ಸಾರಾಂಶ
ಕೆಂಪೇಗೌಡರು ದೂರದೃಷ್ಟಿಯಿಂದ ಕಟ್ಟಿದ ಬೆಂಗಳೂರು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಶೇ. 54 ಆದಾಯ ಗಳಿಸುವ ನಗರವಾಗಿ ಮಾರ್ಪಾಡು ಹೊಂದಿರುತ್ತದೆ,
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ರೇಲ್ವೆ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ನಾಡಪ್ರಭು ಶ್ರೀ ಕೆಂಪೇಗೌಡ ಅವರ 516ನೇ ಜಯಂತಿ ಆಚರಿಸಲಾಯಿತು.ಬ್ಯಾಂಕಿನ ಅಧ್ಯಕ್ಷ ಎಂ.ಬಿ. ಮಂಜೇಗೌಡ ಮಾತನಾಡಿ, ಕೆಂಪೇಗೌಡರು ದೂರದೃಷ್ಟಿಯಿಂದ ಕಟ್ಟಿದ ಬೆಂಗಳೂರು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಶೇ. 54 ಆದಾಯ ಗಳಿಸುವ ನಗರವಾಗಿ ಮಾರ್ಪಾಡು ಹೊಂದಿರುತ್ತದೆ, ಕೆಂಪೇಗೌಡರ ಆರ್ಥಿಕ ದೂರದೃಷ್ಟಿಯನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಿರುತ್ತಾರೆಂದು ಅವರ ಆದರ್ಶ ನಮ್ಮ ಬ್ಯಾಂಕಿ ಏಳಿಗೆಗೆ ಅನ್ವಿಯಿಸುವಂತೆ ಮಾರ್ಪಾಡು ಮಾಡಿ ಬ್ಯಾಂಕಿನ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುವುದನ್ನು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಎಸ್. ಆನಂದ, ನಿರ್ದೇಶಕರಾದ ಹನುಮಂತ, ಎಂ.ಬಿ. ಯೋಗಾನಂದ, ಎಸ್. ಮುತ್ತುಕುಮಾರ್, ಆರ್. ಚಂದ್ರಶೇಖರ, ಎಂ. ಯತಿರಾಜು, ಸಿ. ರಾಮನಾದನ್, ಸಿ.ಎಚ್. ಮಂಜುನಾಥ, ಸಿ. ಶಿವಶಂಕರ್, ಎಸ್. ಉತ್ತೇಜ್, ಎಸ್. ಶ್ವೇತಾ, ಸಿ. ನಿರ್ಮಲಾ, ಪಿ. ಚಂದ್ರಶೇಖರ್, ಎನ್.ಎಸ್. ನಂದಕುಮಾರ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಧಾನ ವ್ಯವಸ್ಥಾಪಕ, ಸಿಬ್ಬಂದಿ ವರ್ಗದರವರು, ಸದಸ್ಯರು ಹಾಗೂ ಠೇವಣಿದಾರರು ಇದ್ದರು.