ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಬಾಲ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಸಿನಿ ರಸಿಕರಿಂದ ಪವರ್ ಸ್ಟಾರ್ ಎಂದು ಬಿರುದು ಪಡೆದ ಪುನಿತ್ ರಾಜಕುಮಾರ್ ಅವರ ಹೆಸರನ್ನು ತುಮಕೂರು ವಿವಿಯ ನೂತನ ಕ್ಯಾಂಪಸ್ ಜ್ಞಾನಸಿರಿಯಲ್ಲಿ ಆರಂಭವಾಗಲಿರುವ ಫಿಲ್ಮಂ ಇನ್ಸಿಟ್ಯೂಟ್‌ಗೆ ಇಡಬೇಕೆಂಬುದು ಕರ್ನಾಟಕದ ಜನತೆಯ ಆಸೆಯಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಫಿಲ್ಮಂ ಚೇಂಬರ್ ಮತ್ತು ರಾಜಕುಮಾರ್ ಕುಟುಂಬದ ಸದಸ್ಯ, ತುಮಕೂರು ವಿವಿಯ ಕುಲಪತಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.ನಗರದ ಹೊರವಲಯದ ಗೆದಲಹಳ್ಳಿ ರಿಂಗ್ ರಸ್ತೆಯಲ್ಲಿ ಕರ್ನಾಟಕ ರತ್ನ ಪುನಿತ್ ರಾಜ್‌ಕುಮಾರ್ 3ನೇ ಪುಣ್ಯಸ್ಮರಣೆ ನಿಮಿತ್ತ 1500 ಜನರಿಗೆ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪ್ಪುರವರು ನಮ್ಮನ್ನು ಅಗಲಿ ಇಂದಿಗೆ 3 ವರ್ಷಗಳು ನಾವು ಕಳೆದಿದ್ದೇವೆ. ನಟನಾಗಿ, ಸಮಾಜಸೇವಕನಾಗಿ ಕನ್ನಡಿಗರ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಕೈಗೊಂಡ ಜನಸೇವೆಯನ್ನು ವರ್ಣಿಸಲು ಪದಗಳೇ ಸಾಲದು ಎಂದರು. ತುಮಕೂರು ವಿಶ್ವವಿದ್ಯಾಲಯದಲ್ಲಿ ಈ ವರ್ಷದಿಂದ ಚಲನಚಿತ್ರ ತರಬೇತಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಈ ವಿಭಾಗದಲ್ಲಿ ಸರ್ಟಿಫಿಕೆಟ್ ಹಾಗೂ ಪದವಿ ಕೋರ್ಸ್‌ಗಳನ್ನು ನಡೆಸಲಾಗುವುದು. ಇದರಲ್ಲಿ ಎಲ್ಲಾ ಚಿತ್ರರಂಗದ ನಿರ್ದೆಶನ, ಸಾಹಸ, ಸಂಗೀತ, ಕೋರಿಯೊಗ್ರಫಿ, ನಟನೆ ಮುಂತಾದ ತರಬೇತಿಗಳಿಗೆ ಯೋಜನೆ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ರವರ ಹೆಸರು ನಾಡಿನಾದ್ಯಂತ ಚಿರಸ್ಥಾಯಿಯಾಗಿ ಉಳಿಸುವ ಉದ್ದೇಶದಿಂದ ಅವರ ಹೆಸರನ್ನು ಈ ಸುಸಜ್ಜಿತ ಹೈಟೆಕ್ ಚಲನಚಿತ್ರ ತರಬೇತಿ ಕೇಂದ್ರಕ್ಕೆ ಇಡುವ ಸಾರ್ಥಕ ಕೆಲಸವಾಗಬೇಕು ಎಂದರು.ತುಮಕೂರು ವಿವಿಯ ಪಿಲ್ಮಂ ಇನ್ಸಿಟ್ಯೂಟ್‌ಗೆ ಪುನಿತ್ ರಾಜಕುಮಾರ್ ಅವರ ಹೆಸರಿಡುವ ನಿಟ್ಟಿನಲ್ಲಿ ದೊಡ್ಡಮನೆ ಕುಟುಂಬದವರಿಂದ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಸಹಕಾರ ತೆಗೆದುಕೊಳ್ಳಬಹುದು.ಇದು ಯುವಜನರನ್ನು ಆರ್ಕಷಿಸಲು ಹೆಚ್ಚು ಅನುಕೂಲವಾಗಲಿದೆ ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಪುನೀತ್ ರಾಜಕುಮಾರ್ ಕನ್ನಡಿಗರ ಹೆಮ್ಮೆ.ಈ ಉದ್ದೇಶದಿಂದ ಮುಂದಿನ ತಿಂಗಳು ತುಮಕೂರಿನ ಹಿರೇಮಠದ ತಪೋವನದಲ್ಲಿ ಪುನೀತ್ ಸ್ಮೃತಿ ಎಂಬ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪುನೀತ್‌ರಾಜಕುಮಾರ್‌ರವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್‌ರವರು ಭಾಗವಹಿಸಲಿದ್ದಾರೆ. ಆ ದಿನವೆಲ್ಲಾ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಡು, ನೃತ್ಯ, ಸಂಗೀತ, ಹಾಸ್ಯ, ಪ್ರಬಂಧ, ಅಪ್ಪು ರವರ ಭಾವಚಿತ್ರ ಬಿಡಿಸುವ ಸ್ಪರ್ಧೆ,ಜಾನಪದ ಗೀತೆ,ಭಾವಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಸಮಸ್ತ ಜನತೆ ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ತಿಳಿಸಿದರು.ಡೈರಿ ಕೃಷ್ಣಪ್ಪ, ರಂಗಸ್ವಾಮಿ, ಉಪ್ಪಾರಹಳ್ಳಿ ಕುಮಾರ್, ಅಯೂಬ್, ಬಾಲಾಜಿ, ಭೈರವ ಮೂರ್ತಪ್ಪ, ಪ್ರಕಾಶ್, ಸುರೇಶ್, ರಂಗ, ರವಿ, ನಟರಾಜ್ ಹಾಗೂ ವಿವಿಧ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘಗಳ ಪದಾಧಿಕಾರಿಗಳು ಮತ್ತು ಮುಖಂಡರು ಹಾಜರಿದ್ದರು.