ಬನ್ನೂರು ರಾಜು ಸಾತ್ವಿಕ ಚಿಂತನೆಯ ಸಾಹಿತಿ: ಡಾ.ಎಸ್. ಶಿವರಾಜಪ್ಪ

| Published : Apr 22 2024, 02:02 AM IST

ಸಾರಾಂಶ

ಬನ್ನೂರು ರಾಜು ಅವರು ಎಲೆ ಮರೆಕಾಯಿ ರೀತಿ ಇದ್ದುಕೊಂಡೇ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದರೂ ಅವರನ್ನು ನಾಡು ಸರಿಯಾದ ರೀತಿ ಗುರುತಿಸದಿರುವುದು ದುರಂತ. ಅವರು ನೂರಾರು ಕೃತಿಗಳನ್ನು ರಚಿಸಿದ್ದಾರೆ. ಸಾವಿರಾರು ಲೇಖನಗಳನ್ನು ಬರೆದಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಬನ್ನೂರು ಕೆ. ರಾಜು ಅವರು ಸಾತ್ವಿಕ ಚಿಂತನೆಯ ಸಾಹಿತಿ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್. ಶಿವರಾಜಪ್ಪ ಬಣ್ಣಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಾಜು ಅವರ ಸ್ನೇಹಿತರು ಹಾಗೂ ಹಿತೈಷಿಗಳು ಏರ್ಪಡಿಸಿದ್ದ ಸಾಹಿತಿ ಬನ್ನೂರು ಕೆ. ರಾಜು ಅಭಿನಂದನಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಬನ್ನೂರು ರಾಜು ಅವರು ಎಲೆ ಮರೆಕಾಯಿ ರೀತಿ ಇದ್ದುಕೊಂಡೇ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದರೂ ಅವರನ್ನು ನಾಡು ಸರಿಯಾದ ರೀತಿ ಗುರುತಿಸದಿರುವುದು ದುರಂತ. ಅವರು ನೂರಾರು ಕೃತಿಗಳನ್ನು ರಚಿಸಿದ್ದಾರೆ. ಸಾವಿರಾರು ಲೇಖನಗಳನ್ನು ಬರೆದಿದ್ದಾರೆ ಎಂದರು.

ಇದೇ ವೇಳೆ ಸಾಹಿತಿ ಬನ್ನೂರು ಕೆ. ರಾಜು ಹಾಗೂ ಅವರ ಪತ್ನಿ ಮಹಾಲಕ್ಷ್ಮೀ ಅವರನ್ನು ಅಭಿನಂದಿಸಲಾಯಿತು.

ಸಾಹಿತಿ ಡಾ.ಕೆ. ಲೀಲಾ ಪ್ರಕಾಶ್, ಸಮಾಜ ಸೇವಕ ಕೆ. ರಘುರಾಂ,

ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಮಾತನಾಡುವ ಗೊಂಬೆ ಕಲಾವಿದೆ ಸುಮಾ ರಾಜ್ ಕುಮಾರ್, ನಟ ಸುಪ್ರೀತ್, ರಮೇಶ್ ಗೌಡ, ಎಚ್.ಎನ್. ಸ್ವಾಮಿ, ಜಬಿ, ಜಿ.ಕೆ. ಕುಮಾರ್ ಗೌಡ, ನಾಗೇಂದ್ರಗೌಡ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಕಾವೇರಿ ಬಳಗದ ಎನ್.ಕೆ. ಕಾವೇರಿಯಮ್ಮ, ಕನ್ನಡ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಎಸ್. ಬಾಲಕೃಷ್ಣ ಮೊದಲಾದವರು ಇದ್ದರು.