ಅಡಪಗೆ ನಾಟಕ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ

| N/A | Published : Jul 25 2025, 12:31 AM IST / Updated: Jul 25 2025, 08:58 AM IST

Award

ಸಾರಾಂಶ

2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿಗೆ ಬಿ.ಶಶಿಧರ ಅಡಪ(ಮಂಗಳೂರು) ಮತ್ತು ವಾರ್ಷಿಕ ಪ್ರಶಸ್ತಿಗೆ ಜಿ.ಎನ್‌.ಮೋಹನ್‌(ಬೆಂಗಳೂರು), ಮುರ್ತುಜಸಾಬ್ ಘಟ್ಟಿಗನೂರು ಸೇರಿ 25 ರಂಗ ಕಲಾವಿದರು ಹಾಗೂ ವಿವಿಧ ದತ್ತಿ ಪ್ರಶಸ್ತಿಗೆ ಏಳು ಮಂದಿ ರಂಗಭೂಮಿ ಕಲಾವಿದರು ಭಾಜನರಾಗಿದ್ದಾರೆ.

 ಬೆಂಗಳೂರು :  2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿಗೆ ಬಿ.ಶಶಿಧರ ಅಡಪ(ಮಂಗಳೂರು) ಮತ್ತು ವಾರ್ಷಿಕ ಪ್ರಶಸ್ತಿಗೆ ಜಿ.ಎನ್‌.ಮೋಹನ್‌(ಬೆಂಗಳೂರು), ಮುರ್ತುಜಸಾಬ್ ಘಟ್ಟಿಗನೂರು ಸೇರಿ 25 ರಂಗ ಕಲಾವಿದರು ಹಾಗೂ ವಿವಿಧ ದತ್ತಿ ಪ್ರಶಸ್ತಿಗೆ ಏಳು ಮಂದಿ ರಂಗಭೂಮಿ ಕಲಾವಿದರು ಭಾಜನರಾಗಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಅವರು, ಈ ಸಾಲಿನ ಜೀವಮಾನ ಪ್ರಶಸ್ತಿಯೂ ಸೇರಿ ಒಟ್ಟು 33 ಪ್ರಶಸ್ತಿಗಳಿಗೆ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದರು.

2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಜಿ.ಎನ್‌.ಮೋಹನ್‌(ಬೆಂಗಳೂರು), ಮಾಲತೇಶ ಬಡಿಗೇರ (ಗದಗ), ಟಿ.ರಘು (ಬೆಂಗಳೂರು), ವೆಂಕಟಾಚಲ (ಬೆಂಗಳೂರು), ಮುರ್ತುಜಸಾಬ್ ಘಟ್ಟಿಗನೂರು (ಬಾಗಲಕೋಟೆ), ಎಂ.ಚೆನ್ನಕೇಶವಮೂರ್ತಿ (ಬೆಂಗಳೂರು), ಗೋಪಾಲ ಯಲ್ಲಪ್ಪ ಉಣಕಲ್ (ಹುಬ್ಬಳ್ಳಿ ಧಾರವಾಡ), ಚಿಕ್ಕಪ್ಪಯ್ಯ (ತುಮಕೂರು), ದೇವರಾಜ ಹಲಗೇರಿ (ಕೊಪ್ಪಳ), ಡಾ.ವೈ.ಎಸ್.ಸಿದ್ದರಾಮೇಗೌಡ(ಬೆಂಗಳೂರು ದಕ್ಷಿಣ), ಆರ್.ಟಿ.ಅರುಣ್ ಕುಮಾರ್‌ ( ದಾವಣಗೆರೆ), ರೋಹಿಣಿ ರಘುನಂದನ್ (ಬೆಂಗಳೂರು), ರತ್ನ ಸಕಲೇಶಪುರ (ಹಾಸನ), ವಿ.ಎನ್.ಅಶ್ಚತ್ (ಬೆಂಗಳೂರು), ಶಿವಯ್ಯಸ್ವಾಮಿ ಬಿಬ್ಬಳ್ಳಿ (ಸೇಡಂ ಕಲಬುರಗಿ), ಕೆ.ಆರ್.ಪೂರ್ಣೇಂದ್ರ ಶೇಖರ್ (ಬೆಂಗಳೂರು), ಭೀಮನಗೌಡ ಬಿ.ಕಟಾವಿ (ಬೆಳಗಾವಿ), ಕೆ.ಮುರುಳಿ (ಕೋಲಾರ), ಮುತ್ತುರಾಜ್ (ಬೆಂಗಳೂರು ಗ್ರಾಮಾಂತರ), ಮಲ್ಲೇಶ್ ಬಿ.ಕೋನಾಳ (ಯಾದಗಿರಿ), ಸುಗಂಧಿ ಉಮೇಶ್ ಕಲ್ಮಾಡಿ (ಉಡುಪಿ), ಮಹೇಶ ವಿ.ಪಾಟೀಲ್‌ (ಬೀದರ್‌), ಶಿವಪುತ್ರಪ್ಪ ಶಿವಸಿಂಪಿ (ಕೊಪ್ಪಳ), ಸದ್ಯೋಜಾತ ಶಾಸ್ತ್ರಿ ಹಿರೇಮಠ (ವಿಜಯನಗರ), ಡಾ.ಎಸ್. ಆರ್.ಉದಯ್ (ಮೈಸೂರು) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

7 ದತ್ತಿ ಪುರಸ್ಕಾರಗಳು:

ಎಚ್‌.ವಿ.ವೆಂಕಟಸುಬ್ಬಯ್ಯ ದತ್ತಿ ಪ್ರಶಸ್ತಿ- ಪಿ.ಎ.ಮಂಜಪ್ಪ(ಕೊಡಗು), ಬಿ.ಆರ್‌.ಅರಿಶಿಣಕೋಡಿ ದತ್ತಿ ಪ್ರಶಸ್ತಿ- ಕಿರಣ್‌ ರತ್ನಾಕರ ನಾಯ್ಕ (ಉತ್ತರ ಕನ್ನಡ), ಕೆ.ರಾಮಚಂದ್ರಯ್ಯ ದತ್ತಿ ಪ್ರಶಸ್ತಿ- ಸಿ.ವಿ.ಲೋಕೇಶ್‌(ದೊಡ್ಡಬಳ್ಳಾಪುರ), ಮಾಲತಿಶ್ರೀ ಮೈಸೂರು ದತ್ತಿ ಪ್ರಶಸ್ತಿ- ಎಚ್‌.ಪಿ.ಈಶ್ವರಾಚಾರಿ (ಮಂಡ್ಯ), ನಟರತ್ನ ಚಿಂದೋಡಿ ವೀರಪ್ಪನವರ್ ದತ್ತಿ ಪ್ರಶಸ್ತಿ- ದೊಡ್ಡಮನೆ ವೆಂಕಟೇಶ್‌(ಬೆಂಗಳೂರು), ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪ್ರಶಸ್ತಿ- ಪಿ.ವಿ.ಕೃಷ್ಣಪ್ಪ (ಬೆಂಗಳೂರು) ಮತ್ತು ಕಲ್ಚರ್ಡ್‌ ಕಮೆಡಿಯನ್‌ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ- ನಾಗೇಂದ್ರ ಪ್ರಸಾದ್‌ (ಬೆಂಗಳೂರು) ಅವರು ಆಯ್ಕೆಗೊಂಡಿದ್ದಾರೆ ಎಂದು ಹೇಳಿದರು.

15 ಸಾವಿರ ರು.ಗೆ ಏರಿಕೆ

ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿಗೆ 50 ಸಾವಿರ ರು.ನಗದು, ವಾರ್ಷಿಕ ಪ್ರಶಸ್ತಿಗಳಿಗೆ ತಲಾ 25 ಸಾವಿರ ರು.ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಲಾಗುವುದು. ಸೆಪ್ಟೆಂಬರ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಚಿಂತನೆ ನಡೆಸಲಾಗಿದೆ. ವಿವಿಧ ದತ್ತಿ ಪ್ರಶಸ್ತಿಗಳಿಗೆ ಕಳೆದ ವರ್ಷ ತಲಾ 10 ಸಾವಿರ ರು.ನಗದು ಬಹುಮಾನವಿತ್ತು. ಈ ಬಾರಿ ಪ್ರಶಸ್ತಿ ಮೊತ್ತವನ್ನು 15 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ ಎಂದು ಕೆ.ವಿ.ನಾಗರಾಜಮೂರ್ತಿ ತಿಳಿಸಿದರು. ಹಾಗೆಯೇ 2024-25ನೇ ಸಾಲಿನಲ್ಲಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಪ್ರಕಾಶ್‌ ರೈ ಅವರು ಪ್ರಶಸ್ತಿ ನಿರಾಕರಿಸಿದ್ದರು. ಆದ್ದರಿಂದ ಈ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಶಂಕರ ಭಟ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

Read more Articles on