ಸಾರಾಂಶ
ಸಂಕ್ರಾಂತಿ ಹಬ್ಬದ ಹಿನ್ನೆಲೆ ಕೊಳ್ಳೇಗಾಲ ಪಟ್ಟಣದ ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ಸೋಮವಾರ ಬೆಳಗಿನಿಂದ ಸಂಜೆ ತನಕ ಜರುಗಿತು. ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಗರುಡಕಂಬ, ಆಂಜನೇಯ, ಗಣಪತಿ ಮೂರ್ತಿಗಳಿಗೆ ಸುಮಾರು 25 ಕೆಜಿಯಷ್ಟು ಬೆಣ್ಣೆಯಿಂದ ಅಲಂಕಾರ ಮಾಡಲಾಗಿದ್ದ ಹಿನ್ನೆಲೆ ನಾರಾಯಣಸ್ವಾಮಿ ಇನ್ನಿತರೆ ಮೂರ್ತಿಗಳು ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸುವಂತಿತ್ತು. ಸೌಮ್ಯನಾಯಕಿ ಮೂರ್ತಿಗೂ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು. ಸೋಮವಾರ ಬೆಳಗಿನ ಜಾವ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ 4:30 ರ ಸಮಯದಲ್ಲಿ ಸುಪ್ರಭಾತ ಸೇವೆ, ಅಭಿಷೇಕ ನಡೆಸಿ ಬೆಣ್ಣೆ ಅಲಂಕಾರ ಮಾಡಲಾಯಿತು. ಬಳಿಕ ಧರ್ನುಮಾಸದ ಸಮಾಪ್ತಿ ದೇವರಿಗೆ ಸಕ್ಕರೆ ಪೊಂಗಲ್ ನೈವೆಧ್ಯ ಹಾಗೂ ಬಂದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.
ಸ್ವರ್ಗದ ಬಾಗಿಲು ತೆರೆದು ಅಲ್ಲಿಂದ ಉತ್ಸವ ಮೂರ್ತಿ ಪ್ರವೇಶ, ರಾಜಬೀದಿಗಳಲ್ಲಿ ಮೆರವಣಿಗೆ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸಂಕ್ರಾಂತಿ ಹಬ್ಬದ ಹಿನ್ನೆಲೆ ಕೊಳ್ಳೇಗಾಲ ಪಟ್ಟಣದ ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ಸೋಮವಾರ ಬೆಳಗಿನಿಂದ ಸಂಜೆ ತನಕ ಜರುಗಿತು. ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಗರುಡಕಂಬ, ಆಂಜನೇಯ, ಗಣಪತಿ ಮೂರ್ತಿಗಳಿಗೆ ಸುಮಾರು 25 ಕೆಜಿಯಷ್ಟು ಬೆಣ್ಣೆಯಿಂದ ಅಲಂಕಾರ ಮಾಡಲಾಗಿದ್ದ ಹಿನ್ನೆಲೆ ನಾರಾಯಣಸ್ವಾಮಿ ಇನ್ನಿತರೆ ಮೂರ್ತಿಗಳು ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸುವಂತಿತ್ತು. ಸೌಮ್ಯನಾಯಕಿ ಮೂರ್ತಿಗೂ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು. ಸೋಮವಾರ ಬೆಳಗಿನ ಜಾವ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ 4:30 ರ ಸಮಯದಲ್ಲಿ ಸುಪ್ರಭಾತ ಸೇವೆ, ಅಭಿಷೇಕ ನಡೆಸಿ ಬೆಣ್ಣೆ ಅಲಂಕಾರ ಮಾಡಲಾಯಿತು. ಬಳಿಕ ಧರ್ನುಮಾಸದ ಸಮಾಪ್ತಿ ದೇವರಿಗೆ ಸಕ್ಕರೆ ಪೊಂಗಲ್ ನೈವೆಧ್ಯ ಹಾಗೂ ಬಂದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.ಸಂಜೆ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಮಕರ ಮಾಸ ಪ್ರಾರಂಭವಾದ ದಿನವಾದ ಇಂದು ಉತ್ತರ ದ್ವಾರ (ಸ್ವರ್ಗ) ದ ಬಾಗಿಲನ್ನು ತೆರೆದು ಅಲ್ಲಿಂದ ಉತ್ಸವ ಮೂರ್ತಿ ಹೊರತಂದು ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹಬ್ಬದ ಹಿನ್ನಲೆ ದೇವಾಲಯವನ್ನು ಅಲಂಕೃತಗೊಳಿಸಲಾಯಿತು. ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಪೂಜಾ ಕೈಕರ್ಯಗಳನ್ನು ಪ್ರದಾನ ಅರ್ಚಕರಾದ ಶೇಷಾದ್ರಿ ಭಟ್ಟರು, ಸುದರ್ಶನ ಭಟ್ಟರು ನೇರವೇರಿಸಿದರು ಹಾಗೂ ದೇವಸ್ಥಾನದ ಆಡಳಿತವರ್ಗ ಈ ಸಮಯದಲ್ಲಿ ಹಾಜರಿದ್ದು ಆಗಮಿಸಿದ್ದ ಭಕ್ತಾಧಿಗಳಿಗೆ ದರ್ಶನ ವ್ಯವಸ್ಥೆ ಕಲ್ಪಿಸಿದರು.