ಸಾರಾಂಶ
ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ನರಸೇಗೌಡ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಮುನಿರಾಜು ವಿರುದ್ಧ 176 ಮತಗಳ ಅಂತರದಲ್ಲಿ ಕೆ.ಎಲ್. ನರಸಿಂಹಮೂರ್ತಿ ಗೆದ್ದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಗ್ರಾಮ ಮುಖಂಡರ ಸಹಕಾರದಿಂದ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ರೈತರಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನು ಮುಟ್ಟಿಸುವಲ್ಲಿ ನಿರ್ದೇಶಕರ ಜತೆ ಕೈಜೊಡಿಸುತ್ತೇನೆ ಎಂದರು. ನೂತನ ನಿರ್ದೇಶಕ ನರಸಿಂಹಮೂರ್ತಿ ಅವರನ್ನು ಮುಖಂಡರಾದ ಬೈರೇಗೌಡ, ವೆಂಕಟೇಶ್, ತಿಮ್ಮೇಗೌಡ, ಮಲ್ಲಿ ಕಾರ್ಜುನ, ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕರಾದ ರಮೇಶ್, ಮಂಜುಳಾ, ಈರಯ್ಯ, ಲಕ್ಷ್ಮೀಕಾಂತ್, ಜಯರಾಂ, ಲೋಕೇಶ್, ಭೋಜರಾಜ, ಗಂಗಹನು ಮಯ್ಯ, ವಾದಕುಂಟೆ ಸುಬ್ಬಣ್ಣ, ಗೂಳಾಪುರ ಪುಟ್ಟರಾಜು, ಕೋಡಿಪಾಳ್ಯ ಗಂಗಾಧರ್, ರಾಜಣ್ಣ, ಗಂಗಣ್ಣ, ಗ್ರಾಪಂ ಸದಸ್ಯರಾದ ಲೋಕೇಶ್, ಶ್ರೀನಿವಾಸ್, ಮಾಜಿ ಸದಸ್ಯ ತೋಟನಹಳ್ಳಿ ಪ್ರದೀಪ್ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಅಭಿನಂದಿಸಿದರು.ಪೋಟೋ 7 :ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಕೆ.ಎಲ್.ನರಸಿಂಹಮೂರ್ತಿ ಅವರನ್ನು ಮುಖಂಡರಾದ ಬೈರೇಗೌಡ, ವೆಂಕಟೇಶ್, ತಿಮ್ಮೇಗೌಡ, ಮಲ್ಲಿ ಕಾರ್ಜುನ, ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕರಾದ ರಮೇಶ್, ಮಂಜುಳಾ ಇತರರು ಅಭಿನಂದಿಸಿದರು.