ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಸಮೀಕ್ಷೆ ತಂಡ ಭೇಟಿ

| Published : Apr 03 2025, 12:32 AM IST

ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಸಮೀಕ್ಷೆ ತಂಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಾಪಟ್ಟಣ ಆರೋಗ್ಯ ಕೇಂದ್ರದಲ್ಲಿ ದೊರೆಯುತ್ತಿರುವ ಹೆರಿಗೆ ಸೌಲಭ್ಯ ಹೊರರೋಗಿಗಳ ವಿಭಾಗದ ಚಿಕಿತ್ಸೆ ಸಿಬ್ಬಂದಿ ವರ್ಗದವರ ಮಾಹಿತಿ, ಕಡತಗಳ ಪರೀಶಿಲನೆ ಆರೋಗ್ಯಕೇಂದ್ರದಲ್ಲಿ ಸ್ವಚ್ಛತೆ ಮೊದಲಾದ ಅಂಶಗಳನ್ನು ತಂಡವು ಅವಲೋಕಿಸಿದ್ದು, ಆರೋಗ್ಯ ಕೇಂದ್ರವನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದ್ದು, ಭೇಟಿ ನೀಡಿದ ತಂಡವು ಆರೋಗ್ಯ ಕೇಂದ್ರಾಡಳಿತ ಅಧಿಕಾರಿಗಳಿಗೆ ಕೇಂದ್ರ ಸೂಚನೆಗಳನ್ನು ಸಹ ನೀಡಿತು. ಉತ್ತಮ ನಿರ್ವಹಣೆ ಎಂದು ಆರೋಗ್ಯ ಕೇಂದ್ರತಂಡವು ಅಭಿಪ್ರಾಯ ವ್ಯಕ್ತಪಡಿಸಿತು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಸಮೀಕ್ಷೆ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.

ಆರೋಗ್ಯ ಕೇಂದ್ರದಲ್ಲಿ ದೊರೆಯುತ್ತಿರುವ ಹೆರಿಗೆ ಸೌಲಭ್ಯ ಹೊರರೋಗಿಗಳ ವಿಭಾಗದ ಚಿಕಿತ್ಸೆ ಸಿಬ್ಬಂದಿ ವರ್ಗದವರ ಮಾಹಿತಿ, ಕಡತಗಳ ಪರೀಶಿಲನೆ ಆರೋಗ್ಯಕೇಂದ್ರದಲ್ಲಿ ಸ್ವಚ್ಛತೆ ಮೊದಲಾದ ಅಂಶಗಳನ್ನು ತಂಡವು ಅವಲೋಕಿಸಿದ್ದು, ಆರೋಗ್ಯ ಕೇಂದ್ರವನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದ್ದು, ಭೇಟಿ ನೀಡಿದ ತಂಡವು ಆರೋಗ್ಯ ಕೇಂದ್ರಾಡಳಿತ ಅಧಿಕಾರಿಗಳಿಗೆ ಕೇಂದ್ರ ಸೂಚನೆಗಳನ್ನು ಸಹ ನೀಡಿತು. ಉತ್ತಮ ನಿರ್ವಹಣೆ ಎಂದು ಆರೋಗ್ಯ ಕೇಂದ್ರತಂಡವು ಅಭಿಪ್ರಾಯ ವ್ಯಕ್ತಪಡಿಸಿತು.

ತಂಡದಲ್ಲಿದ್ದ ಡಾ. ಸಂದೀಲ್ ಕುಮಾರ್‌, ಡಾ. ವೇಣುಗೋಪಾಲ್ ಮತ್ತು ತಂಡಕ್ಕೆ ಬಸವಾಪಟ್ಟಣ ಆರೋಗ್ಯಕೇಂದ್ರದ ಮಾಹಿತಿಗಳನ್ನು ಡಾ. ಅನಿಲ್ ಕುಮಾರ್, ಹಿರಿಯ ವೈದ್ಯಾರಾದ ಡಾ.ರಾಜೇಶ್ ಮತ್ತು ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತರು, ಶ್ರೂಶೂಕಿಯರು ಒದಗಿಸಿದರು. ತಂಡದ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆಗಳನ್ನು ಇನ್ನು ಹೆಚ್ಚಿನ ಸೇವೆ ಒದಗಿಸಲು ಹೆಚ್ಚಿನ ಅನುದಾನ ಒದಗಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ವೈದ್ಯಾಧಿಕಾರಿ ಡಾ. ರಾಜೇಶ್ ತಿಳಿಸಿದರು.

ಇದೇ ವೇಳೆ ಆರೋಗ್ಯ ಕೇಂದ್ರದ ಆರೋಗ್ಯ ನೀರಿಕ್ಷಕ ಲೋಕೆಶ್ ಶ್ರೂಶೂಷಕಿಯರಾದ ಪದ್ಮ, ಸವಿತಾ, ಸಿಬ್ಬಂದಿ ವರ್ಗದವರು ಹಾಜರಿದ್ದರು.