ನಾಡಿನ ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್

| Published : Jun 08 2024, 12:32 AM IST

ನಾಡಿನ ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಸ್ವತಂತ್ರ ಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರೋಗ್ಯ, ಕೃಷಿ, ಶಿಕ್ಷಣ ಹಾಗೂ ನೀರಾವರಿ ಹರಿಕಾರರಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ದಲಿತ ಮುಖಂಡ ನವೀನ್ ತಿಳಿಸಿದರು.

ಕನಕಪುರ: ಸ್ವತಂತ್ರ ಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರೋಗ್ಯ, ಕೃಷಿ, ಶಿಕ್ಷಣ ಹಾಗೂ ನೀರಾವರಿ ಹರಿಕಾರರಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ದಲಿತ ಮುಖಂಡ ನವೀನ್ ತಿಳಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಡಳಿತಕ್ಕೆ ಒಳಪಡದೆ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿಕೊಟ್ಟು ಒಕ್ಕಲಿಗ ಮಹಾಸಭಾ, ವೀರಶೈವ ಸಂಸ್ಥಾನ ಸ್ಥಾಪನೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಇದೆ. ವಿದ್ಯಾರ್ಥಿ ವಸತಿ ನಿಲಯಗಳ ನಿರ್ಮಾಣ ಹಿಂದುಳಿದವರು, ಅಲ್ಪಸಂಖ್ಯಾತರ ಎಸ್ಸಿ ಎಸ್ಟಿ ತಳವರ್ಗದವರನ್ನು ಮೇಲೆತ್ತಿರುವ ರಾಜಕೀಯ ವ್ಯವಸ್ಥೆಯನ್ನು ನಾಲ್ವಡಿ ಅವರು ಸೃಷ್ಟಿ ಮಾಡಿ ಮಿಂಚಿ ಮರೆಯಾದ ಅಪರೂಪದ ನಾಯಕರು. ನಾಲ್ವಡಿ ಅವರ ಕೊಡುಗೆಗಳನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದರು.

ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ನಾಡಿಗೆ ಅಪಾರ ಕೊಡುಗೆ ಕೊಟ್ಟ ಕೆಲವು ರಾಜ ಮಹಾರಾಜರು ತಳ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರ ಇತಿಹಾಸ ಕಾಲ ಗರ್ಭದಲ್ಲಿ ತುಳಿಯಲಾಗಿದೆ. ದಿ. ಮಹಾರಾಜಾಸ್ ಆಪ್ ಇಂಡಿಯಾ ಗ್ರಂಥದಲ್ಲಿ ಈ ದೇಶದಲ್ಲಿ 697 ಪ್ರಾಂತ್ಯವನ್ನು ಆಳ್ವಿಕೆ ಮಾಡಿದ ರಾಜರುಗಳ ಇತಿಹಾಸ ದಾಖಲು ಮಾಡಿದ್ದಾರೆ. ಆದರೆ ಅವರೆಲ್ಲರಿಗಿಂತಲೂ ಶ್ರೇಷ್ಠವಾದ ಗುಣಾತ್ಮಕವಾದ ಆಳ್ವಿಕೆ ಮಾಡಿದ ರಾಜರನ್ನು ಗ್ರಂಥದಿಂದ ಕೈಬಿಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾಡಿನ ಹೆಮ್ಮೆಯ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದವರು ನಾಲ್ವಡಿ ಕೃಷ್ಣರಾಜ ಒಡೆಯರ್, ಕನ್ನಂಬಾಡಿ ಕಟ್ಟೆ ಕಟ್ಟಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಆದರೆ ಕೆಲ ಸಾಹಿತಿಗಳು ವಿಶ್ವೇಶ್ವರಾಯ ಅವರ ಸಾಧನೆ ಎಂದು ಬಿಂಬಿಸುತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಈ ನಾಡಿನಲ್ಲಿ ಸಾವಿರಾರು ಶಾಲೆಗಳನ್ನು ತೆರೆದು ಶಿಕ್ಷಣದ ಬೆಳಕನ್ನು ಕೊಟ್ಟಿದ್ದಾರೆ. 1902ರಲ್ಲಿ ಶಿಂಷ ಬ್ಲಪ್ ನಲ್ಲಿ ಏಷ್ಯಾ ಖಂಡದಲ್ಲಿ ಪ್ರಥಮ ಬಾರಿಗೆ ಜಲವಿದ್ಯುತ್ ಯೋಜನೆಯನ್ನು ಜಾರಿಗೆ ತಂದು ಕೆಜಿಎಫ್‌, ಬೆಂಗಳೂರು, ಮೈಸೂರಿಗೆ ವಿದ್ಯುತ್ ಪೂರೈಕೆ ಮಾಡಿದ್ದಾರೆ. ಇಷ್ಟೆಲ್ಲಾ ಕೊಡುಗೆಗಳನ್ನು ಕೊಟ್ಟ ನಾಲ್ವಡಿ ಅವರು ಜಗತ್ತಿನಾದ್ಯಂತ ಪ್ರಜ್ವಲಿಸಬೇಕಾಗಿತ್ತು. ಆದರೆ ಅವರು ಹಿಂದುಳಿದ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಇತಿಹಾಸವನ್ನು ದಾಖಲಿಸದೆ ಮರೆಮಾಚಿದ್ದಾರೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರೋಗ್ಯ, ಶಿಕ್ಷಣ, ವಿದ್ಯುತ್, ಕೃಷಿ ವಲಯ, ನೀರಾವರಿ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಅಪಾರ ಕೊಡುಗೆಗಳನ್ನು ಕೊಟ್ಟಿದ್ದಾರೆ. ನಮ್ಮ ದೇಶ, ರಾಜ್ಯ ಅಭಿವೃದ್ಧಿ ಕಂಡಿದೆ ಎಂದರೆ ಅದು ನಾಲ್ವಡಿ ಅವರ ಕೊಡುಗೆಯಿಂದ ಮಾತ್ರ ಪ್ರತಿಯೊಬ್ಬರೂ ಅವರ ಇತಿಹಾಸವನ್ನು ಅಧ್ಯಯನ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಸಂತ,ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸೇರಿ ದಂತೆ ಮುಖಂಡ ಎ.ಪಿ.ಕೃಷ್ಣಪ್ಪ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ಸಾಹಿತಿ ಕೂ.ಗಿ.ಗಿರಿಯಪ್ಪ, ದಲಿತ ಮುಖಂಡ ಗೋಪಿ, ವೆಂಕಟಾಚಲ, ಬುದ್ಧ ವಿಹಾರ ಸಮಿತಿ ಸದಸ್ಯ ನಟರಾಜು, ಜೀವನ್, ಭಾರತೀಯ ಮೂಲ ನಿವಾಸಿ ಕಾವಲು ಪಡೆಯ ರಾಜ ಮೌರ್ಯ, ಚಲವಾದಿ ನವೀನ್ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02 :

ಕನಕಪುರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು, ವಿವಿಧ ಸಂಘಟನೆ ಪದಾಧಿಕಾರಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.