ಸಮಾಜ ಸುಧಾರಣೆಯ ಆರದ ದೀಪ ನಾರಾಯಣ ಗುರು: ಡಾ.ಚಿಕ್ಕಪ್ಪ ನಾಯಕ

| Published : Sep 10 2025, 01:04 AM IST

ಸಾರಾಂಶ

ನಾರಾಯಣ ಗುರುಗಳ ಯಾವುದೇ ತಾರತಮ್ಯವಿಲ್ಲದೇ ಎಲ್ಲರೂ ಒಂದೇ ಜಾತಿ ಎಂದು ಸಾರಿದವರು

ಅಂಕೋಲಾ: ನಾರಾಯಣ ಗುರುಗಳ ಸಮಾಜದಲ್ಲಿ ಸಮಾನತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಇಂತವರ ಜಯಂತಿಯನ್ನು ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ತಹಸೀಲ್ದಾರ ಡಾ.ಚಿಕ್ಕಪ್ಪ ನಾಯಕ ಹೇಳಿದರು.

ಪಟ್ಟಣದ ಅಜ್ಜಿಕಟ್ಟಾದ ಕ್ರೈಸ್ತಮಿತ್ರ ಆಶ್ರಮದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ನಾರಾಯಣ ಗುರುಗಳ 171ನೇ ಜನ್ಮದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್. ನಾಯ್ಕ ಮಾತನಾಡಿ, ನಾರಾಯಣ ಗುರುಗಳ ಯಾವುದೇ ತಾರತಮ್ಯವಿಲ್ಲದೇ ಎಲ್ಲರೂ ಒಂದೇ ಜಾತಿ ಎಂದು ಸಾರಿದವರು. ಅಂತವರ ವಿಚಾರವನ್ನು ತಿಳಿದುಕೊಳ್ಳಲು ಮತ್ತು ಜೀವನದಲ್ಲಿ ಸಾಧನೆ ಮಾಡಬೇಕೆಂದರೆ ಮೊದಲು ಶಿಕ್ಷಣವಂತರಾಗಬೇಕು. ಪಾಲಕರು ಕೂಡ ತಮ್ಮ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು.

ಕರ್ನಾಟಕ ಆರ್ಯ ಈಡಿಗ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ನಾಯ್ಕ ಮಾತನಾಡಿ, ಸಮಾಜದ ಒಗ್ಗಟ್ಟಿನ ಜತೆಗೆ ಶಿಕ್ಷಣ ಕ್ಷೇತ್ರಕ್ಕೆ ನಾರಾಯಣ ಗುರುಗಳು ಹೆಚ್ಚಿನ ಮಹತ್ವ ನೀಡಿದ್ದರು ಎಂದರು.

ನಾಮಧಾರಿ ಸಮಾಜದ ಮುಖಂಡ ರಾಜೇಂದ್ರ ನಾಯ್ಕ,ಹಿರಿಯ ಸಾಹಿತಿ ರಾಮಕೃಷ್ಣ ಗುಂದಿ ಮಾತನಾಡಿ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಆರ್ಯ ಈಡಿಗ ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಆರ್. ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಮಾತನಾಡಿದರು.

ರಾಷ್ಟ್ರೀಯ ಈಡಿಗ ಮಹಾಮಂಡಳಿ ತಾಲೂಕು ಅಧ್ಯಕ್ಷ ದಾಮೋದರ ಜಿ. ನಾಯ್ಕ ಸ್ವಾಗತಿಸಿದರು. ಉಮೇಶ ನಾಯ್ಕ ನಿರ್ವಹಿಸಿದರು. ನಾಗರಾಜ ಮಂಜಗುಣಿ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿದರು. ಮಹಾಂತೇಶ ರೇವಡಿ, ಜಗದೀಶ ಜಿ. ನಾಯಕ ಮಾತನಾಡಿದರು. ಭಾವನಾ ನಾಯಕ ವಂದಿಸಿದರು.

ಈ ಸಂದರ್ಭದಲ್ಲಿ ಶಿರಸ್ತೇದಾರ ಗಿರೀಶ ಜಾಂಬವಳಿಕರ, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಪ್ರಮುಖರಾದ ಉಪೇಂದ್ರ ನಾಯ್ಕ, ಏಕನಾಥ ನಾಯ್ಕ, ಉಮೇಶ ಜಿ. ನಾಯ್ಕ, ಶ್ರೀಪಾದ ನಾಯ್ಕ, ಮಂಜುಳಾ ನಾಯ್ಕ, ಮಂಜುನಾಥ ನಾಯ್ಕ ಬೆಳಂಬಾರ, ಗಣಪತಿ ನಾಯ್ಕ, ಗಣೇಶ ನಾಯ್ಕ ಉಪಸ್ಥಿತರಿದ್ದರು.

ಸನ್ಮಾನ : ನಾರಾಯಣ ಗುರು ಜಯಂತಿ ನಿಮಿತ್ತ ತಹಸೀಲ್ದಾರ ಡಾ. ಚಿಕ್ಕಪ್ಪ ನಾಯಕ, ನಾಟಿವೈದ್ಯ ಹನುಮಂತ ಗೌಡ, ಸಾಹಿತಿ ರಾಮಕೃಷ್ಣ ಗುಂದಿ, ಆಶ್ರಮದ ಮೇಲ್ವಿಚಾರಕ ಬಾಬು ಅವರನ್ನು ಸನ್ಮಾನಿಸಲಾಯಿತು.

ಕೊಡುಗೆ: ಕ್ರೈಸ್ತಮಿತ್ರ ಆಶ್ರಮಕ್ಕೆ ಅಗತ್ಯವಿರುವ ಮಿಕ್ಸರ್, ಊಟದ ಪ್ಲೇಟ್, ಕಪ್, ಚಮಚ ಸೇರಿ 10 ಸಾವಿರಕ್ಕೂ ಅಧಿಕ ಮೌಲ್ಯದ ಪರಿಕರ ವಿತರಿಸಿ ನಂತರ ಎಲ್ಲ ಆಶ್ರಮವಾಸಿಗಳಿಗೆ ಊಟ ನೀಡಿದರು.