ನಾಗೇಂದ್ರ ಮಧುಗಿರಿ ತಾಲೂಕು ಮಂಡಲ ಬಿಜೆಪಿಯ ನೂತನ ಅಧ್ಯಕ್ಷ

| Published : Mar 11 2024, 01:15 AM IST

ನಾಗೇಂದ್ರ ಮಧುಗಿರಿ ತಾಲೂಕು ಮಂಡಲ ಬಿಜೆಪಿಯ ನೂತನ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಗೊಲ್ಲ ಸಮುದಾಯಕ್ಕೆ ರಾಜಕೀಯ,ಸಾಮಾಜಿಕ ಸ್ಥಾನಮಾನ ಸಿಗಬೇಕಾದರೆ ಎಲ್ಲರೂ ವಿದ್ಯಾವಂತರಾಗಬೇಕು. ನಾಗೇಂದ್ರರನ್ನು ಮಂಡಲ ಅಧ್ಯಕ್ಷರನ್ನಾಗಿ ಬಿಜೆಪಿ ವರಿಷ್ಠರು ಮಾಡಿರುವುದು ನಮ್ಮ ಜನಾಂಗಕ್ಕೆ ಶುಭ ಸೂಚನೆ, ನಮ್ಮವರು ಪಕ್ಷಾತೀತವಾಗಿ ನಮ್ಮ ಸಮುದಾಯದ ಮುಖಂಡರನ್ನು ಬೆಳೆಸಬೇಕು.

ಕನ್ನಡಪ್ರಭವಾರ್ತೆ ಮಧುಗಿರಿ

ನಾಗೇಂದ್ರ ಬೂತ್‌ ಮಟ್ಟದಿಂದ ಬಿಜೆಪಿ ಪಕ್ಷ ಸಂಘಟಿಸುವ ಮೂಲಕ ಗುರುತಿಸಿಕೊಂಡು ಪಕ್ಷದ ತತ್ವ ಸಿದ್ಧಾಂತಕ್ಕೆ ಕಟಿ ಬದ್ಧರಾಗಿ ದುಡಿದ ಪರಿಣಾಮ ಇಂದು ಪಕ್ಷ ಮಧುಗಿರಿ ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಮಧುಗಿರಿ ಜಿಲ್ಲಾ ಸಂಘಟನಾತ್ಮಕ ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಪ್ರತಾಪ್‌ ತಿಳಿಸಿದರು.

ಮಧುಗಿರಿ ತಾಲೂಕು ಗೊಲ್ಲ (ಯಾದವ) ಸಮುದಾಯದ ವತಿಯಿಂದ ಮಧುಗಿರಿ ಮಂಡಲ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕವಾದ ನಾಗೇಂದ್ರ ಅವರಿಗೆ ಯಾದವ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಗೇಂದ್ರ ಬಿಜೆಪಿ ಪಕ್ಷದಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಶ್ರಮ ವಹಿಸಿದ್ದರಿಂದ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತೇಗೌಡ ಸೇರಿದಂತೆ ವರಿಷ್ಠರು ನಾಗೇಂದ್ರ ಅವರನ್ನು ಮಧುಗಿರಿ ಮಂಡಲ ಅಧ್ಯಕ್ಷರನ್ನಾಗಿ ಮಾಡಿದ್ದು, ನಾಗೇಂದ್ರವರಿಗೆ ಗೊಲ್ಲ ಸಮುದಾಯದವರು ಎಲ್ಲರೂ ಒಗ್ಗಟ್ಟಾಗಿ ಸಹಕಾರ ನೀಡಬೇಕು ಎಂದರು.

ಗ್ರಾಪಂ ಸದಸ್ಯ ಗಂಗಾಧರಪ್ಪ ಮಾತನಾಡಿ, ನಮ್ಮ ಗೊಲ್ಲ ಸಮುದಾಯಕ್ಕೆ ರಾಜಕೀಯ,ಸಾಮಾಜಿಕ ಸ್ಥಾನಮಾನ ಸಿಗಬೇಕಾದರೆ ಎಲ್ಲರೂ ವಿದ್ಯಾವಂತರಾಗಬೇಕು. ನಾಗೇಂದ್ರರನ್ನು ಮಂಡಲ ಅಧ್ಯಕ್ಷರನ್ನಾಗಿ ಬಿಜೆಪಿ ವರಿಷ್ಠರು ಮಾಡಿರುವುದು ನಮ್ಮ ಜನಾಂಗಕ್ಕೆ ಶುಭ ಸೂಚನೆ, ನಮ್ಮವರು ಪಕ್ಷಾತೀತವಾಗಿ ನಮ್ಮ ಸಮುದಾಯದ ಮುಖಂಡರನ್ನು ಬೆಳೆಸಬೇಕು ಎಂದರು.

ಮುಖಂಡ ಈರಣ್ಣ ಮಾತನಾಡಿ, ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ದುಡಿದ ಪರಿಣಾಮ ನಾಗೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಆದ ಕಾರಣ ನಮ್ಮವರು ಪಕ್ಷಬೇಧವಿಲ್ಲದೆ ನಾಗೇಂದ್ರರವರಿಗೆ ಸಹಕರಿಸಬೇಕು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಗೇಂದ್ರ, ನಾನು ಬಿಜೆಪಿ ಪಕ್ಷದಲ್ಲಿ ಬೂತ್‌ ಮಟ್ಟದಿಂದ ಕೆಲಸ ಮಾಡಿದ್ದು ಎಲ್ಲ ಸಮಾಜದವರನ್ನು ಪ್ರೀತಿ,ವಿಶ್ವಾಸದಿಂದ ಕಂಡು ಪಕ್ಷದ ತತ್ವ, ಸಿದ್ಧಾಂತ ನಂಬಿ ಕೆಲಸ ಮಾಡಿದ ಪರಿಣಾಮ ಇಂದು ನನಗೆ ಅಧ್ಯಕ್ಷ ಸ್ಥಾನ ಸಿಕ್ಕಿದ್ದು, ನನ್ನ ಸಾಧನೆಗೆ ನಮ್ಮ ಜನಾಂಗದ ಸಹಕಾರ ಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಗ್ರಾಪಂ ಸದಸ್ಯ ಜಯಣ್ಣ,ಅಲೆಮಾರಿ ಜನಾಂಗದ ಅಧ್ಯಕ್ಷ ರಾಮು ,ಯಾದವ ಮುಖಂಡರಾದ ರವಿಯಾದವ್‌ ,ಮರಿತಿಮ್ಮನಹಳ್ಳಿ ಶಿವಕುಮಾರ್‌, ವಕೀಲ ಚಿತ್ತಯ್ಯ, ಶ್ರೀನಿವಾಸ್‌, ಸಿದ್ದಾಪುರ ರಾಮಣ್ಣ, ಜಿಲ್ಲಾ ಮಾಧ್ಯಮ ಮಿತ್ರ ರಾಮು, ಜ್ಯೋತಿ ರಾಜೇಶ್‌, ಗೋವಿಂದರಾಜು, ಎಲೆಚಿತ್ತಪ್ಪ, ಮಧು ಸೇರಿದಂತೆ ಅನೇಕರು ಇದ್ದರು.