ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪೌರಾಣಿಕ ನಾಟಕಗಳು ಜೀವನದ ಪ್ರತಿಬಿಂಬವಾಗಿದ್ದು, ಸತ್ಯಕ್ಕೆ ಎಂದಿಗೂ ಸಾವಿಲ್ಲ, ನ್ಯಾಯಕ್ಕೆ ಜಯ ಎಂಬ ಸಂದೇಶ ಸಾರುತ್ತಿವೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ಪಟ್ಟಣದ ಪರಸಭೆಯ ಮೈದಾನದಲ್ಲಿ ಕರ್ನಾಟಕ ರತ್ನ ಡಾ.ರಾಜಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ಮಂಡ್ಯ ಜಿಲ್ಲಾ ಶಾಖೆ ಉದ್ಘಾಟನೆ ಅಂಗವಾಗಿ ಪರಿಷತ್ತಿನ ಕಲಾವಿದರು ಅಭಿನಯಿಸಿದ ಶಿವಭಕ್ತ ಚಂಡಾಸುರ ಅಥವಾ ಹೇಮಾವತಿ ಪರಿಣಯ ಎಂಬ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿ ಸುತ್ತ ಮುತ್ತಲಿನಲ್ಲಿ ವಾಸಿಸುವ ಜನರ ಜೀವನದ ಮೌಲ್ಯಗಳನ್ನು ಪಾತ್ರಧಾರಿಗಳ ಮೂಲಕ ಕಾಣುತ್ತಿರುವ ನಾವು ಸತ್ಯಕ್ಕೆ ಎಂದಿಗೂ ಸಾವಿಲ್ಲ, ಅನ್ಯಾಯ, ಅಕ್ರಮಗಳು ಹೆಚ್ಚು ದಿನಗಳು ಉಳಿಯುವುದಿಲ್ಲ ಎಂಬ ಅಂಶ ಕಾಣುತ್ತಿದ್ದೇವೆ ಎಂದರು.ನಾವು ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗುವ ಮೂಲಕ ಗುರಿ ಮುಟ್ಟೋಣ. ಮೋಸ, ವಂಚನೆಗಳಿಂದ ದೂರವಿರಬೇಕು ಎಂಬ ಸಂದೇಶ ನೀಡವು ನಾಟಕಗಳಲ್ಲಿರುವ ಅಂಶಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಮಹಿಳಾ ಕಲಾವಿದರು ಹಾಗೂ ಮಹಿಳಾ ಕಲಾವಿದರು ಒಗ್ಗೂಡಿ ಪ್ರದರ್ಶಿಸಿದ ನಾಟಕ ಕಲಾ ರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಪುರುಷ ಪಾತ್ರಗಳನ್ನು ಅಭಿನಯಿಸಿ ಮಹಿಳಾ ಕಲಾವಿದರು ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರರಾದರು.ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಮುಖಂಡರಾದ ಶೀಳನೆರೆ ಮೋಹನ್, ಸಿದ್ದೇಶ್, ಬಸ್ತಿ ರಂಗಪ್ಪ, ಕಡ್ಲೆಕಾಯಿ ಕೃಷ್ಣ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಡಾ.ರಾಜಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ರಾಜ್ಯಾಧ್ಯಕ್ಷ ಪರಶುರಾಮ್ ಗೊರಪ್ಪರವರ್, ರಾಜ್ಯ ಉಪಾಧ್ಯಕ್ಷ ಸಿ.ಆರ್. ಪುಟ್ಟರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಯಲ್ಲೇಶ್, ಜಿಲ್ಲಾ ಗೌರವಾಧ್ಯಕ್ಷ ಸಿ.ಬಿ.ಸುನಿಲ್ ಕುಮಾರ್, ಜಿಲ್ಲಾ ಅಧ್ಯಕ್ಷ ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸರಸ್ವತಿ ಸೇರಿದಂತೆ ಹಲವರು ಇದ್ದರು.