ನೌಕರರು ಒಗ್ಗೂಡಿದರೇ ಏನನ್ನಾದರೂ ಸಾಧಿಸಬಹುದು. ಜಲಮಂಡಳಿಯಲ್ಲಿ ಸುಮಾರು 20 ವರ್ಷಗಳಿಂದ ನೌಕರರು ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೌಕರರ ಸಮಸ್ಯೆಗಳನ್ನು ಜಲ ಮಂಡಳಿಯ ಮುಂದಿಟ್ಟು ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಹಲಗೂರು

ಹೊರಗುತ್ತಿಗೆ ನೌಕರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಲಾಗುವುದು ಎಂದು ಜಲಮಂಡಳಿ ಹೊರಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಸಮೀಪದ ತೊರೆಕಾಡನಹಳ್ಳಿ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಜಲಮಂಡಳಿ ಹೊರ ಗುತ್ತಿಗೆ ನೌಕರರ ಸಂಘದ ಸದಸ್ಯರ ಕುಂದು-ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಜಲಮಂಡಳಿ ನೌಕರರಿಗೆ ಗುತ್ತಿಗೆದಾರರಿಂದ ವೇತನ ಪಾವತಿ ಮಾಡಲಾಗುತ್ತಿದೆ. ಇದರಿಂದ ಪಾವತಿಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದರು.

ನೌಕರರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಗುತ್ತಿಗೆದಾರರನ್ನು ಕೈ ಬಿಟ್ಟು ಜಲಮಂಡಳಿ ‘ನೌಕರರಿಗೆ ನೇರವಾಗಿ ಪಾವತಿ’ (ಡಿಪಿಎಸ್) ಪದ್ದತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಜಲಮಂಡಳಿ ಸ್ಯಾನಿಟರಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ನೌಕರರು ಒಗ್ಗೂಡಿದರೇ ಏನನ್ನಾದರೂ ಸಾಧಿಸಬಹುದು. ಜಲಮಂಡಳಿಯಲ್ಲಿ ಸುಮಾರು 20 ವರ್ಷಗಳಿಂದ ನೌಕರರು ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೌಕರರ ಸಮಸ್ಯೆಗಳನ್ನು ಜಲ ಮಂಡಳಿಯ ಮುಂದಿಟ್ಟು ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು ಎಂದರು.

ಗುತ್ತಿಗೆ ನೌಕರರ ಖಾತೆಗೆ ನೇರ ವೇತನ ಪಾವತಿ, ಲಸ ಮಾಡುವಾಗ ಸ್ಥಳದಲ್ಲಿ ಸೂಕ್ತ ರಕ್ಷಣೆ ಕಲ್ಪಿಸಬೇಕು. ವೇತನ ಪಾವತಿಸುವಾಗ ಸಂಬಂಧಿಸಿದ ನೌಕರರಿಗೆ ವೇತನ ಚೀಟಿ ನೀಡಬೇಕು ಎಂದು ನೌಕರರು ಒತ್ತಾಯಿಸಿದರು.

ಈ ವೇಳೆ ಸಹಾಯಕ ಎಂಜಿನಿಯರ್ ಪ್ರೀತಂ, ವಾಸಿಂ, ವಿನೋದ್, ಬೆಂಗಳೂರು ಜಲಮಂಡಳಿ ಸ್ಯಾನಿಟರಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಸಿದ್ದಪ್ಪ, ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ರಾಮಚಂದ್ರ, ಮದ್ದೂರು ಶ್ರೀನಿವಾಸ್, ಶಿವಣ್ಣ, ನಾಗರಾಜು, ಬಸವರಾಜು, ಗೋವಿಂದರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.