ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ಕಪ್ ಅಂತರ ಗ್ರಾಮ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ನಾಪೋಕ್ಲು ಎ ತಂಡವು ಬಲ್ಲಮಾವಟಿ ಯೆಲ್ಲೋ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬಲ್ಲಮಾವಟಿ ಯೆಲ್ಲೋ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ಕಪ್ ಅಂತರ ಗ್ರಾಮ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ನಾಪೋಕ್ಲು ಎ ತಂಡವು ಬಲ್ಲಮಾವಟಿ ಯೆಲ್ಲೋ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬಲ್ಲಮಾವಟಿ ಯೆಲ್ಲೋ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಸೆಣೆಸಾಟ ನಡೆಸಿದವು. ಪಂದ್ಯದಲ್ಲಿ ಎರಡೂ ತಂಡಗಳು 2-2 ಅಂತರದ ಸಮಬಲ ಸಾಧಿಸಿದವು. ಬಲ್ಲಮಾವಟಿ ತಂಡದ

ಪರ ಆಟಗಾರರಾದ ನೆರವಂಡ ಕವನ್, ಕುಶಾಲ್ ಬೋಪಯ್ಯತಲಾ ಒಂದು ಗೋಲು ಗಳಿಸಿದರು. ನಾಪೋಕ್ಲು ತಂಡದ ಪರ ಕೇಲೆಟಿರಮುತ್ತಣ್ಣ ಹಾಗೂ ಕುಲ್ಲೇಟಿರ ನಾಚಪ್ಪ ಗೋಲು ದಾಖಲಿಸಿದರು. ನಂತರ ನಡೆದ ಪೆನಾಲ್ಟಿ ಶೂಟ್ ಔಟ್ ನಲ್ಲಿ ನಾಪೋಕ್ಲು ಎ ತಂಡವು ಬಲ್ಲಮಾವಟಿ ಯೆಲ್ಲೋ ತಂಡದ ವಿರುದ್ಧ 4-2 ಅಂತರದ ಗೆಲುವು ಸಾಧಿಸಿತು.

ಇದಕ್ಕೂ ಮೊದಲು ನಾಪೋಕ್ಲು ಎ ಮತ್ತು ಯವಕಪಾಡಿ ತಂಡಗಳ ನಡುವೆ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನಾಪೋಕ್ಲು ಎ ತಂಡ 4 -1 ಅಂತರದಿಂದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯ ನಾಪೋಕ್ಲು

ಬಿ ಮತ್ತು ಬಲ್ಲಮಾವಟಿ ಯೆಲ್ಲೋ ತಂಡಗಳ ನಡುವೆ ನಡೆದು ಬಲ್ಲಮಾವಟಿ ಯೆಲ್ಲೋ ತಂಡ 6- 0 ಅಂತರದಿಂದ ಜಯ ಸಾಧಿಸಿತ್ತು.

ಮಹಿಳೆಯರ ಹಗ್ಗ ಜಗ್ಗಾಟ:

ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲ್ಲಮಾವಟಿ ಮತ್ತು ನಾಪೋಕ್ಲು

ತಂಡಗಳ ನಡುವೆ ಪ್ರಶಸ್ತಿಗಾಗಿ ಸೆಣೆಸಾಟ ನಡೆದು ನಾಪೋಕ್ಲು ತಂಡ ಗೆಲುವು ಸಾಧಿಸಿತು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ 35 ನಾಡುಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ನಾಲ್ನಾಡು 15 ಗ್ರಾಮಗಳನ್ನು ಒಳಗೊಂಡು ಪ್ರಸಿದ್ಧಿ ಪಡೆದಿದೆ. ಇಲ್ಲಿ ನಾಲ್ನಾಡ್‌ ಕಪ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಪ್ರತಿ ವರ್ಷ ಹಾಕಿ ಪಂದ್ಯಾವಳಿಯನ್ನು ಆಯೋಜಿಸುವುದರಿಂದ ಗ್ರಾಮೀಣ ಭಾಗದ ಹಲವು ಪ್ರತಿಭೆಗಳು ಹೊರಬರಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದು ಆಶಿಸಿದರು.

ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್ ಉಮೇಶ್ ಮಾತನಾಡಿ, ನಾನ್ನಾಡ್ ಕಪ್ ಹಾಕಿ ಪಂದ್ಯಾವಳಿಯು ಕೇವಲ ಗ್ರಾಮೀಣ ಮಟ್ಟಕ್ಕೆ ಸೀಮಿತವಾಗಬಾರದು. ಇದು ಜಿಲ್ಲಾ ಮಟ್ಟದಲ್ಲಿ ಖ್ಯಾತಿ ಗಳಿಸಬೇಕು. ಪಂದ್ಯಾವಳಿ ಮೂಲಕ ಉತ್ತಮ ಆಟಗಾರರು ಹೊರಬರುವಂತಾಗಲಿ ಎಂದರು

ನಾಲ್ ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಒಲಂಪಿಯನ್ ಮನೆಯಪಂಡ ಸೋಮಯ್ಯ ಕೂರ್ಗ್ ಹಾಕಿ ಅಸೋಸಿಯೇಷನ್ ನ ಅಧ್ಯಕ್ಷ ಪಳಂಗಡ ಲವ ಕುಮಾರ್, ಹಗ್ಗ ಜಗ್ಗಾಟ ಪಂದ್ಯಾವಳಿಯ ಟ್ರೊಫಿ ದಾನಿಗಳಾದ ತೋಲಂಡ ಸೋಮಯ್ಯ, ಬೊಟ್ಟೋಳಂಡ ಸದಾ, ನಾಪೋಕ್ಲು ಕೊಡವ ಸಮಾಜ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಕೂಪದಿರ ಗಣಪತಿ, ಉದ್ಯಮಿ ಮಂಡಿರ ದೇವಿ, ಕ್ಲಬ್ ನ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ, ಖಜಾಂಜಿ ಚೀಯಂಡಿ ದಿನೇಶ್ , ಸಹ ಕಾರ್ಯದರ್ಶಿ ಮಚ್ಚುರ ಯದುಕುಮಾರ್ ಹಾಗೂ ನಿರ್ದೇಶಕರು ಮತ್ತು ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.

ಟೂರ್ನಿ ಡೈರೆಕ್ಟರ್ ಕರವಂಡ ಅಪ್ಪಣ್ಣ, ತೀರ್ಪುಗಾರರಾಗಿ ಬೊಳ್ಳಚoಡ ನಾಣಯ್ಯ, ಚೈಯಂಡ ಅಪ್ಪಚ್ಚು, ಪಟ್ರಪ೦ಡ ಮಂದಣ್ಣ, ಕೊಳುವಂಡ ಚಂಗಪ್ಪ, ಕುಪ್ಪಂಡ ದಿಲನ್, ಅನ್ನಡಿಯ೦ಡ ಪೊನ್ನಪ್ಪ, ತಾಂತ್ರಿಕ ಸಮಿತಿ ವಿನೋದ್ (ಜೆಸಿಬಿ) ನಿರ್ವಹಿಸಿದರು.

ಇದಕ್ಕೂ ಮೊದಲು ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ವಿಶೇಷ ವಾದ್ಯ ಮೇಲೆಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಶಿಕ್ಷಕಿ ನುಚ್ಚಿಮಣಿಯಂಡ ರಸಿತಾ ಮುತ್ತಣ್ಣ ಪ್ರಾರ್ಥಿಸಿ ಕ್ಲಬ್ ಸಂಚಾಲಕ

ಏ.ಕೆ. ಮನು ಮುತ್ತಪ್ಪಸ್ವಾಗತಿಸಿದರು. ವೀಕ್ಷಕ ವಿವರಣೆಗಾರರಾಗಿ

ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು.