ನಮ್ರತಾ ಹೆಗಡೆಗೆ ಪಿಎಚ್‌ಡಿ, ಪ್ರಶಸ್ತಿ

| Published : Nov 23 2024, 12:36 AM IST

ಸಾರಾಂಶ

ಬೆಂಗಳೂರಿನ ಶಂಕರ ಕಾಲೇಜು ಆಫ್ ಓಪ್ಟೋಮೆಟ್ರಿಯಲ್ಲಿ ಸಹಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥರಾಗಿರುವ, ಉಡುಪಿಯ ನಮ್ರತಾ ಹೆಗಡೆ ಅವರಿಗೆ ಚಂಡೀಗಢದ ಚಿತ್ಕಾರಾ ಯೂನಿವರ್ಸಿಟಿ ಪಿಎಚ್‌ಡಿ ಪದವಿ ನೀಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಬೆಂಗಳೂರಿನ ಶಂಕರ ಕಾಲೇಜು ಆಫ್ ಓಪ್ಟೋಮೆಟ್ರಿಯಲ್ಲಿ ಸಹಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥರಾಗಿರುವ, ಉಡುಪಿಯ ನಮ್ರತಾ ಹೆಗಡೆ ಅವರಿಗೆ ಚಂಡೀಗಢದ ಚಿತ್ಕಾರಾ ಯೂನಿವರ್ಸಿಟಿ ಪಿಎಚ್‌ಡಿ ಪದವಿ ನೀಡಿದೆ.

ಅವರು ಡಾ.ಕಲಿಕಾ ಬಂದಾಮ್ವರ್ ಅವರ ಮಾರ್ಗದರ್ಶನದಲ್ಲಿ ‘ವರ್ಚುವಲ್‌ ರಿಯಾಲಿಟಿ ಬೇಸ್ಡ್ ಬೈನೋಕ್ಯುಲರ್ ವಿಷನ್ ಥೇರೋಪಿ ಫಾರ್ ಮ್ಯಾನೇಜ್ಮೆಂಟ್ ಆಫ್ ಆಂಬ್ಲಿಯೋಪಿಯಾ’ ಎಂಬ ಸಂಶೋಧನಾ ಪ್ರಬಂಧವನ್ನು ಸಿದ್ಧಪಡಿಸಿದ್ದರು.* ಅತ್ಯುತ್ತಮ ಸಂಶೋಧನಾ ಪ್ರಶಸ್ತಿ

ಅಲ್ಲದೇ ನಮ್ರತಾ ಅವರು ಕಣ್ಣಿನ ಒಂದು ವಿಶಿಷ್ಟ ಸಮಸ್ಯೆಯಾದ ಆಂಬ್ಲಿಯೋಪಿಯಾ (ಲೇಜಿ ಐ) ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಮೊಬೈಲ್ ಬಳಸಿಕೊಂಡು ಮನೆಯಲ್ಲಿಯೇ ಕುಳಿತುಕೊಂಡು ಚಿಕಿತ್ಸೆ ಪಡೆಯುವ ನವೀನ ತಂತ್ರಜ್ಞಾನವನ್ನು ಅವಿಷ್ಕಾರ ಮಾಡಿದ್ದಾರೆ. ದೃಷ್ಟಿ ಸಂಶೋಧನಾಕ್ಷೇತ್ರದಲ್ಲಿ ಇದೊಂದು ಮಹತ್ತರವಾದ ಸಾಧನೆ. ಈ ಅನ್ವಯಿಕ ಸಂಶೋಧನೆಯನ್ನು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಉತ್ತಮ ಸಂಶೋಧನೆ ಎಂದು ಗುರುತಿಸಿ ಪ್ರಶಸ್ತಿ ನೀಡಿದೆ.ಡಾ. ನಮ್ರತಾ ಹೆಗಡೆ ಅವರು ಪೂರ್ಣಪ್ರಜ್ಞ ಎಂಬಿಎ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಂ. ಆರ್. ಹೆಗಡೆ ಮತ್ತು ಕಮಲಾ ಎಂ. ಹೆಗಡೆ ಅವರ ಪುತ್ರಿ ಹಾಗೂ ಕುಮಟಾ ತಾಲೂಕಿನ ಹೊಲನಗದ್ದೆ ಮೂಲದ ಹರ್ಷ ಹೆಗಡೆಯವರ ಪತ್ನಿ.