ತಾಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ನುಲೀಯ ಚಂದಯ್ಯ ಜಯಂತಿ ಆಚರಿಸಲಾಯಿತು.
ಭಟ್ಕಳದಲ್ಲಿ ನಾರಾಯಣಗುರು, ನುಲಿಯ ಚಂದಯ್ಯ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ ಭಟ್ಕಳತಾಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ನುಲೀಯ ಚಂದಯ್ಯ ಜಯಂತಿ ಆಚರಿಸಲಾಯಿತು.
ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ, ಶ್ರೀ ನಾರಾಯಣ ಗುರುಗಳು ೧೮ ನೇ ಶತಮಾನದಲ್ಲಿ ಸಮಾಜ ಸುಧಾರಕರಾಗಿ ಹಾಗೂ ಆಧ್ಯಾತ್ಮಿಕ ನಾಯಕರಾಗಿ ಸಮಾಜದಲ್ಲಿ ಅನೇಕ ಬದಲಾವಣೆ ತಂದರು. ಅಂದಿನ ಕಾಲದಲ್ಲಿ ಇದ್ದ ಜಾತಿ ಪದ್ದತಿ ಅಸಮಾನತೆ ಮತ್ತು ಅಜ್ಞಾನವನ್ನು ವಿರೋಧಿಸಿ ಶಿಕ್ಷಣ, ಸ್ವಾಭಿಮಾನ, ಸಮಾನತೆ ಮತ್ತು ಮಾನವೀಯತೆಯ ಮಹತ್ವವನ್ನು ಸಾರಿದ ಮಹಾನ ಪುರುಷರಾಗಿದ್ದರು. ಆಗಿನ ಕಾಲದಲ್ಲಿ ಎಲ್ಲರಿಗೂ ಶಿಕ್ಷಣದ ಹಕ್ಕು ಇರಬೇಕೆಂದು ಪ್ರತಿಪಾದಿಸಿದ್ದರು ಎಂದರು.ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಗೌರವಾಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿದರು.
ಭಟ್ಕಳ ಉಪ ವಿಭಾಗಾಧಿಕಾರಿ ಮಹೇಶ ಅಧ್ಯಕ್ಷತೆ ವಹಿಸಿದ್ದರು.ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ನಾಗೇಂದ್ರ ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಗುರುಮಠದ ಉಪಾಧ್ಯಕ್ಷ ಎಂ.ಕೆ. ನಾಯ್ಕ, ತಾಲೂಕು ಶ್ರೀ ನಾರಾಯಣಗುರು ಸಮಿತಿಯ ಸಂಚಾಲಕ ಮನಮೋಹನ ನಾಯ್ಕ ಇದ್ದರು. ಪ್ರಾರಂಭದಲ್ಲಿ ಶ್ರೀ ಗುರುಗಳ ಹಾಗೂ ನುಲಿಯ ಚಂದಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾಚರಣೆ ಸಲ್ಲಿಸಲಾಯಿತು. ಕಾರ್ಯಕ್ರಮದಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ರಾಜು ನಾಯ್ಕ, ಎಂ.ಆರ್. ನಾಯ್ಕ, ಡಿ.ಎಲ್. ನಾಯ್ಕ, ರವೀಂದ್ರ ನಾಯ್ಕ, ವಾಸು ನಾಯ್ಕ, ಸುರೇಶ ನಾಯ್ಕ, ಮಂಜು ನಾಯ್ಕ, ತಾಲೂಕು ಆಡಳಿತದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.