ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಜಗದ್ವಿಖ್ಯಾತ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಎನ್ನುವ ಹೆಸರಿಗೆ ಅನ್ವರ್ಥರಾಗಿದ್ದರು ಅವರ ಆಡಳಿತ, ಸಾಧನೆ ನಮಗೆಲ್ಲರಿಗೂ ಮಾದರಿಯಾಗಿದೆ ಎಂದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ಬಿ.ಹೆಚ್. ರಸ್ತೆಯಲ್ಲಿರುವ ಎ.ಪಿ.ಎಂ.ಸಿ.ಯಾರ್ಡ್ ಸಮೀಪದಲ್ಲಿರುವ ವೃತ್ತಕ್ಕೆ ಕೆಂಪೇಗೌಡ ವೃತ್ತವೆಂದು ನಾಮಕರಣವನ್ನು ಶನಿವಾರ ಕೆಂಪೇಗೌಡ ಸಾಂಸ್ಖೃತಿಕ ವೇದಿಕೆ ಮತ್ತು ತಾಲ್ಲೂಕು ಆಡಳಿತ ಕಚೇರಿರವರ ವತಿಯಿಂದ ವೃತ್ತದ ಬಳಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯಲ್ಲಿ ಅರು ಮಾತನಾಡಿದರು.
ನಾಡಪ್ರಭುವಿನ ಜಾತ್ಯತೀತ ಪರಿಕಲ್ಪನೆಬೆಂಗಳೂರಿನಲ್ಲಿ ಕೋಟೆ ಕೊತ್ತಲಗಳು, ಗವಿ ಗಂಗಾಧರೇಶ್ವರಸ್ವಾಮಿ ದೇವಾಲಯ, ದೊಡ್ಡಗಣಪತಿ ದೇವಾಲಯ, ನಾಲ್ಕು ಕಡೆಯಲ್ಲಿ ಗೋಪುರ ಕಟ್ಟಿಸುವದು ಮೊದಲಾದ ಅನೇಕ ಪ್ರಗತಿ ಕಾರ್ಯಗಳನ್ನು ಕೆಂಪೇಗೌಡರು ಮಾಡಿದ್ದಾರೆ. ವೃತ್ತಿಗೆ ತಕ್ಕಂತೆ ಪೇಟೆಗಳನ್ನು ಮಾಡುವ ಮೂಲಕ ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯ ನೀಡುತ್ತಾ ಅಂದಿನ ಕಾಲದಲ್ಲಯೇ ಜಾತ್ಯತೀತ ಪರಿಕಲ್ಪನೆ ಹೊಂದಿದ್ದರು. ಇಂತಹ ಮಹಾಪುರುಷರ ಹೆಸರನ್ನು ಗೌರಿಬಿದನೂರು ನಗರದ ಪ್ರಮುಖ ವೃತ್ತಕ್ಕೆ ನಾಮಕರಣ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ಡಾ.ನಿರ್ಮಲಾನಂದನಾಥಮಹಾಸ್ವಾಮೀಜಿ ತಿಳಿಸಿದರು. ಕೆಂಪೇಗೌಡರು ಸದಾಕಾಲಸ್ಮರಿಸುವಂತೆಕೊಡುಗೆನೀಡಿದವರು. ಅವರಸಾಧನೆಅಜರಾಮರ ಬೆಂಗಳೂರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕೆಂಪೇಗೌಡರು ಕಾಳಜಿ ತೋರಿ ನೂರಾರು ವರ್ಷಗಳ ಹಿಂದೆಯೇ ಹಲವಾರು ಕೆರೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಅವರು ಅಡಳಿತ ವೈಖರಿ ದೂರದೃಷ್ಠಿಯಿಂದಾಗಿ ಇಂದು ಬೆಂಗಳೂರು ವಿಶ್ವ ವೀಖ್ಯಾತಿ ಪಡೆದಿದೆ ಎಂದು ನಂಜಾವದೂತ ಮಹಾಸ್ವಮೀಜಿ ಹೇಳಿದರು
ಕ್ರಿಯಾಶೀಲ ಪ್ರಭು ಕೆಂಪೇಗೌಡಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆಡಳಿತದಲ್ಲಿ ನಾಡು ಅತ್ಯಂತ ಸುಭಿಕ್ಷವಾಗಿತ್ತು, ಅವರು ಕ್ರಿಯಾಶೀಲ ಪ್ರಭುಗಳಾಗಿದ್ದರು,ಪ್ರಜೆಗಳನ್ನು ತಮ್ಮ ಮಕ್ಕಳಂತೆ ಭಾವಿಸುತ್ತಿದ್ದರು. ಕೆಂಪೇಗೌಡರ ಸಾಧನೆ ಹಿಮಾಲಯ ಶಿಖರದಷ್ಟೇತ್ತರದಲ್ಲಿದೆ. ಭಾರತ ದೇಶದ ಭವ್ಯ ನಗರ ಬೆಂಗಳೂರನ್ನು ನಿರ್ಮಿಸಲು ಅವರ ಸೇವೆ ಅಪಾರ. ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲ ಕೆಂಪೇಗೌಡರು ಸ್ಥಾಪಿಸಿರುವ ನಾಲ್ಕು ಗೋಪುರಗಳು ಬೆಂಗಳೂರಿನ ಇತಿಹಾಸವನ್ನು ಸಾರುತ್ತಿವೆ ಎಂದರು.ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರುನೀಡಿದ ಕೊಡುಗೆರಾಜ್ಯದಯಾವ ಪ್ರಜೆಯೂಮರೆಯುವಂತಿಲ್ಲ. ಅಂದಿನ ಅವರಶ್ರಮ ಇಂದು ಹೆಮ್ಮರವಾಗಿ ಬೆಳೆದು ಬೆಂಗಳೂರು ವಿಶ್ವಭೂಪಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ. ಪರಿಸರ ಪ್ರೇಮವನ್ನು ಮೆರೆದಿದ್ದ ಕೆಂಪೇಗೌಡರ ಬದುಕು ಆದರ್ಶವಾಗಬೇಕು ಎಂದರು.
ಮೆರವಣಿಗೆಯಲ್ಲಿ ಸಾಂಸ್ಕೃತಿಕ ತಂಡಜಯಂತ್ಯುತ್ಸವ ಅಂಗವಾಗಿ ಪೂರ್ಣಕುಂಭ, ನಾಧಸ್ವರ-ಮಂಗಳವಾದ್ಯ, ಡೊಳ್ಳುಕುಣಿತ,ಜಾನಪದ ಕಲಾತಂಡ ಬಣ್ಣ ಬಣ್ಣದ ಧಿರಿಸು ಧರಿಸಿದ್ದ ವಿವಿಧ ಕಲಾತಂಡದ ಕಲಾವಿದರು ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕಿದರು.
ನಗರದ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಿಂದ ಆರಂಭವಾದಮೆರವಣಿಗೆ,ನಗರದ ಪ್ರಮುಖ ರಾಜಬೀಧಿಗಳಲ್ಲಿ ಮಠಾಧೀಶರು, ಪ್ರಜಾಪ್ರತಿನಿಧಿಗಳು ಮತ್ತು ಸಂಘದ ಪದಾಧಿಕಾರಿಗಳೊಂದಿಗೆ ಅದ್ಧೂರಿಯಾಗಿ ಕೆಂಪೇಗೌಡವೃತ್ತದ ಆವರಣಕ್ಕೆ ತಲುಪಿದವು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರನ್ನು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ತಹಸೀಲ್ದಾರ್ ಮಹೇಶ್. ಎಸ್.ಪತ್ರಿ, ತಾಪಂ ಇಓ ಜಿ.ಕೆ. ಹೊನ್ನಯ್ಯ, ನಗರಸಭೆ ಆಯುಕ್ತೆ ಡಿ.ಎಂ.ಗೀತಾ, ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್, ಆರ್ ಜಿ.ಜನಾರ್ದನಮೂರ್ತಿ, ಅಶ್ವತ್ಥರೆಡ್ಡಿ, ಪ್ರಭಾಕರ್ ರೆಡ್ಡಿ, ಶ್ರೀನಿವಾಸ್ ಗೌಡ, ಪ್ರಭಾ ನಾರಾಯಣಗೌಡ, ಬೊಮ್ಮಣ್ಣ, ರಾಮಚಂದ್ರರೆಡ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.