ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಸಮಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಡಾ.ಡಿ. ನಟರಾಜ್ ಮುಂಚೂಣಿಯಲ್ಲಿದ್ದರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ಹೇಳಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ವರ್ಗಾವಣೆಗೊಂಡ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜ್ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಇಲಾಖೆಯ ಕಾರ್ಯಕ್ರಮಗಳನ್ನು ಜಾರಿಯಾಲು ಉತ್ತಮವಾಗಿ ಕೆಲಸ ಮಾಡುತ್ತಿದ್ದ ಇವರ ವರ್ಗಾವಣೆ ಬೇಸರ ತರಿಸಿದೆ ಎಂದರು.ಆರೋಗ್ಯ ಇಲಾಖೆಯ ಜತೆಗೆ ಇತರ ಇಲಾಖೆಗಳ ಕಾರ್ಯಕ್ರಮಗಳನ್ನು ಸಮುದಾಯದ ಸಹ ಭಾಗಿತ್ವದಲ್ಲಿ ಅರ್ಹರಿಗೆ ತಲುಪಿಸಬೇಕಾದರೆ ಇಲಾಖೆಯ ಮುಖ್ಯಸ್ಥರು ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂಬುದನ್ನು ಅರಿತು ಕೆಲಸ ಮಾಡಿದ ಡಾ. ನಟರಾಜು ಇತರರಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜ್, ಪತ್ನಿ ಡಾ. ಪ್ರತಿಮಾ ಅವರನ್ನು ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿಗಳು ಅಭಿನಂದಿಸಿ ಬೀಳ್ಕೊಟ್ಟರು.ತಹಸೀಲ್ದಾರ್ ಜಿ. ಸುರೇಂದ್ರ ಮೂರ್ತಿ, ತಾಪಂ ಇಓಗಳಾದ ವಿ.ಪಿ. ಕುಲದೀಪ್, ಎ. ರವಿ, ಬಿಇಓ ಆರ್. ಕೃಷ್ಣಪ್ಪ, ಸಮಾಜ ಕಲ್ಯಾಣಾಧಿಕಾರಿ ಶಂಕರ್ ಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಸಿ. ನಟರಾಜು, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಜೆ. ನವೀನ್, ವೈದ್ಯರಾದ ಡಾ. ಭವಾನಿ, ಡಾ. ಸಚಿನ್, ಡಾ. ಮದನ್ ಮೋಹನ್, ಡಾ. ಅಶೋಕ್ , ಡಾ. ಮೀನಾಕ್ಷಿ ಮಲ್ಲಪ್ಪ, ಡಾ. ಸಚಿನ್, ಡಾ. ವೀರಕುಮಾರ ರೆಡ್ಡಿ , ಡಾ. ಶಿವಕುಮಾರ್, ಡಾ. ಮಧುಸೂದನ್ ರಾವ್, ಡಾ. ರೇವಣ್ಣ , ಡಾ. ದಿನೇಶ್, ಡಾ. ಮೋನಿಕಾ, ಡಾ. ಅಂಬಿಕಾ, ತಾಲೂಕು ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಂ. ಗಂಗಾಧರ್, ಉಪಾಧ್ಯಕ್ಷರಾದ ಕೆ.ವಿ. ರಮೇಶ್, ಉಮೇಶ್, ನಿರ್ದೇಶಕರಾದ ಶಶಿಕಾಂತ್, ತಾಪಂ ವ್ಯವಸ್ಥಾಪಕ ಸತೀಶ್, ಜಯಲಕ್ಷ್ಮಿ, ಶಿಕ್ಷಣ ಇಲಾಖೆಯ ಲೋಕೇಶ್, ಹಿರಿಯ ಔಷಧಿ ನಿಯಂತ್ರಣಾಧಿಕಾರಿ ಆನಂದ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಪಾರ್ವತಿ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ. ರೇಖಾ, ಬಿಪಿಎಂ ರೇಖಾ, ಶೋಭಾ ಇದ್ದರು.----------------
;Resize=(128,128))
;Resize=(128,128))
;Resize=(128,128))
;Resize=(128,128))