ಸಾರಾಂಶ
ವಿಶ್ವನಾಥ್ ಶ್ರೀರಾಂಪುರ
ಕನ್ನಡಪ್ರಭವಾರ್ತೆ ಹೊಸದುರ್ಗರಂಗಭೂಮಿ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ನವಂಬರ್ 4ರಿಂದ 9ರವರಗೆ ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ರಾಷ್ಟ್ರೀಯ ನಾಟಕೋತ್ಸವ ಆಯೋಜಿಸಿದೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 6 ದಿನಗಳ ಕಾಲ ನಾಟಕೋತ್ಸವ ನಡೆಯಲಿದ್ದು, ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ಅರಂಭಗೊಳ್ಳಲಿದೆ. ವಚನ ಗಾಯನ, ಭಾವಗೀತೆ, ಜನಪದ ಗೀತೆಗಳ ಹಿನ್ನೆಲೆಯುಳ್ಳ ನೃತ್ಯರೂಪಗಳ ಪ್ರಸ್ತುತಿಯ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.ಸಭಾ ಕಾರ್ಯಕ್ರಮದಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಕುರಿತು ನಿರ್ಧರಿಸಲಾದ ವಿಷಯಗಳ ಮೇಲೆ ವಿಚಾರ ಮಂಡನೆ ನಡೆಯಲಿದೆ. ನಾಡಿನ ವಿಚಾರವಾದಿಗಳು, ಸಾಹಿತಿಗಳು, ಪ್ರಮುಖ ಮಠಾಧೀಶರು, ರಾಜಕಾರಣಿಗಳು, ಕಲಾವಿಧರು ಬಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
ಪ್ರತಿದಿನ ಮಧ್ಯಾಹ್ನ 2.30ಕ್ಕೆ ಎಸ್.ಎಸ್. ರಂಗಮಂದಿರದಲ್ಲಿ ನಾಟಕಗಳ ಪ್ರದರ್ಶನ ನಡೆಯಲಿದೆ. ಸಂಜೆಯ ಸಭಾ ಕಾರ್ಯಕ್ರಮ ಮುಗಿದ ನಂತರ ಶಿವಕುಮಾರ ಬಯಲು ರಂಗಮಂದಿರದಲ್ಲಿ ರಾತ್ರಿ 9 ಗಂಟೆಗೆ ನಾಟಕಗಳ ಪ್ರದರ್ಶನ ನಡೆಯಲಿದೆ.ಶ್ರೀ ಶಿವಕುಮಾರ ಕಲಾಸಂಘದ ಪ್ರೇರಕ ಶಕ್ತಿಯಾಗಿರುವ ರಂಗಜಂಗಮ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ದೇಶದ ವಿವಿಧೆಡೆಯಿಂದ ಬರುವ ರಂಗಾಸಕ್ತರು ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ನಾಟಕೋತ್ಸವದಲ್ಲಿ ಹೊರ ರಾಜ್ಯದ ನಾಟಕ ತಂಡಗಳು ಸೇರಿ ವಿವಿಧ ರಂಗ ತಂಡಗಳು 11 ನಾಟಕಗಳನ್ನು ಪ್ರದರ್ಶಿಸಲಿವೆ.
ನವಂಬರ್ 4: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನಾಟಕೋತ್ಸವವನ್ನು ಉದ್ಘಾಟಿಸುವರು. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಶಿವಸಂಚಾರ ನಾಟಕಗಳನ್ನು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎಂ.ಎನ್. ಅಜಯ್ ನಾಗಭೂಷಣ ಕನ್ನಡ ರಾಜ್ಯೋತ್ಸವ ಉದ್ಘಾಟಿಸುವರು. ಬಸವ ಬೆಳವಿ ಚರಂತೇಶ್ವರ ಮಠದ ಶರಣಬಸವ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥ ಪಿಜಿಆರ್ ಸಿಂಧ್ಯ, ನಿವೃತ್ತ ಪೊಲೀಸ್ ಮಹಾನಿರ್ದೆಶಕ ಶಂಕರ್ ಬಿದರಿ, ನಿವೃತ್ತ ಪೋಲೀಸ್ ಆಯುಕ್ತ ಸಿದ್ದರಾಮಪ್ಪ, ಶಾಸಕರಾದ ಎಂ. ಚಂದ್ರಪ್ಪ, ಬಿ.ಪಿ. ಹರೀಶ್, ಬೆಳ್ಳಿ ಪ್ರಕಾಶ್, ಮಾಡಾಳು ಮಲ್ಲಿಕಾರ್ಜುನ ಭಾಗವಹಿಸುವರು.ನವಂಬರ್ 5: ಬಸವಕಲ್ಯಾಣದ ಅಂತಾರಾಷ್ಟ್ರೀಯ ಲಿಂಗಾಯಿತ ಧರ್ಮ ಕೇಂದ್ರದ ಡಾ. ಗಂಗಾಂಭಿಕೆ ಅಕ್ಕ ಸಾನ್ನಿಧ್ಯವಹಿಸಲಿದ್ದು, ದಾರಾವಾಡದ ಪರಿಸರ ಪ್ರೇಮಿ ಡಾ.ಸಂಜೀವ್ ಕುಲಕರ್ಣಿ ಪರಿಸರ ರಕ್ಷಣೆ ಬಿಕ್ಕಟ್ಟು ಮತ್ತು ಪರಿಹಾರ ಕುರಿತು , ವಿಧಾನ ಪರಿಷತ್ ಸದಸ್ಯ ಡಾ ಧನಂಜಯ ಸರ್ಜಿ ಸಾಂಪ್ರದಾಯಿಕ ಆಚರಣೆಗಳು ಕುರಿತು ಮಾತನಾಡುವರು . ಸಚಿವ ಈಶ್ವರ ಖಂಡ್ರೆ, ಜಿ.ಎಂ. ಸಿದ್ದೇಶ್ವರ, ಯು.ಬಿ. ಬಣಕಾರ, ಕೆ.ಎಸ್. ಬಸವಂತಪ್ಪ, ಡಿ.ಎಸ್. ಸುರೇಶ್, ಜಿ.ಎಂ. ಗಂಗಾಧರ ಸ್ವಾಮೀಜಿ, ಕೆ ರವಿ ಪಾಲೊಳ್ಳಲಿದ್ದಾರೆ.ನವಂಬರ್6: ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ವಿ.ಗಾಯತ್ರಿ ಸಾವಯವ ಕೃಷಿ ಕುರಿತು ಮಾತನಾಡುವರು. ಸಚಿವ ಸತೀಶ್ ಜಾರಕಿ ಹೊಳಿ, ಮಾಜಿ ಸಚಿವ ಬಿ.ಸಿ. ಪಾಟೀಲ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಪರಿಷತ್ ಸದಸ್ಯ ಕೆ.ಎಸ್. ನವೀನ್, ಶಾಸಕ ಎಚ್.ಡಿ. ತಮ್ಮಯ್ಯ, ಶಶಿಕುಮಾರ್, ಚಿತ್ರದುರ್ಗ ಎಸ್ ಪಿ ರಂಜಿತ್ ಕುಮಾರ್ ಭಂಡಾರು, ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪಾಲ್ಗೊಳ್ಳುವರು.ನವಂಬರ್ 7: ಇಳಕಲ್ ನ ವಿಜಯ ಮಹಾಂತೇಶ ಮಠದ ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು, ಭಾಷಾ ವಿಜ್ಞಾನಿ ಪ್ರೊ. ಎಂ ಅಬ್ದುಲ್ ರೆಹಮಾನ್ ಪಾಷ ಶಿಕ್ಷಣದಲ್ಲಿ ಮಾತೃ ಭಾಷೆ ಮಹತ್ವ ಕುರಿತು ಮಾತನಾಡುವರು. ಕೇಂದ್ರ ಸಚಿವ ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಶ್ರೀನಿವಾಸ್, ಕೆ.ವಿ. ನಾಗರಾಜ ಮೂರ್ತಿ, ಚಿತ್ರದುರ್ಗ ಡಿಸಿ ವೆಂಕಟೇಶ್, ದಾವಣಗೆರೆ ಐಜಿಪಿ ರಮೇಶ್ ಬಾನಟ್, ದಾವಣಗೆರೆ ಎಸ್.ಪಿ. ಉಮಾ ಪ್ರಶಾಂತ್, ಹನುಮಲಿ ಷಣ್ಮುಖಪ್ಪ, ನಟ ಧರ್ಮ ಬಾಗವಹಿಸಲಿದ್ದಾರೆ.ನವಂಬರ್ 8: ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೆ.ಆರ್.ಎಸ್ ಪಕ್ಷದ ರವಿಕೃಷ್ಣ ರೆಡ್ಡಿ ನೈತಿಕ ರಾಜಕಾರಣ ಕುರಿತು ಮಾತನಾಡುವರು. ಸಚಿವರಾದ ಎಂ.ಬಿ. ಪಾಟೀಲ, ಮಧು ಬಂಗಾರಪ್ಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಮೂರ್ತಿ, ದೇವೇಂದ್ರಪ್ಪ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಎಚ್. ಉಮರ್, ಬೀಜಾನಾಯಕ್, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭಾಗವಹಿಸುವರು.ನವಂಬರ್ 9: ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು ಇಳಕಲ್‌ನ ರಂಗ ಕರ್ಮಿ ಮಹಾಂತೇಶ್ ಎಂ. ಗಜೇಂದ್ರಗಡ ಅವರಿಗೆ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಬಸವರಾಜ ಬೊಮ್ಮಾಯಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಬಿ.ಜಿ. ಗೋವಿಂದಪ್ಪ, ವಿರೇಂದ್ರ ಪಪ್ಪಿ, ರುದ್ರೇಗೌಡ ಪಾಲ್ಗೊಳ್ಳಲಿದ್ದಾರೆ.ವಿಚಾರ ಸಂಕಿರಣ
ನವಂಬರ್ 7 ರಂದು ಬೆಳಗ್ಗೆ 10 ಗಂಟೆಗೆ ಧರ್ಮ ಮತ್ತು ಮಾನವ ಹಕ್ಕುಗಳು ಕುರಿತ ವಿಚಾರ ಸಂಕಿರಣ ನಡೆಯಲಿದ್ದು ಜೈನ ಧರ್ಮದ ಬಗ್ಗೆ ಬ್ರಹ್ಮದೇವ ಹಡಲಗಿ, ಬೌದ್ಧ ಧರ್ಮದ ಕುರಿತು ಡಾ ಮೂಡ್ನಕೂಡು ಚಿನ್ನಸ್ವಾಮಿ, ಇಸ್ಲಾಂ ಧರ್ಮದ ಬಗ್ಗೆ ಮಹಮದ್ ಕುಂಯಿ, ಲಿಂಗಾಯಿತ ಧರ್ಮದ ಬಗ್ಗೆ ರಮ್ಜಾನ್ ದರ್ಗಾ, ಕ್ರೈಸ್ತ ಧರ್ಮದ ಬಗ್ಗೆ ಪಾದ್ರಿ ಎಂ.ಎಸ್. ರಾಜು ವಿಷಯ ಮಂಡನೆ ಮಾಡುವರು. ಅತಿಥಿಗಳಾಗಿ ಡಿಡಿಪಿಐ ಎಂ.ಆರ್. ಮಂಜುನಾಥ್, ಬಿಇಒಗಳಾದ ತಿಪ್ಪೆಸ್ವಾಮಿ, ಸಯ್ಯದ ಮೋಸೀನ್, ಶ್ರೀನಿವಾಸ್, ನಾಗಭೂಷಣ್, ಸುರೇಶ್ , ನಿರ್ಮಾಲಾದೇವಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಡಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸುವರು,ದೇಶದ ತುಂಬಾ ಭ್ರಷ್ಟಾಚಾರ, ಅನೀತಿ ತುಂಬಿ ತುಳುಕುತ್ತಿವೆ
ಮೌಲ್ಯಗಳು ಅಪಮೌಲ್ಯಗಳಾಗುತ್ತಿವೆ. ಹಾಗಾಗಿ ಮೌಲ್ಯಗಳನ್ನು ಎತ್ತಿ ಹಿಡಿಯಲು ಗಾಂಧೀಜಿ ಹೇಳಿದ ಸರ್ವೋದಯ ತತ್ವ ಜಾರಿಗೆ ತರಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಶ್ರೀ ಮಠದಲ್ಲಿ ಶುಕ್ರವಾರ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ,
ಸರ್ವೋದಯ ಮತ್ತು ಕಲ್ಯಾಣ ಎರಡು ಒಂದೇ. ಸಮಾಜದಲ್ಲಿ ಅನಿಷ್ಟ ನಿವಾರಿಸಿ ಸಮ ಸಮಾಜದ ನಿರ್ಮಾಣ ಮಾಡುವುದು. ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವುದು ಈ ಬಾರಿಯ ನಾಟಕೋತ್ಸವ ಉದ್ದೇಶವಾಗಿದ್ದು ಈ ನೆಲೆಯಲ್ಲಿ ಕೃಷಿ, ಪರಿಸರ, ರಾಜಕೀಯ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸಲು ಅತಿಥಿಗಳು ಮಾತನಾಡುತ್ತಾರೆ ಎಂದರು.ಈ ಬಾರಿಯ ಗೋಷ್ಠಿ ಆಯ್ಕೆಯನ್ನು ಸರ್ವೋದಯ ಚೌಕಟ್ಟಿನಲ್ಲಿ ಆಯ್ಕೆ ಮಾಡಲಾಗಿದೆ. ಧರ್ಮದ ಜವಾಬ್ದಾರಿ ಹೊತ್ತವರಿಗೂ ಸರ್ವೋದಯದ ಪರಿಕಲ್ಪನೆ ಬಗ್ಗೆ ಜವಾಬ್ದಾರಿ ಇರಬೇಕು. ಕ್ರೈಸ್ತ, ಜೈನ, ಬೌದ್ಧ, ಇಸ್ಲಾಂ, ಲಿಂಗಾಯತ ಈ ಧರ್ಮಗಳಲ್ಲಿ ಮಾನವ ಹಕ್ಕುಗಳನ್ನು ಹೇಗೆ ಪ್ರತಿಪಾದನೆ ಮಾಡಲಾಗಿದೆ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ವಿಷಯದ ಕುರಿತು ಮುಕ್ತವಾಗಿ ಚರ್ಚೆಯಾಗಲಿದೆ ಎಂದರು.
ಒಟ್ಟಾರೆಯಾಗಿ ಗಾಂಧೀಜಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಸಿಕ್ಕರೆ ಸುಗಮ ಆಡಳಿತ ಮತ್ತು ದೇಶದ ಪ್ರಗತಿ ಸಾಧಿಸಬಹುದು. ತಾರತಮ್ಯ ನಿವಾರಣೆ ಮಾಡಬಹುದು ಎಂಬ ಕನಸು ಕಂಡಿದ್ದರು. ಆದರೆ ಪ್ರಸ್ತುತ ಗಾಂಧೀಜಿ ಅವರ ಆಶಯಗಳು ಅರ್ಥ ಕಳೆದುಕೊಳ್ಳುವ ವಾತಾವರಣ ನಿರ್ಮಾಣ ಆಗಿದೆ ಎಂದರು.ಕೃಷಿ, ಶಿಕ್ಷಣ, ಧರ್ಮ ಈ ಮೂರು ವಿಷಯ ಕುರಿತು ತುಲಾಭಾರ, ಬಂಗಾರದ ಮನುಷ್ಯ, ಕೋಳೂರು ಕೊಡಗುರು ನಾಟಕ ಪ್ರದರ್ಶನ ಗೊಳ್ಳಲಿವೆ. ಭ್ರಷ್ಟಾಚಾರ ಅಪರಾಧ ಎನ್ನುವ ಪ್ರಜ್ಞೆ ಯಾರಲ್ಲಿಯೂ ಮೂಡುತ್ತಿಲ್ಲ. ಚುನಾವಣೆ ಸ್ಪರ್ಧಿಸಲು ಹಣ ಮುಖ್ಯವಾಗಿದೆ. ವ್ಯಕ್ತಿಯ ವ್ಯಕ್ತಿತ್ವ, ಗುಣ, ಸೇವೆ ಎಲ್ಲವು ಹಣದ ಮುಂದೆ ಗೌಣ ವಾಗಿದೆ ಎಂಬ ಸಂದೇಶ ತುಲಭಾರ ನಾಟಕ ನೀಡುತ್ತದೆ ಎಂದು ಶ್ರೀ ಹೇಳಿದರು.
ಜನರ ಬದುಕಿನ ಬಗ್ಗೆ ಸರ್ಕಾರಗಳು ಯೋಚನೆ ಮಾಡುತ್ತಿಲ್ಲ. ಕೃಷಿಕ ಭೂಮಿಯನ್ನು ನಂಬಿದರೆ ಮೋಸ ಮಾಡುವುದಿಲ್ಲ. ನೆಮ್ಮದಿಯ ಜೀವನ ನಡೆಸಬಹುದು ಎಂಬುದನ್ನು ಬಂಗಾರದ ನಾಟಕ ತೋರಿಸುತ್ತದೆ ಎಂದು ತಿಳಿಸಿದರು.