ನಾನು ಯಾವುದೇ ಸಂದರ್ಭದಲ್ಲಿ ನಿಮ್ಮ ಸಮುದಾಯ ಜೊತೆ ಇರುತ್ತೇನೆ. ಈ ವೇದಿಕೆಗೆ ಮಾರ್ಗದರ್ಶನ ಮಾಡುತ್ತಿರುವವರು ತುಂಬಾ ಪ್ರಬುದ್ಧರು ಎಂದು ಅವರು ಹೇಳಿದರು.ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಜಂಗಲ್ ರೆಸಾರ್ಟ್ ಮಾಜಿ ಅಧ್ಯಕ್ಷ ಅಪ್ಪಣ್ಣ ಮಾತನಾಡಿ, ನಾಯಕ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ. ಉನ್ನತ ಶಿಕ್ಷಣ ತರಬೇತಿ ಕೇಂದ್ರ, ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರ ನಡೆಯಬೇಕು, ಅದಕ್ಕಾಗಿ ಮುಖ್ಯಮಂತ್ರಿಗಳು ಐದು ಎಕರೆ ಭೂಮಿಯನ್ನು ನಮ್ಮ ಸಮುದಾಯಕ್ಕೆ ನೀಡಿದ್ದಾರೆ. ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ರಾಜಕೀಯವಾಗಿ ಬೆಳೆಯಲು ಕಷ್ಟವಾಗುತ್ತಿದೆ ರಾಜಕೀಯವಾಗಿ ಬೆಳೆದಿರುವ ಸಮುದಾಯ ನಮ್ಮಂತಹ ತಳ ಸಮುದಾಯದವರನ್ನು ಬೆಳೆಸಬೇಕೆಂದು ಅವರು ಹೇಳಿದರು.
ತೆರಿಗೆ ಇಲಾಖೆ ಉಪ ಆಯುಕ್ತರಾದ ಮಂಜುನಾಥ್, ಉದ್ಯಮಿ ನಿಂಗರಾಜ ಎನ್. ಬೆಳತ್ತೂರು, ರಾಜ್ಯ ಎಸ್ಸಿ, ಎಸ್ಟಿ ಉದ್ಯಮ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ ಮಾತನಾಡಿದರು.ನಿಂಗರಾಜು ಧನಗನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗುಂಡ್ಲುಪೇಟೆ ಮಲ್ಲೇಶ್, ನಗರಪಾಲಿಕೆ ಮಾಜಿ ಸದಸ್ಯೆ ಶೋಭಾ ಮೋಹನ್, ವಕೀಲ ಲೋಕೇಶ್, ಮಾದೇಶ, ನಟರಾಜು, ಡಿವೈಎಸ್ಪಿ ಮಲ್ಲೇಶ್, ಮಹದೇವ ಇದ್ದರು.
------------