ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ

| Published : Mar 28 2024, 12:46 AM IST / Updated: Mar 28 2024, 07:58 AM IST

ಸಾರಾಂಶ

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕೇವಲ ಭರವಸೆ ಕೊಟ್ಟಿಲ್ಲ, ಅನೇಕ ಜನಪರ, ಅಭಿವೃದ್ಧಿಪರ ಯೋಜನೆ ಜಾರಿಗೆ ತರುವ ಮೂಲಕ ಕೊಟ್ಟ ಎಲ್ಲ ಭರವಸೆ ಈಡೇರಿಸಿದೆ

ಮುಂಡರಗಿ: ಕಳೆದ 10 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿದ್ದು, ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಹೀಗಾಗಿ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಬುಧವಾರ ಬಾಗೇವಾಡಿ, ಬಿದರಹಳ್ಳಿ, ಹಮ್ಮಿಗಿ ಗ್ರಾಪಂ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕೇವಲ ಭರವಸೆ ಕೊಟ್ಟಿಲ್ಲ, ಅನೇಕ ಜನಪರ, ಅಭಿವೃದ್ಧಿಪರ ಯೋಜನೆ ಜಾರಿಗೆ ತರುವ ಮೂಲಕ ಕೊಟ್ಟ ಎಲ್ಲ ಭರವಸೆ ಈಡೇರಿಸಿದೆ. ಹೀಗಾಗಿ ಮತದಾರರಿಗೆ ನಮ್ಮ ಬಿಜೆಪಿ ಮೇಲೆ ನಂಬಿಕೆ ಹೆಚ್ಚಾಗಿದೆ. ಮುಂಬರುವ ಮೇ 7ರ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಹೆಚ್ಚಿನ ಮತ ಹಾಕುವ ಮೂಲಕ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಲೋಕಸಭೆಗೆ ಕಳಿಸೋಣ ಎಂದರು.

ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನರೇಂದ್ರ ಮೋದಿ ಇಡೀ ದೇಶದ ಜನತೆಗೆ ಉಚಿತವಾಗಿ ವ್ಯಾಕ್ಸೀನ್ ಕೊಡುವ ಮೂಲಕ ಜನರ ಪ್ರಾಣ ಉಳಿಸಿದ್ದಾರೆ.ಉಜ್ವಲ ಯೋಜನೆಯಲ್ಲಿ ಕೋಟ್ಯಂತರ ಜನತೆಗೆ ಉಚಿತ ಎಲ್.ಪಿ.ಜಿ.ನೀಡಿದ್ದಾರೆ. 10 ವರ್ಷದಲ್ಲಿ ಮಹತ್ತರವಾದ ಸಾಧನ ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಮೋದಿ ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ ಎಂದರು.

ಕರಬಸಪ್ಪ ಹಂಚಿನಾಳ, ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಜನತೆಗೆ ಉದ್ಯೋಗವಿಲ್ಲದಾಗ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಜನತೆಗೆ ಉಚಿತವಾಗಿ ಅಕ್ಕಿ ವಿತರಿಸಿದರು. ಆರೋಗ್ಯವಿಮೆ, ರಸ್ತೆ ಅಭಿವೃದ್ಧಿ, ವಿಮಾಣ ನಿಲ್ದಾಣ ನಿರ್ಮಾಣ ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಕೈಗೊಂಡಿದ್ದಾರೆ. ಹೀಗಾಗಿ ಮತ್ತೊಮ್ಮೆ ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಲಿಂಗರಾಜಗೌಡ ಪಾಟೀಲ,ರವೀಂದ್ರ ಉಪ್ಪಿನಬೆಟಗೇರಿ, ಮಲ್ಲಿಕಾರ್ಜುನ ಹಣಜಿ, ಮಂಜುನಾಥಗೌಡ ಪಾಟೀಲ, ಬಸವರಾಜ ಬಿಳಿಮಗ್ಗದ, ಪ್ರಶಾಂತಗೌಡ ಗುಡದಪ್ಪನವರ, ಸುನಿತಾ ಹಾರೋಗೇರಿ, ಎಂ.ಎಂ.ಜೋಶಿ, ಶಿವಪ್ಪ ಚಿಕ್ಕಣ್ಣವರ, ಜ್ಯೋತಿ ಹಾನಗಲ್, ಪವನ ಮೇಟಿ, ರಾಜಸಾಬ್ ತಪ್ಪಡಿ, ಪವಿತ್ರಾ ಕಲ್ಲುಕುಟಗರ್, ಪುಷ್ಪಾ ಉಕ್ಕಲಿ, ಅರುಣಾ ಪಾಟೀಲ, ಸುಭಾಷ್ ಗುಡಿಮನಿ, ಬುಟ್ಟು ಹೊಸಮನಿ ಹಾಗೂ ಬಾಗೇವಾಡಿ, ಬಿದರಹಳ್ಳಿ, ಹಮ್ಮಿಗಿ ಗ್ರಾಪಂ ವ್ಯಾಪ್ತಿಯ ಬೂತ್ ಅಧ್ಯಕ್ಷರು, ಗ್ರಾಪಂ ಸದಸ್ಯರುಗಳು, ಬಿಜೆಪಿ ಮೋರ್ಚಾ ಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.