ರಂಗಭೂಮಿ ಬದುಕಿಗೆ ಬೇಕಾದ ಜೀವನ ಶಿಕ್ಷಣ ನೀಡುತ್ತದೆ

| Published : Jul 02 2025, 11:52 PM IST / Updated: Jul 02 2025, 11:53 PM IST

ಸಾರಾಂಶ

ರಂಗಭೂಮಿ ಕಲೆ ಎನ್ನುವುದು ಜಗತ್ತಿನ ಮೊದಲ ವಿಶ್ವವಿದ್ಯಾನಿಲಯ. ಇದು ಎಲ್ಲರಿಗೂ ಜ್ಞಾನದ ಬೆಳಕನ್ನು ನೀಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುರಂಗಭೂಮಿ ಮನರಂಜನೆಯ ಜತೆಗೆ ಬದುಕಿಗೆ ಬೇಕಾದ ಜೀವನ ಶಿಕ್ಷಣ ನೀಡುತ್ತದೆ. ಒಳ್ಳೆತನ ಬಿತ್ತುವ ಕೆಲಸ ಮಾಡುತ್ತದೆ ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಹೇಳಿದರು.ನಗರದ ಜೆ.ಎಲ್.ಬಿ ರಸ್ತೆಯ ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಆವರಣದಲ್ಲಿನ ಕೆ.ಎಸ್.ಜಿ.ಎಚ್. ಸಭಾಂಗಣದಲ್ಲಿ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 15 ದಿನಗಳ ರಂಗ ಸಂಗೀತ ಮತ್ತು ಸಅಭಿನಯ ರಂಗಗೀತೆಗಳ ಕಲಿಕಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ರಂಗಭೂಮಿ ಕಲೆ ಎನ್ನುವುದು ಜಗತ್ತಿನ ಮೊದಲ ವಿಶ್ವವಿದ್ಯಾನಿಲಯ. ಇದು ಎಲ್ಲರಿಗೂ ಜ್ಞಾನದ ಬೆಳಕನ್ನು ನೀಡುತ್ತದೆ. ಇದರಿಂದ ಜನತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ವಿಶ್ವಕ್ಕೆ ಭಾರತೀ ರಂಗಭೂಮಿ ಮಾದರಿಯಾಗಿದ್ದು, ಭಾರತಕ್ಕೆ ಕರ್ನಾಟಕ ರಂಗಭೂಮಿ ಮಾದರಿಯಾಗಿದೆ. ವೃತ್ತಿರಂಗಭೂಮಿಗೆ ಮೈಸೂರು ಸಂಸ್ಥಾನ ಬಹಳಷ್ಟು ಕೊಡುಗೆ ನೀಡಿರುವುದು ನಿಜಕ್ಕೂ ಸಂತೋಷದ ವಿಷಯ ಎಂದರು.ನಾಟಕ ಕಂಪನಿಗಳು ಸಿನಿಮಾದತ್ತ ಒಲವು ತೋರಿಸುತ್ತ ಅತಿ ಹೆಚ್ಚು ದುಂದುವೆಚ್ಚ ಮಾಡುತ್ತ ಕಾಲಕ್ರಮೇಣ ಅದು ಕ್ಷೀಣಿಸಲು ಕಾರಣವಾಗಿತ್ತು ಎಂದರೆ ಹೇಳಿದರೆ ತಪ್ಪಾಗಲಾರದು. ಸಮಾಜಕ್ಕೆ ಮೌಲ್ಯ ತಿಳಿಸುವಂತ ಅದರ ಅಂಕುಡೊಂಕನ್ನು ತಿದ್ದುವಂತಹ ಆಯುಧವಾಗಿದೆ. ನಮ್ಮ ವೃತ್ತಿರಂಗಭೂಮಿ ಕೂಡ ಸಾಂಸ್ಕೃತಿಕವಾಗಿ ಬೆಳೆಯಬೇಕು. ನಾಟಕಗಳು ಮನುಷ್ಯ ನೈಜ ಸ್ಥಿತಿ ಬಿಂಬಿಸುತ್ತವೆ. ಸಿನಿಮಾಗಳು ವೈಭವೀಕರಿಸಿ ತೋರಿಸುತ್ತವೆ. ನಾಟಕಗಳಿಂದಲೇ ಸಿನಿವಾ ಹುಟ್ಟಿದೆ ಎಂಬುದನ್ನು ಮರೆಯಬಾದರು. ಆದರೆ, ರಂಗ ಗೀತೆಗಳ ಗಾಯನ, ರಂಗಕಲೆ ಇಂದು ನಶಿಸುವ ಸ್ಥಿತಿಗೆ ಬಂದು ತಲುಪಿದೆ. ಕಲಾವಿದರು ಸುಶಿಕ್ಷಿತರಾಗದಿದ್ದರೂ ಅವರಲ್ಲಿ ಹೃದಯ ಶ್ರೀಮಂತಿಕೆಗೇನೂ ಕಡಿಮೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.ವೃತ್ತಿ ರಂಗಭೂಮಿಯಲ್ಲಿ ಅಭಿನಯ ಪರಂಪರೆ, ರಂಗ ಸಂಗೀತ ಪರಂಪರೆ ಮತ್ತು ರಂಗ ಸಜ್ಜಿಕೆ ಎಂಬ ಮೂರು ಮುಖ್ಯ ಪರಂಪರೆಗಳಿವೆ. ಈ ಮೂರು ಮುಖ್ಯ ಪರಂಪರೆಗಳನ್ನು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದೆ. ಹೀಗಾಗಿ ಸೃಜನಶೀಲವಾದ ವೃತ್ತಿ ರಂಗಭೂಮಿ ಪರಂಪರೆಯನ್ನು ಮತ್ತೆ ಪುನಶ್ಚೇತನಗೊಳಿಸುವ ಕೆಲಸವಾಗಬೇಕು. ನಾಡಿನಲ್ಲಿ ಪೂರ್ವಿಕರಿಂದ ಬಳುವಳಿಯಾಗಿ ಬಂದ ಕಲೆ, ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಂಗೀತ ಸೇರಿದಂತೆ ನಾಡಿನ ಹಲವು ಪ್ರಕಾರವನ್ನು ಮುಂದಿನ ಪೀಳಿಗೆಗೆ ಉಳಿಸಲು ಪ್ರತಿಯೊಬ್ಬರೂ ಹೆಚ್ಚಿನ ಜವಬ್ದಾರಿ ವಹಿಸಬೇಕು ಎಂದರು.ನಾನು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗ ಪ್ರಥಮವಾಗಿ ಪೌರಾಣಿಕ ನಾಟಕದಲ್ಲಿ ನಾನು ಕೂಡ ಪಾತ್ರಧಾರಿಯಾಗಿದ್ದೆ ಅದರಲ್ಲೂ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಧಿನಿತ್ಯ ನೀಡುತ್ತಿದ್ದರು. ಹಾಗಾಗಿ ನನಗೆ ವೃತ್ತಿರಂಗಭೂಮಿಯಲ್ಲಿ ಹೆಚ್ಚು ಆಸಕ್ತಿ ಕೂಡ ಹೊಂದಿದ್ದೇನೆ ಎಂದು ಹೇಳಿದರು.ಇಂದಿಗೂ ಕೂಡ ವಿವಿಧ ರಾಜ್ಯಗಳಲ್ಲಿ ಸಮಗ್ರ ರಂಗಭೂಮಿಯ ಕಲ್ಪನೆಯಿಂದಾಗಿ ವೃತ್ತಿ ರಂಗಭೂಮಿ ಅಥವಾ ನಾಟಕ ಸಂಗೀತ ಇಂದಿಗೂ ಇದೆ. ಹಿಂದೆ ಸ್ವರ ಶುದ್ಧಿಯಾಗಿದ್ದರೆ ಮಾತ್ರ ನಾಟಕಗಳಿಗೆ ಕರೆದುಕೊಂಡುತ್ತದ್ದರು. ಹೀಗೆಯೇ ಒಂದು ರಂಗಭೂಮಿಯ ನಾಟಕಕ್ಕೆ ಹೋಗಬೇಕಾದರೆ ಅವರ ಸ್ವರ ಜ್ಞಾನ ಬಹಳ ಮುಖ್ಯವಾಗಿರಬೇಕು ಎಂದು ತಿಳಿಸಿದರು. ಅಧ್ಯಯನದ ಪ್ರಕಾರಕ ಮೈಸೂರು ಜಿಲ್ಲೆ ಅಥವಾ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ವೃತ್ತಿ ರಂಗಭೂಮಿಯ ಪೌರಾಣಿಕ ನಾಟಕಗಳು ಇಂದಿಗೂ ಪ್ರಚಲಿತದಲ್ಲಿದೆ. ತುಮಕೂರು ಜಿಲ್ಲೆಯಲ್ಲೇ 120 ನಾಟಕ ತಂಡಗಳಿವೆ. ಆ ನಾಟಕ ತಂಡಗಳು ಹಳ್ಳಿಯಲ್ಲಿ ವರ್ಷಕ್ಕೆ 1 ರಿಂದ 2 ನಾಟಕ ಮಾಡುತ್ತದೆ. ಕರ್ನಾಟದಲ್ಲಿ ವರ್ಷಕ್ಕೆ 15 ರಿಂದ 18 ಸಾವಿರ ನಾಟಕಗಳು ನಡೆಯುತ್ತದೆ ಎಂದರು.ಕಾರ್ಯಕ್ರಮದಲ್ಲಿ ರಂಗ ಸಮಾಜ ಸದಸ್ಯ ಎಚ್.ಎಸ್. ಸುರೇಶ್ ಬಾಬು, ಕಾರ್ಯಾಗಾರದ ನಿರ್ದೇಶಕ ವೈ.ಎಂ. ಪುಟ್ಟಣ್ಣಯ್ಯ, ಸಂಗೀತ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಎಂ.ಜಿ. ಮಂಜುನಾಥ್, ಹಿರಿಯ ರಂಗಕರ್ಮಿ ರಾಜಶೇಖರ್ ಕದಂಬ ಇದ್ದರು.