ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ನಾಪೋಕ್ಲು ಶಾಖೆ ವತಿಯಿಂದ 172ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಕ್ರೀಡಾಕೂಟವನ್ನು ನ. 25 ರಿಂದ 29 ರವರೆಗೆ ಅದ್ಧೂರಿಯಿಂದ ಆಚರಿಸಲಾಗುವುದು ಎಂದು ಆಚರಣೆ ಸಮಿತಿ ಅಧ್ಯಕ್ಷ ರಾಜೀವ್ ಟಿ ಸಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಾಪೋಕ್ಲು : ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ನಾಪೋಕ್ಲು ಶಾಖೆ ವತಿಯಿಂದ 172ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಕ್ರೀಡಾಕೂಟವನ್ನು ನ. 25 ರಿಂದ 29 ರವರೆಗೆ ಅದ್ಧೂರಿಯಿಂದ ಆಚರಿಸಲಾಗುವುದು ಎಂದು ಆಚರಣೆ ಸಮಿತಿ ಅಧ್ಯಕ್ಷ ರಾಜೀವ್ ಟಿ ಸಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.29 ರಂದು ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆ ವತಿಯಿಂದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುವುದು. ಇದರ ಪ್ರಯುಕ್ತ ನ. 25 ರಿಂದ 29 ರವರೆಗೆ ಸರ್ವಧರ್ಮೀಯರಿಗೆ ಕ್ರಿಕೆಟ್, ಹಗ್ಗ ಜಗ್ಗಾಟ ಮತ್ತು ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದೆ. 29ರಂದು ಪೂರ್ವಾಹ್ನ 9 ಗಂಟೆಗೆ ಇಲ್ಲಿಯ ಮಾರುಕಟ್ಟೆ ಆವರಣದಿಂದ ಗುರುವಿನ ಅಲಂಕೃತ ಮಂಟಪ ಮೆರವಣಿಗೆ ಉದ್ಘಾಟನೆ ನಡೆಯಲಿದೆ. ಎಸ್ ಎನ್ ಡಿ ಪಿ ಶಾಖೆಯ ಉಪಾಧ್ಯಕ್ಷ ಸುರೇಶ್, ಮಹಿಳಾ ಘಟಕದ ಅಧ್ಯಕ್ಷ ವಿನೀತಾ ಸುರೇಶ್, ಮಹಿಳಾ ಘಟಕದ ಕಾರ್ಯದರ್ಶಿ ಆಶಾ, ನಿರ್ದೇಶಕಿ ಸುಲೋಚನಾ ಅನಿಲ್ ಮೆರವಣಿಗೆ ಉದ್ಘಾಟಿಸುವರು ಎಂದರು.

ಮಧ್ಯಾಹ್ನ 1 ಗಂಟೆಗೆ ಇಲ್ಲಿಯ ಜೆಎಪಿ ಶಾಲಾ ಮೈದಾನದಲ್ಲಿ ಎಸ್ ಎನ್ ಡಿ ಪಿ ಶಾಖೆಯ ಅಧ್ಯಕ್ಷ ಟಿ.ಸಿ ಲವ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಉದ್ಘಾಟಿಸುವರು. ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡುವರು. ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ, ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ, ಕೊಡಗು ಜಿಲ್ಲಾ ಎಸ್ಎನ್ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ ಲೋಕೇಶ್ , ಕಾರ್ಯದರ್ಶಿ ಪ್ರೇಮಾನಂದ, ಬೆಂಗಳೂರು ಕೂಡವ ಸಮಾಜ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ನಂದಿನಿ ಆಸ್ಪತ್ರೆಯ ವೈದ್ಯ ದೇವದಾಸ್, ಗಾಯತ್ರಿ ಕ್ಲಿನಿಕ್ ನ ವೈದ್ಯ ಚಂಗಪ್ಪ, ಸೆಂಟ್ ಮೇರಿಸ್ ಚರ್ಚ್ ಧರ್ಮಗುರು ರಘು ವಿಕ್ಟರ್, ಟೌನ್ ಜುಮಾ ಮಸೀದಿ ಧರ್ಮ ಗುರು ಶೌಕತ್ ಆಲಿ ಸಖಾಫಿ , ಬಿಲ್ಲವ ಸಮಾಜದ ಅಧ್ಯಕ್ಷ ಪ್ರತೀಪ ಬಿ ಎಂ, ಕಾಫಿ ಬೆಳೆಗಾರ ಅರೆಯಡ ರತ್ನಾ ಪೆಮ್ಮಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಎಸ್ ಎನ್ ಡಿ ಪಿ ಶಾಖೆಯ ಅಧ್ಯಕ್ಷ ಟಿ ಸಿ ಲವ ಮಾತನಾಡಿ 25 ಮತ್ತು 26ರಂದು ಪುರುಷರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. 29ರಂದು ಜಿಲ್ಲಾ ಮಟ್ಟದ ಪುರುಷರ ಹಗ್ಗ ಜಗ್ಗಾಟ ಫೈನಲ್ಸ್ ಸ್ಪರ್ಧೆ ನಡೆಯಲಿದೆ. 27ರಂದು ಮಹಿಳೆಯರ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. 28-29-ರಂದು ಪುರುಷರ ವಾಲಿಬಾಲ್ ಫೈನಲ್ ಪಂದ್ಯಾವಳಿ ನಡೆಯಲಿದೆ ಹಾಗೂ 29ರಂದು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಮತ್ತು ಅತಿಥಿ ಕಲಾವಿದರಾದ ಚಾಲಕುಡಿ ರಾಜು ಹಾಗೂ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 20,000 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ಹತ್ತು ಸಾವಿರ ರುಪಾಯಿ ನಗದು ಟ್ರೋಫಿ ವಿತರಿಸಲಾಗುವುದು ಪುರುಷರ ಹಗ್ಗಜಗ್ಗಾಟ ಸ್ಪರ್ಧೆಗೆ ಪ್ರಥಮ 22, 222. ನಗದು ಹಾಗೂ ಟ್ರೋಫಿ ದ್ವಿತೀಯ ಬಹುಮಾನ 11, 111 ರು. ನಗದು ಹಾಗೂ ಟ್ರೋಫಿ ವಿತರಿಸಲಾಗುವುದು. ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ ಸ್ಥಾನ ಪಡೆದ ವಿಜೇತರಿಗೆ ಹದಿನೈದು ಸಾವಿರ ರುಪಾಯಿ ನಗದು ಹಾಗೂ ಟ್ರೋಫಿ ದ್ವಿತೀಯ ಬಹುಮಾನ ಹತ್ತು ಸಾವಿರ ರುಪಾಯಿ ನಗದು ಹಾಗೂ ಟ್ರೋಫಿ ವಿತರಿಸಲಾಗುವುದು. ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ವಿಜೇತರಿಗೆ 15,000 ನಗದು ಹಾಗೂ ದ್ವಿತೀಯ ಬಹುಮಾನ ಹತ್ತು ಸಾವಿರ ರುಪಾಯಿ ನಗದು ಮತ್ತು ಟ್ರೋಫಿ ವಿತರಿಸಲಾಗುವುದು ಎಂದರು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್ –9741339029 – 8310265327.

ಪತ್ರಿಕಾಗೋಷ್ಠಿಯಲ್ಲಿ ಎಸ್ ಎನ್ ಡಿ ಪಿ ಶಾಖೆಯ ಕಾರ್ಯದರ್ಶಿ ಶ್ರೀಧರ್, ಉಪಾಧ್ಯಕ್ಷ ತಂಗಾ, ಚಿನ್ನ ರಧೀಶ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.