ನಂದಿನಿ ಉತ್ಪನ್ನಗಳಿಗೆ ವಿದೇಶದಲ್ಲೂ ಬೇಡಿಕೆ: ಡಿಕೆ ಸುರೇಶ್‌

| Published : Jul 27 2025, 12:01 AM IST

ನಂದಿನಿ ಉತ್ಪನ್ನಗಳಿಗೆ ವಿದೇಶದಲ್ಲೂ ಬೇಡಿಕೆ: ಡಿಕೆ ಸುರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಮೂಲ್‌ಗೆ ಉತ್ತಮ ರೀತಿಯ ಗುಣಮಟ್ಟದ ಹಾಲು ಪೂರೈಕೆ ಮಾಡುತ್ತಿದ್ದ ರೈತರಿಗೆ ಅಭಿನಂದನೆಗಳು. ರೈತರ ಮತ್ತಷ್ಟು ಗುಣಮಟ್ಟದ ಹಾಲು ಪೂರೈಕೆ ಮಾಡಿದಲ್ಲಿ ಬಮೂಲ್ ಸಂಸ್ಥೆ ಮತ್ತಷ್ಟು ಅಭಿವೃದ್ಧಿಯೊಂದಲು ಸಾಧ್ಯವಾಗುತ್ತದೆ.

ನೆಲಮಂಗಲ:

ಬಮೂಲ್ ಸಂಸ್ಥೆಯ ನಂದಿನಿ ಉತ್ಪನ್ನಗಳು ದೇಶ ವಿದೇಶದಲ್ಲೂ ಬೇಡಿಕೆ ಹೆಚ್ಚಾಗಿದೆ‌. ಬಮೂಲ್‌ಗೆ ಉತ್ತಮ ರೀತಿಯ ಗುಣಮಟ್ಟದ ಹಾಲು ಪೂರೈಕೆ ಮಾಡುತ್ತಿದ್ದ ರೈತರಿಗೆ ಅಭಿನಂದನೆಗಳು. ರೈತರ ಮತ್ತಷ್ಟು ಗುಣಮಟ್ಟದ ಹಾಲು ಪೂರೈಕೆ ಮಾಡಿದಲ್ಲಿ ಬಮೂಲ್ ಸಂಸ್ಥೆ ಮತ್ತಷ್ಟು ಅಭಿವೃದ್ಧಿಯೊಂದಲು ಸಾಧ್ಯವಾಗುತ್ತದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.ಶುಕ್ರವಾರ ಸಂಜೆ ಸೋಲೂರಿನ ಹಾಲು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡುಲು ತೆರಳುತ್ತಿದ್ದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ತನ್ನ ಬೆಂಬಲಿಗರು ಹಾಗೂ ಬಮೂಲ್ ನಿರ್ದೇಶಕರೊಂದಿಗೆ ತಾಲೂಕಿನ ಹಂಚೀಪುರ ಗ್ರಾಮದ ಬಮೂಲ್ ನಿರ್ದೇಶಕ ಭವಾನಿ ಶಂಕರ್‌ಬೈರೇಗೌಡ ನಿವಾಸಕ್ಕೆ ತೆರಳಿ ಕುಶಲೋಪಾರಿ ವಿಚಾರಿಸಿದರು.

ತಾಯಿ ಆಶೀರ್ವಾದ ಪಡೆದ ಡಿಕೆಸು:

ಬಮೂಲ್ ನಿರ್ದೇಶಕ ಭವಾನಿ ಶಂಕರ್‌ಬೈರೇಗೌಡ ಅವರ ತಾಯಿ ಶತಾಯುಷಿ ಲಕ್ಷ್ಮಮ್ಮ ಅವರ ಆರೋಗ್ಯ ವಿಚಾರಿಸಿ ತಾಯಿ ಆಶೀರ್ವಾದ ಪಡೆದುಕೊಂಡರು. ಶಾಸಕರಿಂದ ಸ್ವಾಗತ:

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಸೋಲೂರಿಗೆ ತೆರಳುತ್ತಿದ್ದ ಮಾರ್ಗಮಧ್ಯದ ಲ್ಯಾಂಕೋ ಟೋಲ್ ಬಳಿ ಶಾಸಕ ಎನ್.ಶ್ರೀನಿವಾಸ್ ನೇತೃತ್ವದಲ್ಲಿ ಡಿ.ಕೆ.ಸುರೇಶ್ ಅವರನ್ನು ಸ್ವಾಗತಿಸಿದರು. ಇದೇ ವೇಳೆವಿಧಾನ ಪರಿಷತ್ ಸದಸ್ಯ ರವಿ, ನೆ.ಯೋ. ಪ್ರಾಧಿಕಾರ ಅದ್ಯಕ್ಷ ಎಂ.ನಾರಾಯಣ್‌ಗೌಡ, ಬ್ಲಾಕ್ ಅಧ್ಯಕ್ಷ ಟಿ.ನಾಗರಾಜು, ನಗರಸಭೆ ಉಪಾಧ್ಯಕ್ಷ ಆನಂದ್, ಸದಸ್ಯ ಗಂಗಾಧರ್ ರಾವ್ ಮತ್ತಿತರರು ಇದ್ದರು.

ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿ, ಬಮೂಲ್ ನಿರ್ದೇಶಕ ಭವಾನಿ ಶಂಕರ್‌ಬೈರೇಗೌಡ, ಮಂಜುನಾಥ್, ಸತೀಶ್‌ಗೌಡ, ಮುನಿರಾಜು, ಅಶೋಕ್, ಸತೀಶ್‌ ಕೆ.ಆರ್., ಆನಂದ್‌ಕುಮಾರ್, ಉದ್ಯಮಿ ಎಚ್.ನಿ. ಮಂಜುನಾಥ್, ಡೈರಿ ಮಾಜಿ ಅದ್ಯಕ್ಷ ವಿಜಯ್‌ಕುಮಾರ್, ಡೈರಿ ಅದ್ಯಕ್ಷರಾದ ಭಟ್ಟರಹಳ್ಳಿ ಮಂಜುನಾಥ್, ದಾನೋಜಿಪಾಳ್ಯ ಮುನಿವೆಂಕಟಪ್ಪ, ಕೋಡಪನಹಳ್ಳಿ ಪುಟ್ಟಣ್ಣ, ಕೆಂಪಲಿಂಗಹಳ್ಳಿಲೋಕೇಶ್ , ಡೈರಿ ಕಾರ್ಯದರ್ಶಿಗಳಾದ ಗೋಪಾಲಯ್ಯ, ಶಿವಮೂರ್ತಿ, ಗಂಗಾಧರ್, ಚಂದ್ರಶೇಖರ್, ಅಂಜಿನಮೂರ್ತಿ, ಗಂಗಹನುಮಯ್ಯ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-25ಕೆಎನ್‌ಎಲ್ಎಮ್1-ನೆಲಮಂಗಲ ತಾಲೂಕಿನ ಹಂಚೀಪುರ ಗ್ರಾಮದ ಬಮೂಲ್ ನಿರ್ದೇಶಕ ಭವಾನಿಶಂಕರ್‌ಬೈರೇಗೌಡ ನಿವಾಸಕ್ಕೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ತೆರಳಿ ಕುಶಲೋಪಾರಿ ವಿಚಾರಿಸಿದರು.