ಸಾರಾಂಶ
ಅಮೆರಿಕಾದ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಬಿಎಂಎಸ್‌ಐಟಿ ಮತ್ತು ಮ್ಯಾನೆಜ್‌ಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಉದಯಭಾನು ಗುರುತಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬಿಎಂಎಸ್‌ಐಟಿ ಮತ್ತು ಮ್ಯಾನೆಜ್‌ಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಉದಯಭಾನು ಅವರು ಅಮೆರಿಕಾದ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.ಅಂತಾರಾಷ್ಟ್ರೀಯವಾಗಿ ಪ್ರಟಕವಾದ ಸಂಶೋಧನಾ ಪ್ರಕಟಣೆಗಳು, ಉಲ್ಲೇಖಗಳು, ಸಹ ಲೇಖಕರ ಸಂಶೋಧನಾ ಪ್ರಕಟಣೆಗಳು ಮತ್ತು ಎಚ್ ಇಂಡೆಕ್ಸ್‌ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಶೇ.2 ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟನ್‌ಫೋರ್ಡ್ ವಿಶ್ವವಿದ್ಯಾಲಯವು ಇತ್ತೀಚೆಗೆ ಮಾಡಿದೆ.
ಈ ಪಟ್ಟಿಯಲ್ಲಿ ಡಾ.ಉದಯಭಾನು ಅವರ ಸಂಶೋಧನೆಯು ಮೆಟೀರಿಯಲ್ಸ್ ಫಾರ್ ಲಿತಿಯಂ ಅಯಾನ್ ಬ್ಯಾಟರಿ ಮತ್ತು ಹೈಡ್ರೋಜನ್ ಪ್ರೊಡಕ್ಷನ್ ಮೇಲೆ ಸಾಗುತ್ತಿದೆ. ಈ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಮೂಲಕ ಡಾ.ಉದಯಭಾನು ಅವರು ಜಿಲ್ಲೆಯ ಹಿರಿಮೆಗೆ ಪಾತ್ರರಾಗಿದ್ದಾರೆ.ಅಕ್ಟೋಬರ್ 14ರಂದು ಉಚಿತ ಸಾಮೂಹಿಕ ಸರಳ ವಿವಾಹ: ಗಂಗರಾಜುಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ಬುದ್ಧ ಭಾರತ್ ಫೌಂಡೇಷನ್‌ನಿಂದ ಅ.14ರಂದು ಉಚಿತ ಸಾಮೂಹಿಕ ಸರಳ ವಿವಾಹ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್‌ನ ಗಂಗರಾಜು ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾಹ ಕಾರ್‍ಯಕ್ರಮದಲ್ಲಿ ಭಾಗವಹಿಸುವ ಜೋಡಿಗಳು ಅ.10ರೊಳಗೆ ಆಧಾರ್ ಕಾರ್ಡ್, ವಯಸ್ಸಿಗೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಇತ್ತೀಚಿನ ಮೂರು ಭಾವಚಿತ್ರಗಳನ್ನು ಬುದ್ಧ ಭಾರತ್ ಫೌಂಡೇಷನ್, ಸುಂದರಪ್ಪ ಬಿಲ್ಡಿಂಗ್, ಸುಭಾಷ್ ನಗರ, 8ನೇ ಕ್ರಾಸ್, ಮಂಡ್ಯ ಇಲ್ಲಿಗೆ ಕಳುಹಿಸುವಂತೆ ಕೋರಲಾಗಿದೆ.
ಈಗಾಗಲೇ ಮೂರು ಜೋಡಿಗಳು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದು, 25 ಜೋಡಿಗಳು ವಿವಾಹ ಕಾರ್‍ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಹೆಚ್ಚಿನ ಮಾಹಿತಿಗೆ ಮೊ.9009367515, ಮೊ-9481776715 ಸಂಪರ್ಕಿಸುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ಜವರಪ್ಪ, ರಾಜಣ್ಣ, ಲೋಕೇಶ್, ಅಮ್ಜದ್‌ಪಾಷ ಇತರರು ಇದ್ದರು.