- ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಬಿಡುಗಡೆ
- 1,5, 10 ಕೇಜಿಗಳಲ್ಲಿ ಸಿಗಲಿದೆ ನಂದಿನಿ ಮೊಸರು- ತಮಿಳ್ನಾಡು, ಕೇರಳದಲ್ಲಿ ಮಾರಾಟಕ್ಕೆ ಯೋಜನೆ
---ಬಕೆಟ್ ಮೊಸರು ಬೆಲೆ
₹೫೪1 ಕೇಜಿ
₹೩೯೫5 ಕೇಜಿ
₹೭೮೦10 ಕೇಜಿ---
ಕನ್ನಡಪ್ರಭ ವಾರ್ತೆ ಚಾಮರಾಜನಗರದೇಶದ ನಂಬಿಕಸ್ಥ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಕೆಎಂಎಫ್ ಈಗ ತನ್ನ ನಂದಿನಿ ಮೊಸರನ್ನು ಸ್ಯಾಚೆಟ್ ಮತ್ತು ಬಕೆಟ್‌ಗಳಲ್ಲಿಯೂ ಬಿಡುಗಡೆಗೊಳಿಸಿದೆ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್) ಅಧ್ಯಕ್ಷ ಎಂ. ನಂಜುಂಡಸ್ವಾಮಿ ಅವರು ಬಿಡುಗಡೆ ಮಾಡಿದರು.
ಶನಿವಾರ ಕುದೇರು ಆಡಳಿತ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ನಂಜುಂಡಸ್ವಾಮಿ ಅವರು, ಒಕ್ಕೂಟದ ವ್ಯಾಪ್ತಿಯಲ್ಲಿ ಮದುವೆ, ಸಭೆ-ಸಮಾರಂಭ ನಡೆಸುವರು ಹಾಗೂ ಬೇಸಿಗೆಯಿಂದಾಗಿ ಮೊಸರಿಗೆ ಬೇಡಿಕೆ ಹೆಚ್ಚಾಗಿದೆ ಎಂದರು.ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ಕೃಷ್ಟ ಗುಣ ಮಟ್ಟದೊಂದಿಗೆ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.
ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ. ರಾಜಕುಮಾರ್ ಮಾತನಾಡಿ, ಒಂದು ಕೆಜಿ ಸ್ಯಾಚೇಟ್ ಬಕೆಟ್ ಮೊಸರಿಗೆ ೫೪ ರು, ೫ ಕೆಜಿಗೆ ೩೯೫ ರು, ೧೦ ಕೆಜಿಗೆ ೭೮೦ ರು. ಇರಲಿದೆ ಎಂದರು.ಮುಂದಿನ ದಿನಗಳಲ್ಲಿ ೫ ಮತ್ತು ೧೦ ಕೆಜಿ ಬಕೆಟ್ ಮೊಸರನ್ನು ಕೇರಳ ಮತ್ತು ತಮಿಳುನಾಡಿನಲ್ಲೂ ಮಾರಲು ಆಡಳಿತ ಮಂಡಳಿ ಚಿಂತಿಸಿದ್ದು, ನಂದಿನಿ ಬ್ರ್ಯಾಂಡ್‌ನನ್ನು ಮತ್ತಷ್ಟು ಬಲಿಷ್ಟಗೊಳಿಸಲು ಗುಣಮಟ್ಟದ ನಂಬಿಕೆ ಹಾಗೂ ವಿಶ್ವಾಸಾರ್ಹ ನಂದನಿ ಹಾಲು ಮತ್ತು ಉತ್ಪನ್ನಗಳನ್ನು ಬಳಸುವಂತೆ ಚಾಮುಲ್ ಆಡಳಿತ ಮಂಡಳಿ ಮನವಿ ಮಾಡುತ್ತದೆ ಎಂದರು.
ಬಕೆಟ್ ಮೊಸರು ಬಿಡುಗಡೆ ವೇಳೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಚಾಮುಲ್ ನಿರ್ದೇಶಕರಾದ ಎಚ್.ಎಸ್. ನಂಜುಂಡಪ್ರಸಾದ್, ವೈ.ಸಿ. ನಾಗೇಂದ್ರ, ಎಚ್.ಎಸ್. ಬಸವರಾಜು, ಎಸ್. ಮಹದೇವಸ್ವಾಮಿ, ಎಂ.ಪಿ. ಸುನೀಲ್, ಸದಾಶಿವ ಮೂರ್ತಿ, ಸಾಹುಲ್ ಅಹಮದ್, ಶೀಲಾ ಪುಟ್ಟರಂಗಶೆಟ್ಟಿ, ಕೆ.ಕೆ. ರೇವಣ್ಣ, ಕೆಎಂಎಫ್ ನಿರ್ದೇಶಕ ವಿ.ಸಿ. ವೆಂಕಟೇಶ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ. ಮಂಜುನಾಥ್ ಬಿ, ಸಹಕಾರ ಸಂಘಗಳ ಉಪ ನಿಬಂಧಕಿ ಜ್ಯೋತಿ ಅರಸ್, ವ್ಯವಸ್ಥಾಪಕ(ಆಡಳಿತ) ಪ್ರಸಾದ್ ಎಂ, ವ್ಯವಸ್ಥಾಪಕ(ಡೈರಿ) ಸೋಮಶೇಖರ್, ವ್ಯವಸ್ಥಾಪಕ ಗೋವಿಂದರಾಜು, ಉಪ ವ್ಯವಸ್ಥಾಪಕ(ಮಾರುಕಟ್ಟೆ) ಶಿವಕುಮಾರ್ ಇದ್ದರು.