ನಾಗತವಳ್ಳಿ ಪಾರ್ಕ್‌ ಜಾಗ ಗ್ರಾಮಕ್ಕೇ ಉಳಿಯಬೇಕು

| Published : Oct 10 2024, 02:16 AM IST

ಸಾರಾಂಶ

ಹಾಸನ ನಗರದ ಹೊರವಲಯದಲ್ಲಿರುವ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ನಾಗತವಳ್ಳಿ ಗ್ರಾಮಕ್ಕೆ ಸೇರಿದ ಪಾರ್ಕ್‌ ಜಾಗ ಗ್ರಾಮಕ್ಕೆ ಉಳಿಯಬೇಕು. ಆ ಜಾಗವನ್ನು ಪಾರ್ಕ್‌ ಜಾಗ ಅಲ್ಲ ಎಂಬುದನ್ನು ಸಾಬೀತುಪಡಿಸಿದರೆ ಅದರ ತಂಟೆಗೆ ಹೋಗಲ್ಲ. ಅದರಲ್ಲಿ ಏನಾದರೂ ನನ್ನ ತಪ್ಪಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಹಾಸನ ನಗರದ ಹೊರವಲಯದಲ್ಲಿರುವ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ನಾಗತವಳ್ಳಿ ಗ್ರಾಮಕ್ಕೆ ಸೇರಿದ ಪಾರ್ಕ್‌ ಜಾಗ ಗ್ರಾಮಕ್ಕೆ ಉಳಿಯಬೇಕು. ಆ ಜಾಗವನ್ನು ಪಾರ್ಕ್‌ ಜಾಗ ಅಲ್ಲ ಎಂಬುದನ್ನು ಸಾಬೀತುಪಡಿಸಿದರೆ ಅದರ ತಂಟೆಗೆ ಹೋಗಲ್ಲ. ಅದರಲ್ಲಿ ಏನಾದರೂ ನನ್ನ ತಪ್ಪಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಸವಾಲು ಹಾಕಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಮಾತನಾಡಿ, 18 ಕೋಟಿ ರು. ಮೌಲ್ಯದ ಆಸ್ತಿಯನ್ನು ಎಷ್ಟಕ್ಕೆ ಕೊಟ್ಟಿದ್ದಾರೆ ಅಂತ‌ ಹೇಳಲಿ. ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಈ ಬಗ್ಗೆ ತನಿಖೆಗೆ ವಹಿಸಲಿ. ಕಾಂಗ್ರೆಸ್ ಬಂದಾಗ ಕಾಂಗ್ರೆಸ್ ಗೆ ಜೈ, ಬಿಜೆಪಿ ಬಂದಾಗ ಬಿಜೆಪಿಗೆ ಜೈ ಅಂತಾರೆ. ಇವರ ಬಂಡವಾಳ ಬಯಲು ಮಾಡುತ್ತೇನೆ ಎಂದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಲ್ಯಾಂಡ್ ಮಾಫಿಯಾ ಹೇಗೆ ನಡೆಯುತ್ತಿದೆ ಅಂತ ಹೇಳ್ತಿನಿ ತಡಿರಿ. ದಸರಾ ಹಬ್ಬ ಮುಗಿಯಲಿ ಎಲ್ಲಾ ಹೇಳ್ತಿನಿ. ಎಲೆಕ್ಷನ್ ಮುಗಿದು ನಾಲ್ಕು ತಿಂಗಳಾಯ್ತಲ್ಲ ಹಾಸನ ಸಂಸದರು ಹಾಗೂ ಜಿಲ್ಲಾಧಿಕಾರಿ ಏನು ಮಾಡ್ತಿದಾರೆ ಎಲ್ಲಾ ಗೊತ್ತಿದೆ. ರೈತರ ಬಳಿ‌ ಪ್ಲಾಟೆಂಷನ್ ಅರ್ಜಿ ತೆಗೆದುಕೊಂಡಿಲ್ಲ ಎಂದು ದೂರಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬದುಕಿರುವರೆಗೂ ರಾಷ್ಟ್ರ ಮಟ್ಟದಲ್ಲಿ ಹಾಸನ ಜಿಲ್ಲೆಯ ಹೆಸರು ಮಾಡಬೇಕು. ನನಗೆ ಹಾಸನ ಜಿಲ್ಲೆ ಮುಖ್ಯ. ಹತ್ತು ವರ್ಷ ನನೆಗುದಿಗೆ ಬಿದ್ದಿದ್ದ ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಂಡಿದ್ದೆ. ದುದ್ದ ರಸ್ತೆಗೆ 120 ಕೋಟಿ ರು. ಕೊಡಿಸಿದೆ. ದುದ್ದ ಮೇಲ್ಸೇತುವೆಗೆ 63 ಕೋಟಿ ರು. ಕೊಡಿಸಿದ್ದೇನೆ. ಈಗ ಮತ್ತೆ ಹಾಸನ ದುದ್ದ ರಸ್ತೆಗೆ 150 ಕೋಟಿ ರು. ವೆಚ್ಚದಲ್ಲಿ 2 ಲೈನ್‌ಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಹಾಸನ ರೈಲ್ವೆ ಮೇಲ್ಸೇತುವೆಗೆ 98 ಕೋಟಿ ರು. ಭೂ ಸ್ವಾಧೀನಕ್ಕೆ 18 ಕೋಟಿ ರು. ರಾಜ್ಯ ಸರ್ಕಾರದಿಂದ 43 ಕೋಟಿ ರು. ಕೊಡಿಸಿದ್ದೇನೆ. ರಾಜ್ಯ ತನ್ನ ಪಾಲು 25 ಕೋಟಿ ರು. ಕೊಡಬೇಕು. ಈ ಬಗ್ಗೆ ಪತ್ರ ಬರೆದರೂ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಕೊಡುತ್ತಿಲ್ಲ ಎಂದು ದೂರಿದರು.

ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ 18 ಕೋಟಿ ರು. ಹಣ ಮಂಜೂರು ಮಾಡಿಕೊಟ್ಟರೂ ಜಿಲ್ಲಾಡಳಿತ ಭೂ ಸ್ವಾಧೀನ ಮಾಡಿಕೊಟ್ಟಿಲ್ಲ. ಜಿಲ್ಲಾಧಿಕಾರಿ ಸ್ವಚ್ಛತೆ ಮಾಡ್ತೀವಿ ಅಂತ ಫೋಟೋ ಹಾಕೋದಲ್ಲ. ಜಿಲ್ಲಾಧಿಕಾರಿ ಬಡವರ ಜಾಗ ಒಡೆಸುತ್ತಾರೆ. ದೊಡ್ಡವರಿಗೆ ಹೆದರುತ್ತಾರೆ. ಭೂ ಸ್ವಾಧೀನ ಮಾಡಿ ಕೊಡದೆ ಹೋದರೆ ಡಿಸಿ ಸಹ ಶಾಮೀಲಾಗಿದ್ದಾರೆ ಎಂದುಕೊಳ್ಳಬೇಕಾಗುತ್ತದೆ ಎಂದರು.

ಸಂತ ಫಿಲೋಮೀನ ಶಾಲೆಯವರು ಪರಿಹಾರ ತೆಗೊಂಡು ಜಾಗ ಕೊಡ್ತಿಲ್ಲ ಎಂದು ಆರೋಪಿಸಿದರು. ಹಾಸನ-ಬೇಲೂರು ರೈಲ್ವೆ ಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿದೆ. ರಾಜ್ಯ ಸರ್ಕಾರದ ಸ್ಪಂದನೆ ಸಿಗುತ್ತಿಲ್ಲ. ಚಿಕ್ಕಮಗಳೂರಿನಿಂದ ಬೇಲೂರುವೆರೆಗ ಭೂ ಸ್ವಾಧೀನ ಆಗಿದೆ. ಆದರೆ ಬೇಲೂರಿನಿಂದ ಹಾಸನಕ್ಕೆ ಆಗುತ್ತಿಲ್ಲ ಎಂದು ಆರೋಪಿಸಿದರು.

ನಾನು ಒಂದು ಸಲ ಸೋತು ನಂತರ ಆರು ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಕುಮಾರಸ್ವಾಮಿ ರಾಮನಗರ,ಮಂಡ್ಯದಲ್ಲಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಿದರು. ಹಾಸನ ಜಿಲ್ಲೆಯ ರಾಜಕೀಯ ಆಮೇಲೆ ಮಾಡೋಣ, ಮೊದಲು ಹಾಸನ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.* ಬಾಕ್ಸ್‌:

ನಾವು ಮೊನ್ನೆ ಕೇಂದ್ರ ರೈಲ್ವೆ ಸಚಿವರನ್ನ ಭೇಟಿಯಾಗಿ 18 ಕೋಟಿಗೆ ಮಂಜೂರು ಮಾಡಿಸಿದ್ದೇವೆ. ಹೊಳೆನರಸೀಪುರದ ರೈಲ್ವೆ ಅಂಡರ್‌ಪಾಸ್‌ಗೆ 5 ಕೋಟಿ ರು. ದೊರೆತಿದೆ. ಮೊಸಳೆ ಹೊಸಹಳ್ಳಿಯಲ್ಲಿ 70 ಕೋಟಿ ರು. ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಿಸಲಾಗುವುದು ಎಂದು ಶಾಸಕ ರೇವಣ್ಣ ತಿಳಿಸಿದರು.