ಭಾರತ ಮಾಲಾ ಯೋಜನೆಯ ನಿರ್ಮಿಸುತ್ತಿರುವ ಬೆಳಗಾವಿ-ಹೈದ್ರಬಾದ್ ರಾಷ್ಟ್ರೀಯ ಹೆದ್ದಾರಿ 748(ಎ) ಪ್ಯಾಕೇಜ್ ನಂಬರ್ 5 ಮತ್ತು 6ರ ನಿರ್ಮಾಣದಲ್ಲಿ ಗುತ್ತಿಗೆದಾರರ ಕಂಪನಿ ಆಟಾಟೋಪದಿಂದ ರಾಷ್ಟ್ರೀ ಹೆದ್ದಾರಿ ಪ್ರಾಧಿಕಾರದ ನಿರ್ವಹಣೆ ನಿರ್ಲಕ್ಷದಿಂದ ಭೂಮಿ ಕಳೆದುಕೊಂಡ ಹಾಗೂ ಇತರೇ ರೈತರ ಜಮೀನು ಗಳಿಗೆ ಸಂಪರ್ಕ ಕಡಿತಗೊಂಡು ತೊಂದರೆಗೆ ಒಳಗಾದ ರೈತರು ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ರೈತ ಜಮೀನುಗಳಿಗೆ ಸಂಪರ್ಕ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಭಾರತ ಮಾಲಾ ಯೋಜನೆಯ ನಿರ್ಮಿಸುತ್ತಿರುವ ಬೆಳಗಾವಿ-ಹೈದ್ರಬಾದ್ ರಾಷ್ಟ್ರೀಯ ಹೆದ್ದಾರಿ 748(ಎ) ಪ್ಯಾಕೇಜ್ ನಂಬರ್ 5 ಮತ್ತು 6ರ ನಿರ್ಮಾಣದಲ್ಲಿ ಗುತ್ತಿಗೆದಾರರ ಕಂಪನಿ ಆಟಾಟೋಪದಿಂದ ರಾಷ್ಟ್ರೀ ಹೆದ್ದಾರಿ ಪ್ರಾಧಿಕಾರದ ನಿರ್ವಹಣೆ ನಿರ್ಲಕ್ಷದಿಂದ ಭೂಮಿ ಕಳೆದುಕೊಂಡ ಹಾಗೂ ಇತರೇ ರೈತರ ಜಮೀನು ಗಳಿಗೆ ಸಂಪರ್ಕ ಕಡಿತಗೊಂಡು ತೊಂದರೆಗೆ ಒಳಗಾದ ರೈತರು ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ರೈತ ಜಮೀನುಗಳಿಗೆ ಸಂಪರ್ಕ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿದರು.

ಪಟ್ಟಣದ ಲಕ್ಷ್ಮೀ ಗುಡಿಯಿಂದ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ಸರ್ಕಾರದ ಗಮನ ಸೆಳೆದ ರೈತರು, ಜಿಲ್ಲೆಯ ಅಂದಾಜು 44 ಹಳ್ಳಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ 748 ನಿರ್ಮಾಣದಿಂದ ಜಮೀನು ಕಳೆದುಕೊಳ್ಳಲಿದೆ. ಜೊತೆಗೆ ಸಂಪರ್ಕ ಅರ್ಧಿಸಲಿದೆ. ಭೂಮಿ ಕಳೆದುಕೊಂಡ ಹಾಗೂ ಹಳ್ಳಿಗಳ ಸಂಪರ್ಕ ಕಡಿತಗೊಂಡರೆ ಜನಜೀವನ, ಕೃಷಿ ಸಂಸ್ಕೃತಿಗೆ ದೊಡ್ಡ ಹೊಡೆತ ಬೀಳುವ ಜೊತೆಗೆ ಮನುಷ್ಯ ಸಂಬಂಧಗಳು ಕಡಿತಗೊಳ್ಳಲಿವೆ. ಅಲ್ಲದೇ ತಲೆತಲಾಂತರದಿಂದ ಮಾಡಿಕೊಂಡು ಬಂದ ಕೃಷಿ ಪದ್ಧತಿ, ಪರಂಪರೆಗೆ ಮಾರಕವಾಗಲಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಿಯಮದಂತೆ ರೈತರಿಗೆ ತೊಂದರೆ ಆಗದಂತೆ ಹಾಗೂ ಸಂಪರ್ಕ ಸಮೀಪ, ಸಲೀಸಾಗಿ ಓಡಾಡಲು ಅಂಡರ್ ಪಾಸ್, ಸಂಪರ್ಕ ರಸ್ತೆಗಳ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ಕಲ್ಯಾಣ ಕರ್ನಾಟಕದ ಹಳ್ಳಿಗಳ ಜನರ ಮೂಲ ಕಸಬು ಕೃಷಿಯಾಗಿದೆ. ಜನರ ಜೀವನೋಪಾಯ ಕೃಷಿಯನ್ನು ಅವಲಂಭಿಸಿದೆ. ಜನರ ಬದುಕಿಸುವ ಕೃಷಿಗಿಂದ ಹಾಗೂ ದೇಶಕ್ಕೆ ಅನ್ನ ನೀಡುವ ರೈತನಿಗಿಂತ ಹೆದ್ದಾರಿ ನಿರ್ಮಾಣ ವಿನ್ಯಾಸ ಹಾಳಾಗುತ್ತದೆ ಎಂದು ಹಸಿ ಸುಳ್ಳು ಹೇಳುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದೇಶದ ಕಾನೂನು ಕಲಂ 300ರ ಆಸ್ತಿ ಹಕ್ಕು, ಕಲಂ 21ರ ಜೀವನೋಪಾಯದ ಹಕ್ಕಿನ ಉಲ್ಲಂಘನೆ ಆಗುತ್ತಿದೆ. ಅಂಡರ್‌ಪಾಸ್‌ ಗಳು 5.5 ಮೀಟರ್ ಲಂಬಾಂತರದಲ್ಲಿ ನಿರ್ಮಿಸಬೇಕು. ಜೊತೆಗೆ ರೈತರ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾನೂನು ಐಆರ್ಸಿ ಎಸ್.ಪಿ ಕಲಂ 84, 87ರಂತೆ ಜಮೀನಿಗೆ ತೆರಳಲು ತೊಂದರೆ ಆಗದಂತೆ ರಸ್ತೆ ನಿರ್ಮಿಸಬೇಕು. ಅಲ್ಲದೇ ಹೆದ್ದಾರಿ ನಿರ್ಮಿಸುವುದು ಎಷ್ಟು ಮುಖ್ಯವೋ ಕೃಷಿ ಚಟುವಟಿಕೆಗಳು ನಡೆಯುವುದು ಅಷ್ಟೇ ಮುಖ್ಯ ಎಂದು ಸುಪ್ರೀಂಕೋರ್ಟ ಹೇಳುತ್ತದೆ. ಹಾಗಾಗಿ ಎಲ್ಲೂ ಸುತ್ತಿ ಬಳಸಿ ಜಮೀನುಗಳಿಗೆ ಹೋಗುವುದು ರೈತರಿಗೆ ಸಾಧ್ಯವಿಲ್ಲ. ದ ಇಂಡಿಯನ್ ಎಸ್ಟಿಮೇಟ್ ಕಾಯ್ದೆ 1982ರಂತೆ ಜಮೀನಿನ ಮಾಲೀಕ ಅದನ್ನು ಅನುಭವಿಸುವರು ಆ ಜಮೀನು ಪ್ರವೇಶಿಸುವ ಮತ್ತು ವಹಿವಾಟು ಮಾಡುವ ಹಕ್ಕನ್ನು ಪ್ರತಿಪಾದಿಸಿದೆ. ಈ ಹಕ್ಕು ಉಲ್ಲಂಘನೆ ಆಗಿದೆ. ಕೋಡ ಆಪ್ ಕ್ರಿಮಿನಲ್ ಪ್ರೊಸಿಜರ್ -173ರ ಕಲಂ 147ರನ್ವಯ ಸ್ಥಳೀಯ ಆಡಳಿತ ಕಾನೂನು ರೀತಿ ಪರಿಹರಿಸುವ ಅಧಿಕಾರ ಹೊಂದಿದ್ದರು ಜಿಲ್ಲಾಡಳಿತ, ತಾಲೂಕ ಆಡಳಿತ ಗಮನ ಹರಿಸದೇ ನಿರ್ಲಕ್ಷ ವಹಿಸಿದ್ದರೆಂದು ಆರೋಪಿಸಿದರು.ರ್ಯಾಲಿಯಲ್ಲಿ ಸಂಚಾಲಕ ಶರಣಪ್ಪ ಉದ್ಭಾಳ, ಶರಣಗೌಡ ಬಸಾಪುರ, ಬಸನಗೌಡ ಕುಣೆಕೆಲ್ಲೂರು, ರೆಡ್ಡೆಪ್ಪಗೌಡ ಕಾಚಾಪುರ, ಸಿದ್ದನಗೌಡ, ಹಂಪಣ್ಣ, ಖಾಜಾಸಾಬ, ಬಾಲಾಜಿ ಸಿಂಗ್, ಕುಮಾರ ಬೇಡರಕರ್ಲಕುಂಟಿ, ಚಂದ್ರಶೇಖರ, ಅಮರೇಗೌಡ ಗೋನ್ವಾರ, ಶಂಕ್ರಣ್ಣ ಸಾಹುಕಾರ ಸೇರಿದಂತೆ ರೈತರು ಇದ್ದರು.