ಒತ್ತಡ ನಿರ್ವಹಣೆ ಕಲಿಕೆ ಅನಿವಾರ್ಯ

| Published : Apr 19 2025, 01:58 AM IST

ಸಾರಾಂಶ

ತ್ರಜ್ಞಾನ ಮತ್ತು ಆಧುನಿಕ ಬದುಕಿನ ವರ್ತಮಾನದಲ್ಲಿ ಯುವಜನತೆ ಮತ್ತು ಉದ್ಯೋಗಿಗಳು ಗೃಹಿಣಿಯರು, ಕೌಟುಂಬಿಕ ನಿರ್ವಹಣೆ ಮತ್ತು ಉದ್ಯೋಗ ನಿರ್ವಹಣೆ

- - ಪ್ರೊ. ಲ್ಯಾನ್ಸಿ ಡಿಸೋಜಾ ಅಭಿಮತಕನ್ನಡಪ್ರಭ ವಾರ್ತೆ ಮೈಸೂರು

ವರ್ತಮಾನದ ಜಗತ್ತಿನಲ್ಲಿ ಪ್ರತಿಯೊಬ್ಬರು ಒತ್ತಡದ ಬದುಕಿನ ನಡುವೆ ಜೀವಿಸುವಂಥಾಗಿರುವ ಸಂದರ್ಭದಲ್ಲಿ ಒತ್ತಡ ನಿರ್ವಹಣೆ ಕಲಿಕೆಯ ಅನಿವಾರ್ಯತೆ ಇದೆ ಎಂದು ಮಹಾರಾಜ ಕಾಲೇಜು ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಲ್ಯಾನ್ಸಿ ಡಿಸೋಜಾ ತಿಳಿಸಿದರು.ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನಲ್ಲಿ ಸುಖಿ ಜೀವನಕ್ಕಾಗಿ ಗೃಹ ನಿರ್ವಹಣೆ ಎಂಬ ಸದುದ್ದೇಶದ ಪ್ರಮಾಣಿಕೃತ ಕಾರ್ಯಕ್ರಮದ ಉಪನ್ಯಾಸ ಮಾಲಿಕೆಯಲ್ಲಿ ಸುಖಿ ಜೀವನಕ್ಕಾಗಿ ಅಂಗೀಕ ಭಾಷೆ ಮತ್ತು ಒತ್ತಡ ನಿರ್ವಹಣೆ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.ತಂತ್ರಜ್ಞಾನ ಮತ್ತು ಆಧುನಿಕ ಬದುಕಿನ ವರ್ತಮಾನದಲ್ಲಿ ಯುವಜನತೆ ಮತ್ತು ಉದ್ಯೋಗಿಗಳು ಗೃಹಿಣಿಯರು, ಕೌಟುಂಬಿಕ ನಿರ್ವಹಣೆ ಮತ್ತು ಉದ್ಯೋಗ ನಿರ್ವಹಣೆಯಲ್ಲಿ ಬಹಳಷ್ಟು ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಸಮತೋಲನವಾದ ನಿರ್ವಹಣೆ ಮಾಡಿಕೊಳ್ಳದಿದ್ದರೆ ಯಶಸ್ಸು ಮತ್ತು ಪ್ರಗತಿ ಸಾಧ್ಯವಿಲ್ಲ ಎಂದರು.ಆದ್ದರಿಂದ ಕೌಶಲ್ಯ ಆಧಾರಿತ ಶಿಕ್ಷಣ ಜೊತೆಗೆ ಯೋಗ, ಧ್ಯಾನ, ಸಂಗೀತ, ಕ್ರೀಡೆ, ಸಾಹಿತ್ಯ ಚಟುವಟಿಕೆಗಳು, ಪ್ರವಾಸ ಮುಂತಾದ ಅಭಿರುಚಿಗಳನ್ನು ರೂಪಿಸಿ, ಕೌಟುಂಬಿಕ ಬಾಂಧವ್ಯಗಳನ್ನು ವೃದ್ಧಿಸಿಕೊಳ್ಳುವುದರೊಂದಿಗೆ ಒತ್ತಡ ನಿರ್ವಹಣೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ನಾವು ಮಾತನಾಡುವ ಭಾಷೆಯ ಜೊತೆಗೆ ಅಂಗೀಕ ಮತ್ತು ದೈಹಿಕ ಭಾಷೆ ಬಹಳ ಮುಖ್ಯವಾದದ್ದು, ಇದು ನಮ್ಮ ವರ್ತನೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಲಿಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಕಾಲೇಜಿನ ಹೋಂ ಮ್ಯಾನೇಜ್ಮೆಂಟ್ ಸಮಿತಿ ಸಂಚಾಲಕ ಬಿ.ಎನ್. ಮಾರುತಿಪ್ರಸನ್ನ, ಸದಸ್ಯರಾದ ಕಾವ್ಯ, ಭವ್ಯಶ್ರೀ ಭಟ್ ಮೊದಲಾದವರು ಇದ್ದರು.