ಸಾರಾಂಶ
ಪೌರಾಣಿಕ ನಾಟಕಗಳು ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಸಂದೇಶವನ್ನು ಸಮಾಜಕ್ಕೆ ನೀಡುವ ಜೊತೆಗೆ ಒಬ್ಬ ಮನುಷ್ಯ ಹೇಗೆ ಜೀವನ ನಡೆಸಬೇಕು ಎಂಬ ಸಂದೇಶವನ್ನು ನಾಟಕಗಳಲ್ಲಿ ಬರುವ ಪಾತ್ರಗಳು ತಿಳಿಸಿಕೊಡುತ್ತವೆ. ಪೌರಾಣಿಕ ನಾಟಕಗಳು ನಮ್ಮ ನಿಜ ಜೀವನದ ಪ್ರತಿಬಿಂಬವಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಮಾಯಣ-ಮಹಾಭಾರತದಂತಹ ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬವಾಗಿವೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಡಾ.ರಾಜಕುಮಾರ್ ಕಲಾ ಸಂಘವು ಆಯೋಜಿಸಿರುವ 21 ದಿನಗಳ ಪೌರಾಣಿಕ ನಾಟಕೋತ್ಸವದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪೌರಾಣಿಕ ನಾಟಕಗಳು ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಸಂದೇಶವನ್ನು ಸಮಾಜಕ್ಕೆ ನೀಡುವ ಜೊತೆಗೆ ಒಬ್ಬ ಮನುಷ್ಯ ಹೇಗೆ ಜೀವನ ನಡೆಸಬೇಕು ಎಂಬ ಸಂದೇಶವನ್ನು ನಾಟಕಗಳಲ್ಲಿ ಬರುವ ಪಾತ್ರಗಳು ತಿಳಿಸಿಕೊಡುತ್ತವೆ ಎಂದರು.
ಪೌರಾಣಿಕ ನಾಟಕಗಳು ನಮ್ಮ ನಿಜ ಜೀವನದ ಪ್ರತಿಬಿಂಬವಾಗಿದೆ. ನಮ್ಮ ಸುತ್ತಮುತ್ತಲಿನ ಕುತಂತ್ರಿಗಳ ಬಗ್ಗೆ ಎಚ್ಚರವಾಗಿರುವಂತೆ ಜಾಗೃತಿ ಮೂಡಿಸುವ ಪಾತ್ರಗಳು ಪೌರಾಣಿಕ ನಾಟಕದಲ್ಲಿ ನಮ್ಮ ಕಣ್ಣು ಮುಂದೆ ಬರುತ್ತವೆ ಎಂದರು.ಡಾ.ರಾಜಕುಮಾರ್ ಕಲಾ ಸಂಘದ ನೇತೃತ್ವ ವಹಿಸಿರುವ ಎಲ್.ಐ.ಸಿ.ಕುಮಾರ್, ಜೈಭುವನೇಶ್ವರಿ ರಂಗಕಲಾ ಸಂಘದ ಅಧ್ಯಕ್ಷ ಡಾ. ಕೆ.ಎನ್.ತಮ್ಮಯ್ಯ ಹಾಗೂ ವಿಶ್ರಾಂತ ಶಿಕ್ಷಕ ಶಂಕರೇಗೌಡರು, ಕಲಾವಿದರನ್ನು ಒಗ್ಗೂಡಿಸಿ ರಾಜ್ಯದ ವಿವಿಧ ಭಾಗಗಳಿಂದ ಪೌರಾಣಿಕ ನಾಟಕ ತಂಡಗಳನ್ನು ಆಹ್ವಾನಿಸಿ 21 ದಿನಗಳ ಕಾಲ ಸತತವಾಗಿ ನಾಟಕಗಳ ಪ್ರದರ್ಶನ ನಡೆಸುವ ಮೂಲಕ ರಂಗಭೂಮಿ ಚಟುವಟಿಕೆಗಳನ್ನು ಜೀವಂತವಾಗಿರಿಸಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಟಿಎಪಿಸಿಎಂಎಸ್ ಸಂಸ್ಥೆ ನೂತನ ಅಧ್ಯಕ್ಷ ತೆರ್ನೇನಹಳ್ಳಿ ಬಲದೇವ್, ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯ ಶೀಳನೆರೆ ಸಿದ್ದೇಶ್, ಮಾದೇಗೌಡ ಆಸ್ಪತ್ರೆ ವ್ಯವಸ್ಥಾಪಕ ಬೋರೇಗೌಡ, ಶೀಳನೆರೆ ಗ್ರಾಪಂ ಉಪಾಧ್ಯಕ್ಷ ಎಸ್.ಕೆ.ಪ್ರಕಾಶ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಎಸ್.ಎಲ್.ಮೋಹನ್, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೇಗೌಡ, ಹಿರಿಯ ರಂಗಭೂಮಿ ಕಲಾವಿದರಾದ ಹರಿಹರಪುರ ಮಹದೇವೇಗೌಡ, ಕೆ.ಕೆ.ಕೃಷ್ಣ, ಕಾಳಪ್ಪ, ಎಚ್.ಕೆ.ಸಿದ್ದರಾಜು, ಅಗ್ರಹಾರಬಾಚಹಳ್ಳಿ ಶಬ್ಬೀರ್ ಅಹಮದ್, ಮಡುವಿನಕೋಡಿ ಚಂದ್ರಶೇಖರ್, ಅಗ್ರಹಾರಬಾಚಹಳ್ಳಿ ಗ್ರಾಪಂ ಅಧ್ಯಕ್ಷ ಎ.ಸಿ.ದಿವಿಕುಮಾರ್, ಸದಸ್ಯ ಆರ್.ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))