ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿಗೆ ನಾಡಗೌಡ ಅಧ್ಯಕ್ಷ, ಇಜೇರಿ ಉಪಾಧ್ಯಕ್ಷ

| Published : Aug 19 2024, 12:52 AM IST

ಸಾರಾಂಶ

ಬಸವನಬಾಗೇವಾಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನಗಳು ರಾಜೀನಾಮೆಯಿಂದ ತೆರುವಾದ ಹಿನ್ನೆಲೆಯಲ್ಲಿ ಶನಿವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮರೇಶ ಹಣಮಂತ್ರಾಯ ನಾಡಗೌಡ, ಉಪಾಧ್ಯಕ್ಷರಾಗಿ ಬಿ.ಎಸ್.ಇಜೇರಿ ಅವರು ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ನಜೀರಅಹ್ಮದ್‌ ಅವಟಿ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದಲ್ಲಿರುವ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನಗಳು ರಾಜೀನಾಮೆಯಿಂದ ತೆರುವಾದ ಹಿನ್ನೆಲೆಯಲ್ಲಿ ಶನಿವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮರೇಶ ಹಣಮಂತ್ರಾಯ ನಾಡಗೌಡ, ಉಪಾಧ್ಯಕ್ಷರಾಗಿ ಬಿ.ಎಸ್.ಇಜೇರಿ ಅವರು ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ನಜೀರಅಹ್ಮದ್‌ ಅವಟಿ ಘೋಷಿಸಿದರು.

ಈ ಎರಡು ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರು. ೨೦೨೪-೨೫ನೇ ಸಾಲಿಗೆ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ಅಮರೇಶ ಹಣಮಂತ್ರಾಯ ನಾಡಗೌಡ, ಬಿ.ಎಸ್.ಇಜೇರಿ ಅವರನ್ನು ಸೊಸೈಟಿಯ ನಿರ್ದೇಶಕರು, ನಿವೃತ್ತ ಶಿಕ್ಷಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕರಾದ ಎಸ್.ಜಿ.ಮೊಕಾಶಿ, ಎಸ್.ಜಿ.ಪಾಟೀಲ ಮಾತನಾಡಿ, ನಮ್ಮ ಕಾಲಾವಧಿಯಲ್ಲಿ ಅಮರೇಶ ನಾಡಗೌಡ ಅವರ ತಂದೆ ನಿವೃತ್ತ ಶಿಕ್ಷಕ ದಿ.ಎಚ್.ಎ.ನಾಡಗೌಡ ಸೇರಿದಂತೆ ನಾವು ಹಾಗೂ ಅನೇಕರು ಸೊಸೈಟಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದಿ.ಎಚ್.ಎ.ನಾಡಗೌಡ ಅವರು ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಜೊತೆಗೆ ಸಮಸ್ತ ಶಿಕ್ಷಕರ ಬಾಂಧವರ ಸಹಕಾರದೊಂದಿಗೆ ಸೊಸೈಟಿಗೆ ಪ್ರಗತಿಗೆ ಸೇವೆ ಸಲ್ಲಿಸುವ ಮೂಲಕ ಸೊಸೈಟಿಯ ಪ್ರಗತಿಗೆ ನಾಂದಿ ಹಾಡಿದ್ದಾರೆ. ಇದೀಗ ಅವರ ಪುತ್ರ ಸೊಸೈಟಿಯ ಅಧ್ಯಕ್ಷರಾಗಿರುವುದು ಶ್ಲಾಘನೀಯ. ಇವರ ಕಾಲಾವಧಿಯಲ್ಲಿಯೂ ಸೊಸೈಟಿ ಪ್ರಗತಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಚ್.ಬಿ.ಬಾರಿಕಾಯಿ, ಎ.ಎಂ.ಹಳ್ಳೂರ, ಸಿ.ಜಿ.ಹೂಗಾರ, ಬಿ.ಡಿ.ಕುಂಬಾರ, ಆರ್‌.ಡಿ.ಪವಾರ, ಐ.ಎಂ.ಇಂಡಿ, ಸಿ.ಟಿ.ಮಾದರ, ವೈ.ಎಂ.ಬೇವೂರ, ನಿವೃತ್ತ ಮುಖ್ಯಶಿಕ್ಷಕ ಶರಣಪ್ಪ ಮಾದರ, ಶಿಕ್ಷಕರಾದ ಪಿ.ವೈ,ರತ್ನಾಕರ, ಜಿ.ಎಂ.ನಾವಿ, ಮುಖ್ಯಕಾರ್ಯನಿರ್ವಾಹಕ ಬಿ.ವೈ.ವಡವಡಗಿ ಇತರರು ಇದ್ದರು.