ತರೀಕೆರೆಕ್ರೀಡೆ ಎಂದರೆ ಕೇವಲ ಆಟವಲ್ಲ. ಶಿಸ್ತು, ಶ್ರಮ, ಸಹನೆ ಮತ್ತು ಆತ್ಮವಿಸ್ವಾಸವನ್ನು ಕಲಿಸುವ ಜೀವನದ ಪಾಠ. ನಮ್ಮ ಶಾಲೆ ವಿದ್ಯಾರ್ಥಿನಿ ಈ ಎಲ್ಲಾ ಗುಣಗಳನ್ನು ತನ್ನ ಪರಿಶ್ರಮದಿಂದ ಸಾಬೀತುಪಡಿಸಿದ್ದಾರೆ ಎಂದು ಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ. ಅಭಿಪ್ರಾಯ ಪಟ್ಟರು.

ಅಮೃತೇಶ್ವರ ಪ್ರೌಢಶಾಲೆ ಹಮ್ಮಿಕೊಂಡಿದ್ದ ಪುರಸ್ಕಾರ ಸಮಾರಂಭದಲ್ಲಿ ಹಾಲೇಶ್

ಕನ್ನಡಪ್ರಭ ವಾರ್ತೆ, ತರೀಕೆರೆ

ಕ್ರೀಡೆ ಎಂದರೆ ಕೇವಲ ಆಟವಲ್ಲ. ಶಿಸ್ತು, ಶ್ರಮ, ಸಹನೆ ಮತ್ತು ಆತ್ಮವಿಸ್ವಾಸವನ್ನು ಕಲಿಸುವ ಜೀವನದ ಪಾಠ. ನಮ್ಮ ಶಾಲೆ ವಿದ್ಯಾರ್ಥಿನಿ ಈ ಎಲ್ಲಾ ಗುಣಗಳನ್ನು ತನ್ನ ಪರಿಶ್ರಮದಿಂದ ಸಾಬೀತುಪಡಿಸಿದ್ದಾರೆ ಎಂದು ಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ. ಅಭಿಪ್ರಾಯ ಪಟ್ಟರು.

ಕ್ರೀಡಾರಂಗದಲ್ಲಿ ಅಪೂರ್ವ ಸಾಧನೆ ಮಾಡಿರುವ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿ ನಂದಿನಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ ಶಾಲಾ ಹಂತದ ಕ್ರೀಡಾಕೂಟ ಅಥ್ಲೆಟಿಕ್ಸ್ ವಿಭಾಗದಲ್ಲಿ ನಂದಿನಿ ಅಪೂರ್ವ ಸಾಧನೆ ಮಾಡಿದ್ದಾರೆ. ನಿರಂತರ ಅಭ್ಯಾಸ, ಸಮಯ ಪಾಲನೆ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವೇ ಈ ಯಶಸ್ಸಿನ ಮೂಲ ಎಂದು ಹೇಳಿದರು.

ಭದ್ರಾವತಿ ರಾಮಸ್ವಾಮಿ ಅವರ ಮಗಳಾದ ನಂದಿನಿ ಈ ಸಾಧನೆ ಕೇವಲ ಒಬ್ಬ ವಿದ್ಯಾರ್ಥಿ ಗೆಲುವಲ್ಲ. ನಮ್ಮ ಶಾಲೆಯ ಗೆಲುವು. ಇತರ ವಿದ್ಯಾರ್ಥಿಗಳಿಗೆ ಇದು ದೊಡ್ಡ ಪ್ರೇರಣೆ. ನಾವು ಪ್ರಯತ್ನಿಸಿದರೆ ಸಾಧನೆ ಸಾಧ್ಯ ಎಂಬ ನಂಬಿಕೆ ಮೂಡಿಸಿದ್ದಾರೆ ಎಂದು ಹೇಳಿದರು.ಶಾಲೆಯ ಕ್ರೀಡಾಕೂಟಗಳಲ್ಲಿ ನಂದಿನಿ ಅತೀ ಹೆಚ್ಚು ಪ್ರಶಸ್ತಿ ಪಡೆದುಕೊಂಡಿರುವುದು ನಮ್ಮೆಲ್ಲರಿಗೂ ಅಪಾರ ಹೆಮ್ಮೆ ತಂದಿದೆ. ಇವರ ಸಾಧನೆ ಹಿಂದೆ ಇರುವ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಮತ್ತು ಗೆಲ್ಲುವ ಮನೋಭಾವವೇ ನಂದಿನಿ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ. ನಂದಿನಿ ಕೇವಲ ಬಹುಮಾನ ಮಾತ್ರ ಗೆದ್ದಿಲ್ಲ. ಶಾಲೆ ಗೌರವವನ್ನೂ ಹೆಚ್ಚಿಸಿದ್ದಾರೆ. ಮುಂದೆಯೂ ಇಂತಹ ಅನೇಕ ವಿಜಯ ಸಾಧಿಸಿ, ಶಾಲೆ ಹೆಸರನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿ ಎಂದು ಹಾರೈಸಿದರು.

ನೀವು ಕ್ರೀಡೆಯಲ್ಲಿ ಮಾತ್ರವಲ್ಲ. ಜೀವನದಲ್ಲೂ ಉನ್ನತ ಸ್ಥಾನ ತಲುಪಲಿ ಎಂದು ಹಾರೈಸುತ್ತೇವೆ. ಇದೇ ಉತ್ಸಾಹ, ಶ್ರಮ ಮತ್ತು ಆತ್ಮವಿಶ್ವಾಸ ಮುಂದುವರಿಸಿಕೊಂಡು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲೂ ನಮ್ಮ ಶಾಲೆ ಹೆಸರು ಬೆಳಗಿಸಲಿ ಎಂದು ಆಶಿಸುತ್ತೇವೆ ಎಂದರು. ಕನ್ನಡ ಶಿಕ್ಷಕ ಸತೀಶ್ ನಂದಿಹಳ್ಳಿ, ನಿಲಯ ಪಾಲಕಿ ಸೌಮ್ಯ, ತ್ರಿಷಿಕಾ ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.4ಕೆಟಿಆರ್.ಕೆ.1 ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಕ್ರೀಡಾರಂಗದಲ್ಲಿ ಅಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿನಿ ನಂದಿನಿ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ.ಮತ್ತಿತರರು ಇದ್ದರು.