ಕೇವಲ ಒಂದು ವರ್ಷ ಮೂರು ತಿಂಗಳ ವಯಸ್ಸಿನಲ್ಲೇ ೧೦೦ ಮೀಟರ್ ಓಟವನ್ನು ೫೭ ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಎಂ.ಇವಾನ್ ಪ್ರಿನ್ಸ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ.

ಸೋಮವಾರಪೇಟೆ: ಕೇವಲ ಒಂದು ವರ್ಷ ಮೂರು ತಿಂಗಳ ವಯಸ್ಸಿನಲ್ಲೇ ೧೦೦ ಮೀಟರ್ ಓಟವನ್ನು ೫೭ ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಎಂ.ಇವಾನ್ ಪ್ರಿನ್ಸ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ.

೨೦೨೫ರ ಏ.೪ ರಂದು ಜನಿಸಿರುವ ಇವಾನ್ ಪ್ರಿನ್ಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಲಾಲ್‌ಬಾಗ್ ದಾಸರಹಳ್ಳಿಯಲ್ಲಿ ಗ್ರಾಮದಲ್ಲಿ ವಾಸವಾಗಿದ್ದಾನೆ. ಇವನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೆಜ್ಜೆಹಣಕೋಡು ಗ್ರಾಮದ ಎಚ್.ಎಲ್. ಕಾವೇರಿ, ಮಹೇಂದ್ರ ಕುಮಾರ್ ದಂಪತಿಯ ಪುತ್ರ.ಹುಡುಗನ ತಾಯಿ ಕಾವೇರಿ ಅವರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಪಟುವಾಗಿದ್ದು, ಕ್ರೀಡಾ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದಿರುವ ಇವಾನ್ ಚಿಕ್ಕ ವಯಸ್ಸಿನಲ್ಲಿಯೇ ಓಟದ ಸ್ಪರ್ಧೆಯಲ್ಲಿ ವಿಶೇಷ ಆಸಕ್ತಿ ತೋರಿದ್ದಾನೆ. ಇಚೆಗೆ ಕಂಠೀರವ ಸ್ಟೇಡಿಯಂನಲ್ಲಿ ತನ್ನ ಕ್ರೀಡಾ ಚಟುವಟಿಕೆ ಹಾಗೂ ಸಾಧನೆಯ ಮೂಲಕ ಗಮನ ಸೆಳೆದಿರುವ ಬಾಲಕನ ೧೦೦ ಮೀಟರ್ ಓಟದ ಸಾಧನೆ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.