ಸಾರಾಂಶ
ರಾಜ್ಯಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟಕ್ಕೆ ಭವನ್ಸ್ ಗೀತಾ ವಿದ್ಯಾಲಯದ ಎನ್.ಜಗನ್ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ರಾಜ್ಯಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ 14 ವರ್ಷ ಒಳಪಟ್ಟ ಬಾಲಕರ ವಿಭಾಗದಲ್ಲಿ ಕೊಳ್ಳೇಗಾಲದ ಭವನ್ಸ್ ಗೀತಾ ವಿದ್ಯಾಲಯದ ಎನ್.ಜಗನ್ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಭವನ್ಸ್ ಗೀತಾ ವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.ಪಟ್ಟಣದ ಭವನ್ಸ್ ಗೀತಾ ವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಬರ್ಚಿ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಜಗನ್ ಎಂಬ ಬಾಲಕನಿಗೆ ಶಾಲು, ಹಾರ ಹೊದಿಸಿ ಫಲಪುಷ್ಪ ನೀಡುವ ಮೂಲಕ ಅಭಿನಂದಸಿದರು. ಸನ್ಮಾನಿಸಿದ ಬಳಿಕ ಮಾತನಾಡಿದ ಬಿಇಒ ಮಂಜುಳಾ ಅವರು, ಇತ್ತೀಚಿಗೆ ನಡೆದ ರಾಜ್ಯಮಟ್ಟದ ವಿಶೇಷ ಚೇತನ ಕ್ರೀಡಾಕೂಟದಲ್ಲಿ ಜಗನ್ ಎಂಬ ವಿದ್ಯಾರ್ಥಿ ಭಾಗವಹಿಸಿ ಗೆಲುವು ಸಾಧಿಸುವ ಮೂಲಕ ಭವನ್ಸ್ ಗೀತಾ ವಿದ್ಯಾಲಯ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಜಗನ್ ರಾಷ್ಟ್ರಮಟ್ಟದಲ್ಲಿಯೂ ಗೆಲುವು ಸಾಧಿಸುವ ಮೂಲಕ ರಾಜ್ಯ, ಜಿಲ್ಲೆ, ವಿದ್ಯಾಭ್ಯಾಸ ಮಾಡುವ ಶಾಲೆಗೆ ಹೆಸರು ತರಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಕ ಪರೀವೀಕರು ಸ್ಟೀವನ್, ಭವನ್ಸ್ ಗೀತಾ ವಿದ್ಯಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಸಿ.ಚನ್ನಮಾದೇಗೌಡ, ಸದಸ್ಯರು ಕೆ.ಸಿ.ರಾಮಯ್ಯ, ಮುಖ್ಯ ಶಿಕ್ಷಕಿ ಮಹೇಶ್ವರಿ, ದೈಹಿಕ ಶಿಕ್ಷಣ ಶಿಕ್ಷಕ ಧರ್ಮೇಂದ್ರ, ಶಾಲಾ ಶಿಕ್ಷಕರು, ತಾಲ್ಲೂಕು ದೈಹಿಕ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.