ಗ್ರಾಮೀಣ ಭಾಗದ ಜನರಿಗೆ ನರೇಗಾ ವರದಾನ: ತಾಪಂ ಸಹಾಯಕ ನಿರ್ದೇಶಕಿ ವನಜಾ

| Published : Feb 04 2024, 01:35 AM IST

ಗ್ರಾಮೀಣ ಭಾಗದ ಜನರಿಗೆ ನರೇಗಾ ವರದಾನ: ತಾಪಂ ಸಹಾಯಕ ನಿರ್ದೇಶಕಿ ವನಜಾ
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಾ ಯೋಜನೆಯು ಜಾರಿಯಾಗಿ ೧೮ ವರ್ಷಗಳಾಗಿದೆ. ಕಾರ್ಮಿಕರ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ೧೦೦ ದಿನಗಳ ಕೆಲಸ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿನ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆಸ್ತಿಗಳನ್ನು ಸೃಜನೆ ಮಾಡಲಾಗುತ್ತಿದೆ.

ಕಾರಟಗಿ: ನರೇಗಾ ಯೋಜನೆ ಗ್ರಾಮೀಣ ಭಾಗದಲ್ಲಿನ ಕೂಲಿಕಾರರ ಜೀವನೋಪಾಯಕ್ಕಾಗಿ ವರದಾನವಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕಿ ವೈ.ವನಜಾ ಹೇಳಿದರು.

ತಾಲೂಕಿನ ಬೇವಿನಹಾಳ ಗ್ರಾಪಂ ಕೂಲಿಕಾರರಿಗೆ ನಾಲಾ ಹೂಳೆತ್ತುವ ಕಾಮಗಾರಿ ನೀಡಲಾಗಿದೆ. ಕಾಮಗಾರಿ ಸ್ಥಳದಲ್ಲಿ ತಾಪಂ, ಗ್ರಾಪಂನಿಂದ ಆಯೋಜಿಸಲಾದ ನರೇಗಾ ದಿವಸ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನರೇಗಾ ಯೋಜನೆಯು ಜಾರಿಯಾಗಿ ೧೮ ವರ್ಷಗಳಾಗಿದೆ. ಕಾರ್ಮಿಕರ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ೧೦೦ ದಿನಗಳ ಕೆಲಸ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿನ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆಸ್ತಿಗಳನ್ನು ಸೃಜನೆ ಮಾಡಲಾಗುತ್ತಿದೆ ಎಂದರು.

ಬೇವಿನಹಾಳ ಗ್ರಾಪಂನಲ್ಲಿ ೧೦೦ ಮಾನವ ದಿನಗಳ ಸೃಜಿಸಿದ ಹಿರಿಯ ನಾಗರಿಕರಾದ ಶಿವಮ್ಮ ವೀರನಗೌ, ವಿಶೇಷಚೇತನರಾದ ಸುಕಮುನಿಯಪ್ಪ ಯಮನಪ್ಪ ಅವರಿಗೆ ತಾಪಂ, ಗ್ರಾಪಂನಿಂದ ಸನ್ಮಾನಿಸಲಾಯಿತು.

ಮತದಾನ ಜಾಗೃತಿ: ತಾಲೂಕು ಸ್ವೀಪ್ ಸಮಿತಿಯಿಂದ ನರೇಗಾ ದಿನದ ಆಚರಣೆ ಕಾಮಗಾರಿ ಸ್ಥಳದ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಸೆಕ್ಟರ್ ಅಧಿಕಾರಿ ಟಿ.ಶ್ರೀಕಾಂತ್ ಮತದಾನ ಮಹತ್ವ ಕುರಿತು ಮಾಹಿತಿ ನೀಡಿದರು. ಸ್ವೀಪ್ ಸಮಿತಿಯ ಸದಸ್ಯರಾದ ಸಂದೀಪ್, ಮಹಮ್ಮದ್ ಅಜೀಜ್, ಸೋಮನಾಥ ನಾಯಕ ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಕುರಿತು ಮಾಹಿತಿ ನೀಡಿದರು. ನಂತರ ಕೂಲಿಕಾರರಿಂದ ಅಣಕು ಮತದಾನ ಮಾಡಿಸಲಾಯಿತು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಭೋವಿ, ಉಪಾಧ್ಯಕ್ಷೆ ಸಮೀನಾ ಬೇಗಂ, ಸದಸ್ಯರಾದ ದೊಡ್ಡಪ್ಪ ಬೇವಿನಹಾಳ್, ರಾಜಸಾಬ್ ನಾಗನಕಲ್, ನಾಗರಾಜ್ ನಾಗನಕಲ್, ಸೇರಿದಂತೆ ಗ್ರಾಮದ ಪ್ರಮುಖರು, ನರೇಗಾ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಇದ್ದರು.