ಸಾರಾಂಶ
ನಂದಳಿಕೆ ಬೆಳಕು ಸಂಜೀವಿನಿ ಒಕ್ಕೂಟದ ವತಿಯಿಂದ ನಂದಳಿಕೆ ಬೋರ್ಡು ಶಾಲಾ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಆತ್ಮವಿಶ್ವಾಸಿಗಳಾಗಿ ಸ್ವವಲಂಬಿ ಬದುಕು ಕಟ್ಟಿಕೊಂಡು ಪುರುಷರಷ್ಟೇ ಸಮಾನಳಾಗಿ ಸಮಾಜದಲ್ಲಿ ಬದುಕು ನಡೆಸುತ್ತಿದ್ದಾರೆ. ತನ್ನಲ್ಲಿರುವ ಪ್ರತಿಭೆಗೂ ಸ್ವಸಹಾಯ ಸಂಘದ ವೇದಿಕೆಗಳು ಪೂರಕವಾಗಿದೆ ಎಂದು ನ್ಯಾಯವಾದಿ ಸರಿತಾ ರವೀಂದ್ರ ಶೆಟ್ಟಿ ಹೇಳಿದ್ದಾರೆ.ನಂದಳಿಕೆ ಬೆಳಕು ಸಂಜೀವಿನಿ ಒಕ್ಕೂಟದ ವತಿಯಿಂದ ನಂದಳಿಕೆ ಬೋರ್ಡು ಶಾಲಾ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಂದಳಿಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ವೈ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಾಯ್ಸ್ ಟೆಲ್ಲಿಸ್ ವಹಿಸಿದ್ದರು.ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಅಫೋಲಿಯನ್ ನೋರೋನ್ಹ ಹಾಗೂ ಹಿರಿಯ ಮಹಿಳೆ ಕರ್ಗಿ ಪೂಜಾರ್ತಿ ಇವರನ್ನು ಸನ್ಮಾನಿಸಲಾಯಿತು.
ಪಂಚಾಯಿತಿ ಕಾರ್ಯದರ್ಶಿ ಕಸ್ತೂರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ವೀಣಾ, ಬೆಳಕು ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಸುಶ್ಮಿತಾ, ಖಜಾಂಜಿ ಶಾಲಿನಿ ಇದ್ದರು. ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಸುನಿತಾ ನೋರೋನ್ಹ ಸಂಘದ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿದರು. ಸುಷ್ಮಾ ವಂದಿಸಿದರು.