ನಾಪೋಕ್ಲು: ಈದ್ ಮಿಲಾದ್ ಸಂಭ್ರಮ

| Published : Sep 10 2025, 01:04 AM IST

ಸಾರಾಂಶ

ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಜನ್ಮದಿನ ಈದ್‌ ಮಿಲಾದ್‌ ಅಂಗವಾಗಿ ನಾಡಿನಲ್ಲಿ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ನಾಡಿನಲ್ಲಿ ಉತ್ಸವವನ್ನು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.

ನಾಪೋಕ್ಲು ವ್ಯಾಪ್ತಿಯ ವಿವಿಧ ಮಸೀದಿ ಮದರಸಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು 12, 13, 14ರಂದು ಜರಗುತ್ತಿದ್ದು ಮಸೀದಿ ಮದರಸಗಳನ್ನು ಸಜ್ಜುಗೊಳಿಸಲಾಗಿದೆ ರಾತ್ರಿ ವೇಳೆ ಬಣ್ಣದ ವಿದ್ಯುತ್ ಅಲಂಕೃತ ಕಟ್ಟಡಗಳು, ರಸ್ತೆಗಳು ಶೋಭಾಯಮಾನವಾಗಿ ಕಂಗೊಳಿಸುತ್ತಿವೆ.

ನಾಪೋಕ್ಲು ಸೇರಿದಂತೆ ವಿವಿಧ ಜಮಾಯತಿಗೆ ಒಳಪಟ್ಟ ಮಸೀದಿ, ದರ್ಗಾ, ಮದ್ರಾಸಗಳು ವಿದ್ಯುತ್ ಅಲಂಕೃತಗೊಂಡಿವೆ. ನಾಪೋಕ್ಲು ಪಟ್ಟಣದ ಮೋಹಿದೀನ್ ಜುಮ್ಮಾ ಮಸೀದಿ, ಸಮೀಪದ ಹಳೆ ತಾಲೂಕಿನ ಜುಮ್ಮಾ ಮಸೀದಿ, ಚೆರಿಯ ಪರಂಬು, ಕೊಟ್ಟ ಮುಡಿ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ಪಡಿಯನಿ, ಎಡಪಾಲ ಅಯ್ಯಂಗೇರಿ ಸೇರಿದಂತೆ ಮಸೀದಿಯು ವಿದ್ಯುತ್ ಆಲಂಕೃತಗೊಂಡು ಶೋಭಾಯಮಾನವಾಗಿ ಕಂಗೊಳಿಸುತ್ತಿದೆ. ಪಟ್ಟಣದ ಮೋಹಿದೀನ್ ಜುಮ್ಮಾ ಮಸೀದಿ, ಮದರಸ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು 12,13,14ರಂದು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ದಪ್ಪು ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.