ಚಿಂತಾಮಣಿ: ಜಿಲ್ಲಾಧಿಕಾರಿಗಳ ಮತ್ತು ಆಡಳಿತಾಧಿಕಾರಿಗಳ ಆದೇಶದಂತೆ ಚಿಂತಾಮಣಿ ನಗರ ಮತ್ತು ತಾಲೂಕಿನ ಜನಗಣತಿ ೨೦೨೭ ಆರಂಭಿಸಿದ್ದು, ಗ್ರಾಮಾಂತರ ವ್ಯಾಪ್ತಿಗೆ ತಹಸೀಲ್ದಾರ್ ಹಾಗೂ ನಗರ ಭಾಗಕ್ಕೆ ಪೌರಾಯುಕ್ತ ಚಾರ್ಜ್ ಆಫೀಸರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತೇವೆಂದು ನಗರಸಭಾ ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.

ನಗರದ ನಗರಸಭೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಜನಗಣತಿಯನ್ನು ಸುಗಮವಾಗಿ ನಡೆಸಲು ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದು, ೨೦೦ ಮನೆಗೆ ಒಂದು ಬ್ಲಾಕ್ ಮಾಡಿದ್ದು ಅದರಂತೆ ಒಟ್ಟಾರೆ ನಗರಭಾಗದಲ್ಲಿ ೧೪೦ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ೧೪೦ ಬಿಎಲ್‌ಒ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡಿದ್ದು ಇದು ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿರುವುದರಿಂದ ಏಪ್ರಿಲ್ ೧ರಿಂದ ೧೫ನೇ ತಾರೀಖಿನವರೆಗೆ ಒಂದು ನಿರ್ದಿಷ್ಟ ಲಾಗಿನ್ ಮೂಲಕ ಸ್ವಯಂ ಘೋಷಿತವಾಗಿ ಮಾಹಿತಿಯನ್ನು ವೆಬ್ ಸೈಟ್‌ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.

ತಾವುಗಳ ಹಂಚಿಕೊಂಡ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ಅವರು ಭಾರತ ಸರ್ಕಾರ ರಾಷ್ಟ್ರೀಯ ಜನಕಲ್ಯಾಣ ಮತ್ತು ಜನಹಿತಕ್ಕಾಗಿ ರೂಪಿಸಲಾಗಿರುವ ರಾಷ್ಟ್ರೀಯ ಕಾರ್ಯಕ್ರಮವೆಂದು ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಜನಗಣತಿಯಲ್ಲಿ ಎಲ್ಲಾ ವಿವರಗಳನ್ನು ಒಳಗೊಂಡಿರುತ್ತದೆ. ಏಪ್ರಿಲ್ ೧೫ರ ನಂತರ ಮನೆ ಮನೆಗೆ ಬಿಎಲ್‌ಒಗಳು ಭೇಟಿ ನೀಡಿ ವಿವರಣೆಯನ್ನು ಪಡೆಯುತ್ತಾರೆಂದರು.