ಸಾರಾಂಶ
ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮ ಪಂಚಾಯ್ತಿಗೆ ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಈರಣ್ಣ ಸರಡಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಜೇವರ್ಗಿ
ತಾಲೂಕಿನ ನರಿಬೋಳ ಗ್ರಾಮ ಪಂಚಾಯ್ತಿಗೆ ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಈರಣ್ಣ ಸರಡಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಒಬ್ಬರು ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ ಮಲ್ಲಣ್ಣ ಯಲಗೋಡ ಕರ್ತವ್ಯ ನಿರ್ವಹಿಸಿದರು.
ನರಿಬೋಳ ಗ್ರಾಪಂನಲ್ಲಿ ಒಟ್ಟು 14 ಸದಸ್ಯರ ಬಲ ಹೊಂದಿದ್ದು, ಅವರಲ್ಲಿ 12 ಸದಸ್ಯರು ಹಾಜರಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈರಣ್ಣ ಸರಡಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಗ್ರಾಪಂ ಅಧ್ಯಕ್ಷರಾಗಿದ್ದ ಶಿವಕುಮಾರ ಪಾಟೀಲ್ ಅವರು ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ಮರು ಚುನಾವಣೆ ನಡೆಯಿತು.ವಿಜಯೋತ್ಸವ: ಈರಣ್ಣ ಸರಡಗಿ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ವಿಜಯೋತ್ಸವದಲ್ಲಿ ತಿಪ್ಪಣ್ಣ ಸುಬೇದಾರ, ಶಿವಣ್ಣ ಸಾಹು ಪಡಶೆಟ್ಟಿ, ಅಮ್ಮಣ್ಣ ಸುಬೇದಾರ, ಬಸವರಾಜ ಪಾಟೀಲ್ ನರಿಬೋಳ, ಬಸಲಿಂಗಪ್ಪಗೌಡ ಪಾಟೀಲ್, ನಿಂಗಣ್ಣ ಭಂಡಾರಿ, ನಾಗರಾಜಗೌಡ ಪಾಟೀಲ್, ಹಣಮಂತ್ರಾಯ ಗಡ್ಡದ, ದಂಡಪ್ಪಗೌಡ ರಾಜವಾಳ, ಸಾಯಬಣ್ಣ ಪೂಜಾರಿ, ಸಾಯಬಣ್ಣ ರಾಜವಾಳ, ಗುರಪ್ಪ ಸುಗೂರ, ಶಂಕರ ಮಾರಡಗಿ, ಯಲ್ಲಾಲಿಂಗ ಟಣಕೇದಾರ, ಶಿವಕುಮಾರ ಪಾಟೀಲ್, ನಿಂಗಣ್ಣ ರಾವೂರ, ಈರಣ್ಣ ಗಡ್ಡದ, ದೇವಿಂದ್ರ ಹೊಟ್ಟಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.