ಸಾರಾಂಶ
ಜಾತಿ ಮೀರಿದ ಧರ್ಮನೀತಿಗೆ ಒತ್ತು ನೀಡಿದ ಬ್ರಹ್ಮರ್ಷಿ ನಾರಾಯಣ ಗುರು ಅವರ ಸ್ಮರಣೆ ಅತ್ಯಗತ್ಯ.
ಕುಮಟಾ: ಜಾತಿ ಮೀರಿದ ಧರ್ಮನೀತಿಗೆ ಒತ್ತು ನೀಡಿದ ಬ್ರಹ್ಮರ್ಷಿ ನಾರಾಯಣ ಗುರು ಅವರ ಸ್ಮರಣೆ ಅತ್ಯಗತ್ಯ. ಭಾರತದ ಇಂಥ ಅನೇಕ ಪುಣ್ಯ ಪುರುಷರ ಚಿಂತನೆಗಳನ್ನು ನಾವೆಲ್ಲ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕು ಸೌಧದಲ್ಲಿ ತಾಲೂಕಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.ಚಿಂತಕ ಈಶ್ವರ ನಾಯ್ಕ ಮಾತನಾಡಿ, ಎರಡು ಶತಮಾನಗಳ ಹಿಂದೆಯೇ ಅಸ್ಪ್ರಶ್ಯತೆ, ಜಾತೀಯತೆ, ಢಂಬಾಚಾರದ ವಿರುದ್ಧ ಜನಜಾಗೃತಿ ಮೂಡಿಸಿದ ನಾರಾಯಣ ಗುರು ಸಾಮಾಜಿಕ ಕೀಳು ಪರಿಸ್ಥಿತಿಯನ್ನು ಸ್ವತಃ ಕಂಡು ಅನುಭವಿಸಿದ್ದರು ಎಂದರು.
ವಿಶೇಷ ಉಪನ್ಯಾಸ ಮಾಡಿದ ಶಿಕ್ಷಕ ರಾಮಚಂದ್ರ ಮಡಿವಾಳ, ಬುದ್ಧ ಹಾಗೂ ಬಸವ ತತ್ವಗಳ ಹೋರಾಟದ ಸಾಕಾರ ಮೂರ್ತಿಯೇ ಬ್ರಹ್ಮರ್ಷಿ ನಾರಾಯಣ ಗುರು. ಸಮಾಜ ಉದ್ಧಾರ ಮಾಡಿದರೆ ಸರ್ವರ ಉದ್ಧಾರ ಮಾಡಿದಂತೆ ಎಂಬ ಪರಿಕಲ್ಪನೆಯಲ್ಲಿ ಜೀವನದುದ್ದಕ್ಕೂ ಸಂಘರ್ಷವಿಲ್ಲದ ಹೋರಾಟ ನಡೆಸಿದರು ಎಂದರು.ಕಾರ್ಯಕ್ರಮದಲ್ಲಿ ತಾಪಂ ಇಒ ರಾಜೇಂದ್ರ ಎಲ್. ಭಟ್, ನಾಮಧಾರಿ ಆರ್ಯ ಈಡಿಗ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಆರ್. ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ ಅಶೋಕ ಭಟ್ ಇತರರು ಇದ್ದರು. ತಹಸೀಲ್ದಾರ ಶ್ರೀಕೃಷ್ಣಕಾಮಕರ ಸ್ವಾಗತಿಸಿದರು. ಕಂದಾಯ ಅಧಿಕಾರಿ ಟಿ.ಜಿ. ಗಾಣಿಗೇರ ನಿರ್ವಹಿಸಿದರು.