ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ರಾಜ್ಯ ಹೆದ್ದಾರಿಗೆ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಅರಣ್ಯ ಕೃಷಿ ಕೈಗೆತ್ತಿಕೊಂಡ ಪ್ರಾದೇಶಿಕ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನೀಯ. ಈ ಅರಣ್ಯ ಕೃಷಿಗೆ ರೈತರು ಮತ್ತು ಸಾರ್ವಜನಿಕರು ಸಹಕಾರಿಸುವ ಮೂಲಕ ಆಕರ್ಶಣಿಯ ನಿಸರ್ಗ ರಹದಾರಿ ನಿರ್ಮಾಣದಲ್ಲಿನ ಸಹಭಾಗಿತ್ವದ ಪಾಲುದಾರಾಗಿ ಎಂದು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಸಲಹೆ ನೀಡಿದರು.ಕಲಬುರಗಿ ಆಳಂದ ಮಾರ್ಗದ ವಾಗ್ದರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಗೆ ಪ್ರಾದೇಶಿಕ ಅರಣ್ಯ ಇಲಾಖೆ ಕೈಗೊಂಡ ರಾಷ್ಟ್ರೀಯ ಹೆದ್ದಾರಿ ಮಾದರಿ ವಿಸ್ತಾರದ ಸಸಿ ನೆಡುವ ಕಾಮಗಾರಿಯನ್ನು ಶುಕ್ರವಾರ ಕಡಗಂಚಿ ಹತ್ತಿರ ಪರಿಶೀಲಿಸಿದ ಬಳಿಕ ಅವರು ಸಸಿ ನೆಟ್ಟು ನೀರುಣಿಸಿ ಮಾತನಾಡಿದರು.ಅರಣ್ಯ ಕೃಷಿಯು ಮಣ್ಣಿನ ಕ್ಷಾರದ್ರವ್ಯಗಳನ್ನು ತಡೆಯಲು ಸಹಾಯಮಾಡುತ್ತದೆ. ಮಣ್ಣು ಬಿರುಕು ಬೀಳುವುದನ್ನು ಮತ್ತು ಎಣ್ಣೆ ಬಾಹ್ಯ ರಾಸಾಯನಿಕಗಳ ಪ್ರಮಾಣವನ್ನು ಕಡಿಮೆಮಾಡಲು ಮಹತ್ವದ ಕಾರ್ಯ ಇದರದ್ದಾಗಲಿದೆ. ಜೊತೆಗೆ ಸಸಿಗಳು ಮಳೆಯ ನೀರನ್ನು ತಡೆಯಲು ಮತ್ತು ನೆಲದ ನೀರಿನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಈ ಕಾರ್ಯಗಳು ಜಲಮೂಲ ಸಂರಕ್ಷಣೆಗೆ ಮಹತ್ತರವಾಗಿರುತ್ತವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು.ಇಂಥ ಅರಣ್ಯ ಕೃಷಿಯು ಪ್ರತಿಯೊಬ್ಬರ ಹೊಲ ನಿವೇಶನಗಳಲ್ಲಿ ಸ್ಥಳೀಯ ಸಮುದಾಯಗಳಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ. ಸಸಿ ನಾಟಿ, ನಿರ್ವಹಣೆ, ಕಟಾವು ಮತ್ತು ಮಾರಾಟದ ಮೂಲಕ ಜನರು ಆರ್ಥಿಕವಾಗಿ ಲಾಭಾಂಶ ಸಹ ಜೊತೆಗೆ ಅರಣ್ಯ ಕೃಷಿಯು ಸ್ಥಳೀಯ ಜೀವಜಾಲದ ಉಳಿವಿಗೆ ನೆರವಾಗುತ್ತದೆ. ಇದು ವನ್ಯಜೀವಿಗಳ ಆಶ್ರಯವನ್ನು ನೀಡುತ್ತದೆ ಮತ್ತು ಪರಿಸರ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಅರಣ್ಯ ಕೃಷಿಯಿಂದ ಸ್ಥಳೀಯ ಸಮುದಾಯಗಳು, ಶಾಲೆಗಳು, ಮತ್ತು ಇತರ ಸಂಘಟನೆಗಳು ಅರಣ್ಯ ಕೃಷಿ ಯೋಜನೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪರಿಸರ ಜಾಗೃತಿಯನ್ನು ಹೆಚ್ಚಿಸುವ ಅವಕಾಶದ ಸದ್ಬಳಕೆ ಆಗಬೇಕು ಎಂದರು.ನಮ್ಮ ರಾಜ್ಯದ ಹೆದ್ದಾರಿ ಮಾದರಿಯಲ್ಲಿ ಅರಣ್ಯ ಕೃಷಿಯ ಯಶಸ್ಸು ಇತರ ರಾಜ್ಯಗಳಿಗೆ ಮಾದರಿಯಾಗಲಿದೆ, ಇದು ಇತರರನ್ನು ಪ್ರೇರೇಪಿಸಲು ಮತ್ತು ಹಸಿರುಮರದ ಮಹತ್ವವನ್ನು ತಿಳಿಸುವ ಮಾದರಿ ಕಾರ್ಯಕ್ಕೆ ಸರ್ವರು ಸಹಕರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಡಗಂಚಿ, ಸುಂಟನೂರ ಇನ್ನಿತರ ಗ್ರಾಮದ ರೈತರು ಉಪಸ್ಥಿತರಿದ್ದರು.
--------ಚಿತ್ರಶಿರ್ಷಿಕೆ:
ವಾಗ್ದರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಗೆ ಪ್ರಾದೇಶಿಕ ಅರಣ್ಯ ಇಲಾಖೆ ಕೈಗೊಂಡ ರಾಷ್ಟ್ರೀಯ ಹೆದ್ದಾರಿ ಮಾದರಿ ವಿಸ್ತಾರದ ಸಸಿ ನೆಡುವ ಕಾರ್ಯಕ್ಕೆ ಕಡಗಂಚಿ ಹತ್ತಿರ ಶಾಸಕ ಬಿ.ಆರ್. ಪಾಟೀಲ ಅವರು ಸಸಿ ನೆಟ್ಟು ಚಾಲನೆ ನೀಡಿದರು.