ಸಾರಾಂಶ
ಈಗಾಗಲೇ ಸರ್ಕಾರ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದೆ. ಅತ್ತ ಕೃಷಿ ಕೆಲಸವೂ ಇಲ್ಲ. ಅತ್ತ ನರೇಗಾ ಕೆಲಸವಿಲ್ಲದೇ ಬೇರೆಡೆ ಉದ್ಯೋಗ ಅರಸಿ ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ನರೇಗಾ ಯೋಜನೆಯಲ್ಲಿ ಈಗ 100 ಮಾನವ ದಿನಗಳನ್ನು ನೀಡಿದೆ. ಬರ ಹಿನ್ನೆಲೆಯಲ್ಲಿ 50 ಮಾನವ ದಿನಗಳನ್ನು ಹೆಚ್ಚಳ ಮಾಡಿ ಸಕಾಲದಲ್ಲಿ ಕಾರ್ಮಿಕರ ಕೂಲಿ ಪಾವತಿ ಮಾಡುವ ಹಣವನ್ನು ಬಿಡುಗಡೆ ಮಾಡಬೇಕು.
ಹೂವಿನಹಡಗಲಿ: ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ನೀಡಬೇಕಾಗಿರುವ ಬಾಕಿ ಪಾವತಿ ಹಾಗೂ ಬರಗಾಲ ಬಂದಿದ್ದು, ಕೂಲಿ ಕಾರ್ಮಿಕರು ಕೆಲಸ ಅರಸಿ ಗುಳೆ ಹೋಗದಂತೆ ತಡೆಗಟ್ಟಲು ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿವಿಧ ಗ್ರಾಪಂಗಳ ವ್ಯಾಪ್ತಿಯ ನರೇಗಾ ಕೂಲಿ ಪತ್ರ ಬರೆದಿದ್ದಾರೆ.
ತಾಲೂಕಿನ ಹಿರೇಹಡಗಲಿ, ಬ್ಯಾಲಹುಣ್ಸಿ, ಹಗರನೂರು, ತುಂಬಿನಕೆರೆ, ಬೀರಬ್ಬಿ, ಕೆ. ಅಯ್ಯನಹಳ್ಳಿ, ತಿಪ್ಪಾಪುರ, ಶಿವಪುರ, ಸೋಗಿ, ಗೋವಿಂದಪುರ ತಾಂಡ, ವರಕನಹಳ್ಳಿ ಸೇರಿದಂತೆ ವಿವಿಧ ಕಡೆಯಲ್ಲಿ ನೂರಾರು ನರೇಗಾ ಕೂಲಿ ಕಾರ್ಮಿಕರು, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಸಹಯೋಗದೊಂದಿಗೆ ಕೆಲಸ ಮಾಡುವ ಸ್ಥಳದಿಂದಲೇ ಪತ್ರ ಬರೆದಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಶಬ್ಬೀರ್ ಬಾಷ, ಈಗಾಗಲೇ ಸರ್ಕಾರ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದೆ. ಅತ್ತ ಕೃಷಿ ಕೆಲಸವೂ ಇಲ್ಲ. ಅತ್ತ ನರೇಗಾ ಕೆಲಸವಿಲ್ಲದೇ ಬೇರೆಡೆ ಉದ್ಯೋಗ ಅರಸಿ ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ನರೇಗಾ ಯೋಜನೆಯಲ್ಲಿ ಈಗ 100 ಮಾನವ ದಿನಗಳನ್ನು ನೀಡಿದೆ. ಬರ ಹಿನ್ನೆಲೆಯಲ್ಲಿ 50 ಮಾನವ ದಿನಗಳನ್ನು ಹೆಚ್ಚಳ ಮಾಡಿ ಸಕಾಲದಲ್ಲಿ ಕಾರ್ಮಿಕರ ಕೂಲಿ ಪಾವತಿ ಮಾಡುವ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೀರಣ್ಣ, ನಿಂಗಪ್ಪ, ಮೈಲಾರೆಪ್ಪ, ದ್ಯಾಮಪ್ಪ, ಕೋಟೆಪ್ಪ, ಕೆಂಚಮ್ಮ, ಕರಿಬಸಮ್ಮ, ದಾನಪ್ಪ ಸೇರಿದಂತೆ ಇತರರಿದ್ದರು.