ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಹನೆ, ಸಮಾನತೆ, ಕಾಯಕ, ಈ ಮೂರು ಮೂಲತತ್ವಗಳನ್ನು ನಮ್ಮ ಜೀವನದಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ನಂಜಪ್ಪ ಎಜುಕೇಶನ್ ಅಕಾಡೆಮಿ ಚೇರ್ಮನ್ ಡಾ.ಅವಿನಾಶ್ ಹೇಳಿದರು.ಇಲ್ಲಿನ ನಂಜಪ್ಪ ಎಜುಕೇಶನ್ ಅಕಾಡೆಮಿಯ ನಂಜಪ್ಪ ಇನ್ಸ್ಟಿಟ್ಯೂಟ್ ಆಫ್ ಫಿಜಿಯೋಥೆರಪಿ ಮತ್ತು ಅಲೈಡ್ಡ ಹೆಲ್ತ್ ಸೈನ್ಸಸ್ ಕಾಲೇಜಿನ ಮೊದಲನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಸಹನೆ, ಸಮಾನತೆ ಕಾಯಕ, ತತ್ವವಿಲ್ಲದೆ ವೃತ್ತಿ ಜೀವನದಲ್ಲಿ ಯಶಸ್ಸು ಇರುವುದಿಲ್ಲ. ನಮ್ಮ ವೃತ್ತಿ ಹಾಗೂ ಸಹೋದ್ಯೋಗಿಗಳನ್ನು ಗೌರವಿಸಿ ನಡೆಯಬೇಕು. ಯಶಸ್ಸು ದೊರಕಿರುವ ಎಲ್ಲ ವ್ಯಕ್ತಿಗಳು ದಿನಕ್ಕೆ 14 ರಿಂದ 15 ಗಂಟೆ ಕಾರ್ಯನಿರ್ವಹಿಸಿರುತ್ತಾರೆ. ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದ ಅವರು, ಶಿಕ್ಷಣ ಜ್ಞಾನವನ್ನು ಕೊಡುವ ಜೊತೆಗೆ ಸಾಹನುಭೂತಿ ಹಾಗೂ ವೃತ್ತಿ ಜೀವನದಲ್ಲಿ ಬದ್ಧತೆ ನೀಡುತ್ತದೆ ಎಂದರು.
ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರೋಮ ಮತ್ತು ಆರ್ಥೋಪೆಟಿಕ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲ ಡಾ.ಸಾಯಿ ಕುಮಾರ್ ಮಾತನಾಡಿ, ಹುಟ್ಟೂರಿನಲ್ಲಿ ಕಲಿತು ಮೊದಲು ಅಲ್ಲಿನ ಆರೋಗ್ಯ ವ್ಯವಸ್ಥೆಯ ಅಭಿವೃದ್ಧಿಯನ್ನು ಮಾಡಿ ಇಡೀ ಜಗತ್ತೇ ನಿಮ್ಮೂರಿನತ್ತ ಎದುರು ನೋಡುವಂತೆ ಮಾಡುವುದು ನಿಜವಾದ ಯಶಸ್ಸಯ ಎಂದರು.ನಂಜಪ್ಪ ಎಜುಕೇಶನ್ ಅಕಾಡೆಮಿಯ 1ನೇ ಪದವಿ ಪುರಸ್ಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ. ನಂಜಪ್ಪ ಅವರು ಗುಣಮಟ್ಟದ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ. ಗುಣಮಟ್ಟದ ಆರೋಗ್ಯ ವೃತ್ತಿಪರರನ್ನು ಉತ್ಪಾದಿಸುತ್ತಿದ್ದಾರೆ. ಇದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ವಿದ್ಯಾರ್ಥಿಗಳಿಗೆ ಇದು ಮೈಲಿಗಲ್ಲು ತಮ್ಮ ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನದ ಕಡೆಗೆ ಅವರ ಬದುಕು ಇಂದಿನಿಂದ ಬದಲಾಗುತ್ತದೆ ಎಂದರು.
ಎಲ್ಲರೂ ನೋವನ್ನು ಕಡಿಮೆ ಮಾಡಿಕೊಳ್ಳಲು ಅವರ ಜೀವನ ಬದಲಾಯಿಸಿಕೊಳ್ಳಲು ಸಹಕಾರಿಯಾಗುತ್ತದೆ ಇಂದಿನ ಬದುಕಿನಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದ್ದು ಫಿಜಿಯೋಥೆರಪಿ ಬಹಳಷ್ಟು ಸಹಕಾರಿಯಾಗಿದೆ. ಫಿಜಿಯೋಥೆರಪಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ನಮ್ಮ ಆರೋಗ್ಯದ ಗುಣಮಟ್ಟವನ್ನು ಸುಧಾರಿಸಲು, ಫಿಜಿಯೋಥೆರಪಿ ಬಹಳಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.ನಂಜಪ್ಪ ಎಜುಕೇಶನ್ ಅಕಾಡೆಮಿಯ ಮ್ಯಾನೇಜಿಂಗ್ ಟ್ರಸ್ಟ್ ಡಿ.ಬಿ.ಅಮೃತ್ ಮತ್ತಿತರರು ಇದ್ದರು.