ನರೇಗಾ ಯೋಜನೆ ಬಡವರಿಗೆ ಸಂಜೀವಿನಿ

| Published : Jun 13 2024, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಬಡವರಿಗೆ ನರೇಗಾ ಯೋಜನೆ ಸಂಜೀವಿನಿ ಆಗಿದೆ. ಇದರಿಂದ ಇಂದು ಬಹಳಷ್ಟು ಕುಟುಂಬಗಳು ಈ ಯೋಜನೆಯ ಮೇಲೆ ಅವಲಂಬಿತವಾಗಿವೆ ಎಂದು ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಬಡವರಿಗೆ ನರೇಗಾ ಯೋಜನೆ ಸಂಜೀವಿನಿ ಆಗಿದೆ. ಇದರಿಂದ ಇಂದು ಬಹಳಷ್ಟು ಕುಟುಂಬಗಳು ಈ ಯೋಜನೆಯ ಮೇಲೆ ಅವಲಂಬಿತವಾಗಿವೆ ಎಂದು ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವಿ ಹೇಳಿದರು.

ಖಡಕಲಾಟ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕೂಲಿಕಾರರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ವರ್ಷ ₹ 349 ಕೂಲಿ ನಿಗದಿ ಮಾಡಲಾಗಿದೆ.ಇದರಲ್ಲಿ ಹೆಚ್ಚು ಮಹಿಳೆಯರು ಭಾಗವಹಿಸಬೇಕಿದ್ದು, ಇದು ಬಡ ಕುಟುಂಬಗಳಿಗೆ ಆರ್ಥಿಕ ಭದ್ರೆತೆಯಾಗಿದೆ. ವರ್ಷಕ್ಕೆ 100 ದಿನ ಕೆಲಸ ನೀಡಲಾಗುತ್ತಿದ್ದು, ಪ್ರತಿಯೊಂದು ಕುಟುಂಬ ಈ ಯೋಜನೆ ಸದೋಪಯೋಗ ಮಾಡಿಕೊಳ್ಳಬೇಕೆಂದರು.ಚಿಕ್ಕೋಡಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಬಡ ಕುಟುಂಬಗಳಿಗೆ ನರೇಗಾದಿಂದ ಬಲ ತಂದಿದೆ. ಸ್ಥಳೀಯವಾಗಿ ಕೆಲಸ ನೀಡುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಪುನರುಜ್ಜೀವನಗೊಳಿಸುವುದು ಉದ್ದೇಶವಾಗಿದೆ ಎಂದರು.ನರೇಗಾ ಕೂಲಿ ಕಾರ್ಮಿಕರಾದ ಮಂಗಲ ತಡಕರ ಮಾತನಾಡಿ, ನಮ್ಮ ಕುಟುಂಬ ಇಂದು ಸಂತೋಷವಾಗಿದೆ. ನಮ್ಮ ಮನೆಯಲ್ಲಿ ಪ್ರತಿ ದಿನ ಜಗಳ ಮಾಡುತ್ತಿದ್ದೇವು. ಆದರೆ ಈಗ ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಬಂದಾಗ ನಾವು ಖುಷಿಯಾಗಿದ್ದೇವೆ. ನರೇಗಾ ಯೋಜನೆ ಬಡ ಕುಟುಂಬಗಳಿಗೆ ಬೆಳಕಾಗಿದೆ. ದುಡಿದ ಹಣದಿಂದ ಮನೆ ನಿರ್ವಹಣೆ, ಆಸ್ಪತ್ರೆ ಖರ್ಚು ನಡೆಯುತ್ತಿದೆ ಎಂದು ತಿಳಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಕೂಲಿ ಕಾರ್ಮಿಕರು ಸನ್ಮಾನಿಸಿದರು. ಗ್ರಾಮ ಪಂಚಾಯತಿ ಪಿಡಿಒ ಕೆ.ಎ.ಮೊಮಿನ, ಐಇಸಿ ಸಂಯೋಜಕ ರಂಜೀತ ಕಾರ್ಣಿಕ, ಎಂಐಎಸ್ ಚೇತನ ಶಿರಹಟ್ಟಿ, ಆಡಳಿತ ಸಹಾಯಕ ಅಕ್ಷಯ ಠಕ್ಕಪಗೋಳ, ತಾಂತ್ರಿಕ ಸಿಬ್ಬಂದಿ ಅನೀಲ ಖೋತ, ಬಿ.ಎಫ್‌.ಟಿ ಶ್ರವಣಕುಮಾರ ಮಾದಿಗ, ಗ್ರಾಪಂ ಸಿಬ್ಬಂದಿ ಉಪಸ್ಥಿರಿದ್ದರು.