ನಾರಾಯಣ ಗುರು ಆದರ್ಶ ಪಾಲಿಸಿ

| Published : Sep 24 2025, 01:00 AM IST

ಸಾರಾಂಶ

ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳವರ 171ನೇ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಸರಳವಾಗಿ ಮಂಗಳವಾರ ಆಚರಿಸಲಾಯಿತು

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳವರ

171ನೇ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಸರಳವಾಗಿ ಮಂಗಳವಾರ ಆಚರಿಸಲಾಯಿತು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು.

ತಾಲೂಕು ಶಿಕ್ಷಣ ಸಂಯೋಜಕ ಬಸವರಾಜು ಮಾತನಾಡಿ, ನಾರಾಯಣ ಗುರು ಅವರು ಸಮಾಜದ ಮಧ್ಯೆ ಸಮಾನತೆ, ಬಾಂಧವ್ಯ ಮತ್ತು ಶಿಕ್ಷಣದ ಬೆಳಕನ್ನು ಹರಡಿದ ಮಹಾನ್ ಚೇತನ ಎಂದು ಬಣ್ಣಿಸಿದರು. ಜಾತಿ-ಬೇದಭಾವವಿಲ್ಲದೆ ಎಲ್ಲಾರಿಗೂ ಮಾನವೀಯ ಮೌಲ್ಯಗಳನ್ನು ಸಾರಿದ ಸಂತರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ, ಜಯಂತಿ ಆಚರಣೆ ವೇಳೆ ಕಿಂಚಿತ್ತಾದರೂ ನಾವೆಲ್ಲರೂ ಗಣ್ಯ- ಮಹನೀಯರ ಆದರ್ಶ ತತ್ವಗಳನ್ನು ಕಿಂಚಿತ್ತಾದರೂ ಅಳವಡಿಸಿಕೊಳ್ಳೋಣ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರಾಜು ಮಾತನಾಡಿ, ಇಂದಿನ ಸಮಾಜದಲ್ಲಿ ನಾರಾಯಣ ಗುರುಗಳ ಆದರ್ಶಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ. ಅವರು ಬೋಧಿಸಿದ ಸತ್ಯ, ಧರ್ಮ ಮತ್ತು ಸಮಾಜ ಸೇವೆಯ ಮಾರ್ಗವು ಪ್ರತಿಯೊಬ್ಬರ ಜೀವನದಲ್ಲಿ ಬೆಳಕಿನ ದಾರಿ ಆಗಬೇಕು, ಅವರ ಆದಶ೯ ಗುಣಗಳು ನಮಗೆಲ್ಲರಿಗೂ ಮಾದರಿಯಾಗಬೇಕಿದೆ ಎಂದರು.ಆರ್ಯ ಈಡಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ. ರವಿನಂದನ್, ಮುಖಂಡರಾದ ಡಿ. ನಟರಾಜುಗೌಡ, ಎಂ.ವಿ. ಶ್ರೀನಿವಾಸ್, ಬಿ. ವೆಂಕಟಪ್ಪ, ಕಿರಣ್ ಕುಮಾರ್, ಲಿಂಗರಾಜು, ಯೋಗೇಶ್, ಯಶವಂತ್ ಕುಮಾರ್, ವರದರಾಜು ಇನ್ನಿತರಿದ್ದರು