ಸಾರಾಂಶ
ಕೇವಲ ಸಸಿಗಳನ್ನು ನೆಡುವುದಷ್ಟೇ ಅಲ್ಲದೇ ಅದಕ್ಕೆ ಪ್ರತಿದಿನ ನೀರುಣಿಸುವುದು, ಟ್ರೀ ಗಾರ್ಡ್ ಹಾಕಿ ಸಂದರ್ಭಕ್ಕೆ ತಕ್ಕಂತೆ ಗೊಬ್ಬರ ಹಾಕುವುದರಿಂದ ಸಸಿಗಳು ಮರವಾಗುತ್ತವೆ.
ಹುಬ್ಬಳ್ಳಿ: ನಗರದ ವಾರ್ಡ್ ನಂ. 67ರ ಶ್ರೀ ಗುರುಸಿದ್ದೇಶ್ವರ ಕಲ್ಯಾಣ ಮಂಟಪದ ರಸ್ತೆಯಿಂದ ಪಿ.ಬಿ. ರಸ್ತೆ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಏಕ್ ಪೇಡ್ ಮಾ ಕೇ ನಾಮ ಅಭಿಯಾನದ ಅಂಗವಾಗಿ ಸುಮಾರು 20 ಸಸಿಗಳನ್ನು ನೆಡಲಾಯಿತು.
ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಮಾತನಾಡಿ, ಕೇವಲ ಸಸಿಗಳನ್ನು ನೆಡುವುದಷ್ಟೇ ಅಲ್ಲದೇ ಅದಕ್ಕೆ ಪ್ರತಿದಿನ ನೀರುಣಿಸುವುದು, ಟ್ರೀ ಗಾರ್ಡ್ ಹಾಕಿ ಸಂದರ್ಭಕ್ಕೆ ತಕ್ಕಂತೆ ಗೊಬ್ಬರ ಹಾಕುವುದರಿಂದ ಸಸಿಗಳು ಮರವಾಗುತ್ತವೆ ಎಂದರು.ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕಿ ಜ್ಯೋತಿ ನರೇಂದ್ರ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ, ವಾರ್ಡ್ ಅಧ್ಯಕ್ಷ ಸುಭಾಸ ಅಥಣಿ, ಮಹಾನಗರ ಜಿಲ್ಲಾ ವಕ್ತಾರ ರಾಜು ಕೋರ್ಯಾಣಮಠ, ಅನೂಪ ಬಿಜವಾಡ, ರಂಗಾ ಕಠಾರೆ, ಪ್ರವೀಣ ಕುಬಸದ, ಮಹಾಲಿಂಗಪ್ಪ ಹರ್ತಿ, ಕುಮಾರಗೌಡ ಪಾಟೀಲ್, ಅಣ್ಣಪ್ಪ ಗೋಕಾಕ, ಮಂಜುನಾಥ ಬಿಜವಾಡ, ಗಣೇಶ ಅಮರಾವತಿ, ಬಸವರಾಜ ಛಬ್ಬಿ, ಹಿತೇಶ ಜೈನ್, ಅನುರಾಧಾ ಚಿಲ್ಲಾಳ, ಶೋಭಾ ನಾಕೋಡ, ಸಂಗಪ್ಪ ಕೂಕನೂರ, ಬಸವರಾಜ ಜಾಬೀನ, ನೀಲಕಂಠ ತಡಸದಮಠ, ಓಣಿಯ ಗುರು-ಹಿರಿಯರು ಉಪಸ್ಥಿತರಿದ್ದರು.