ಮೈಸೂರು ವಿಭಾಗ ಮಟ್ಟದ ಬಾಲಕ ಬಾಲಕಿಯರ ಬ್ಯಾಂಡ್ ಸ್ಪರ್ಧೆಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ಕುಶಾಲನಗರ : ಮೈಸೂರು ವಿಭಾಗ ಮಟ್ಟದ ಬಾಲಕ ಬಾಲಕಿಯರ ಬ್ಯಾಂಡ್ ಸ್ಪರ್ಧೆಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.ಕೊಡಗು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕುಶಾಲನಗರ ಫಾತಿಮಾ ಪ್ರೌಢ ಶಾಲೆಯ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬ್ಯಾಂಡ್ ಸ್ಪರ್ಧೆ ಹಿನ್ನೆಲೆಯಲ್ಲಿ ತಂಡದ ಸದಸ್ಯರು ಕುಶಾಲನಗರ ಪಟ್ಟಣದಲ್ಲಿ ಮೆರವಣಿಗೆ ತೆರಳಿದರು.

ಈ ಸಂದರ್ಭ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವಿಭಾಗ ಮಟ್ಟದ 5 ಬಾಲಕರ ತಂಡ ಮತ್ತು 2 ಬಾಲಕಿಯರ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ಯಾರಂಟಿ ಯೋಜನೆಗಳ ರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ವಿಪಿ ಶಶಿಧರ್ ಫಾತಿಮಾ ಪ್ರೌಢಶಾಲೆ ವ್ಯವಸ್ಥಾಪಕ ಫಾದರ್ ಜ್ಞಾನ ಪ್ರಕಾಶ್, ಹೆಬ್ಬಾಲೆ ರಂಜನ್, ಇರ್ಫಾನ್, ಶಿಕ್ಷಕರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಅಧಿಕಾರಿಗಳು ಪಾಲ್ಗೊಂಡಿದ್ದರು.