ಈ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಪೂಜಾ ಹಾಗೂ ಹೋಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಾತ್ರರಾಗಿದ್ದಾರೆ. ಹಿಂದೂ ಧರ್ಮದಲ್ಲಿ ನೃಸಿಂಹ ಜಯಂತಿಗೆ ವಿಶೇಷ ಮಹತ್ವವಿದ್ದು, ಭಗವಾನ್ ಶ್ರೀ ಮಹಾವಿಷ್ಣುವಿನ ನಾಲ್ಕನೇ ಅವತಾರವಾದ ಶ್ರೀ ನೃಸಿಂಹಸ್ವಾಮಿಯ ಆರಾಧನೆಗೆ ಈ ದಿನ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ದುಷ್ಟ ಸಂಹಾರ ಮತ್ತು ಶಿಷ್ಟರ ರಕ್ಷಣೆಯ ಸಂಕೇತವಾಗಿರುವ ನೃಸಿಂಹಸ್ವಾಮಿಯ ಆರಾಧನೆಯಿಂದ ಭಕ್ತರಿಗೆ ಶಾಂತಿ, ಸಮೃದ್ಧಿ ಹಾಗೂ ಕಷ್ಟ ನಿವಾರಣೆ ಲಭಿಸುತ್ತದೆ ಎಂಬ ನಂಬಿಕೆ ಇದೆ ಎಂದರು. ಮಹೋತ್ಸವದ ಅಂಗವಾಗಿ ಏಪ್ರಿಲ್ ೨೯ರಂದು ಸಂಜೆ ೫ ಗಂಟೆಯಿಂದ ಮಹಾಸುದರ್ಶನ ಹೋಮ ಹಾಗೂ ಶ್ರೀ ಲಕ್ಷ್ಮೀ ನೃಸಿಂಹ ಕಲ್ಯಾಣೋತ್ಸವ ನಡೆದಿದೆ.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಪ್ರಸಿದ್ಧ ಶ್ರೀ ಕಂಬದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವೈಶಾಖ ಶುಕ್ಲ ಚತುರ್ದಶಿಯ ಅಂಗವಾಗಿ ನೃಸಿಂಹ ಜಯಂತಿ ಮಹೋತ್ಸವವನ್ನು ಗುರುವಾರ ಭಕ್ತಿಭಾವದಿಂದ ಹಾಗೂ ವೈಭವವಾಗಿ ಆಚರಿಸಲಾಯಿತು.ಇದೇ ವೇಳೆ ಶ್ರೀ ಕಂಬದ ನರಸಿಂಹಸ್ವಾಮಿ ಸೇವಾ ಸಮಿತಿ ಸಂಚಾಲಕರಾದ ಎಚ್. ದೇವರಾಜು ಮಾಧ್ಯಮದೊಂದಿಗೆ ಮಾತನಾಡಿ, ಈ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಪೂಜಾ ಹಾಗೂ ಹೋಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಾತ್ರರಾಗಿದ್ದಾರೆ. ಹಿಂದೂ ಧರ್ಮದಲ್ಲಿ ನೃಸಿಂಹ ಜಯಂತಿಗೆ ವಿಶೇಷ ಮಹತ್ವವಿದ್ದು, ಭಗವಾನ್ ಶ್ರೀ ಮಹಾವಿಷ್ಣುವಿನ ನಾಲ್ಕನೇ ಅವತಾರವಾದ ಶ್ರೀ ನೃಸಿಂಹಸ್ವಾಮಿಯ ಆರಾಧನೆಗೆ ಈ ದಿನ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ದುಷ್ಟ ಸಂಹಾರ ಮತ್ತು ಶಿಷ್ಟರ ರಕ್ಷಣೆಯ ಸಂಕೇತವಾಗಿರುವ ನೃಸಿಂಹಸ್ವಾಮಿಯ ಆರಾಧನೆಯಿಂದ ಭಕ್ತರಿಗೆ ಶಾಂತಿ, ಸಮೃದ್ಧಿ ಹಾಗೂ ಕಷ್ಟ ನಿವಾರಣೆ ಲಭಿಸುತ್ತದೆ ಎಂಬ ನಂಬಿಕೆ ಇದೆ ಎಂದರು. ಮಹೋತ್ಸವದ ಅಂಗವಾಗಿ ಏಪ್ರಿಲ್ ೨೯ರಂದು ಸಂಜೆ ೫ ಗಂಟೆಯಿಂದ ಮಹಾಸುದರ್ಶನ ಹೋಮ ಹಾಗೂ ಶ್ರೀ ಲಕ್ಷ್ಮೀ ನೃಸಿಂಹ ಕಲ್ಯಾಣೋತ್ಸವ ನಡೆದಿದೆ. ಜಯಂತಿ ಅಂಗವಾಗಿ ಗುರುವಾರದಂದು ಬೆಳಿಗ್ಗೆ ೬ ಗಂಟೆಯಿಂದ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಹಾಗೂ ನೃಸಿಂಹ ಮೂಲಮಂತ್ರ ಹೋಮ ನಡೆಯಲಿದೆ. ಪೂಜಾ ವಿಧಿವಿಧಾನಗಳು ಪಂಡಿತರ ನೇತೃತ್ವದಲ್ಲಿ ನೆರವೇರಿಸಲಾಗಿದೆ. ಬೆಳಿಗ್ಗೆ ದೇವಸ್ಥಾನದ ಬೀದಿಗಳಲ್ಲಿ ಶ್ರೀ ದೇವರ ಉತ್ಸವವನ್ನು ಭಕ್ತಿಭಾವದಿಂದ ಯಶಸ್ವಿಯಾಗಿ ನಡೆಸಲಾಗಿದೆ. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನೆರವೇರಿತು. ನಂತರ ಸಾವಿರಾರು ಭಕ್ತರಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ವರ್ಷವೂ ನೃಸಿಂಹ ಜಯಂತಿಯನ್ನು ವಿಶೇಷ ಭಕ್ತಿಭಾವದಿಂದ ಆಚರಿಸಲಾಗುತ್ತಿದ್ದು, ಈ ಬಾರಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದೇವಸ್ಥಾನದ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಭಕ್ತರು ಶಾಂತಿಯುತವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿದ್ದಾರೆ ಎಂದರು. ಭಕ್ತಾದಿಗಳು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಶ್ರೀ ಕಂಬದ ನರಸಿಂಹಸ್ವಾಮಿ ದೇವರ ಆಶೀರ್ವಾದ ಪಡೆದು ತಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಬೇಕು ಎಂದು ಹಾರೈಸಿದರು.