ಸಮಯ ಪ್ರಜ್ಞೆ, ರಾಷ್ಟ್ರೀಯ ಭಾವೈಕ್ಯತೆ ಹೆಚ್ಚಾಗುತ್ತಿದೆ

| Published : Nov 21 2024, 01:03 AM IST

ಸಾರಾಂಶ

ಶಿಬಿರದಿಂದ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಲು ತುಂಬಾ ಸಹಕಾರಿ

ಕನ್ನಡಪ್ರಭ ವಾರ್ತೆ ರಾವಂದೂರು ಮಕ್ಕಳಲ್ಲಿ ಸಮಯ ಪ್ರಜ್ಞೆ ರಾಷ್ಟ್ರೀಯ ಭಾವೈಕ್ಯತೆ ಹೆಚ್ಚಾಗುತ್ತಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.ಪಿರಿಯಾಪಟ್ಟಣ ತಾಲೂಕು ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಮಾಕೋಡಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಶಿಬಿರದಿಂದ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದ್ದು ಗ್ರಾಮೀಣ ಜನರಲ್ಲಿ ಅರಿವಿನ ಜೊತೆಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಳ್ಳಬಹುದಾದ ಜೊತೆಗೆ ತಾವು ಸಹ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಯಾವ ರೀತಿ ಕಾಪಾಡಿದರೆ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಿದೆ ಎಂದು ಅರಿತುಕೊಳ್ಳುವ ಶಿಬಿರವಾಗಿದೆ ಶಿಬಿರದಿಂದ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಲು ತುಂಬಾ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ರಾವಂದೂರಿನ ಮುರುಗ ಮಠದ ಮೋಕ್ಷಪತಿ ಮಹಾ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನಾರ್ಜನೆ ಜೊತೆಗೆ ತಮ್ಮ ಸಮಾಜದಲ್ಲಿ ಯಾವ ರೀತಿ ಇರಬೇಕು ಎಂಬುದನ್ನ ಅರಿವು ಮೂಡಿಸುವ ಕಾರ್ಯಕ್ರಮ ವಾಗಿದ್ದು, ಜನರಲ್ಲಿ ಅರಿವಿನ ಜೊತೆಗೆ ತಾವು ಸಹ ಈ ಯೋಜನೆಯ ಮೂಲ ಉದ್ದೇಶವನ್ನು ಅರಿತರೆ ತಮ್ಮ ಮನೆ ತಾವು ಗ್ರಾಮ ಉತ್ತಮವಾಗಿರಲು ತುಂಬಾ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಆರ್.ಡಿ. ಸತೀಶ್ ಮಾತನಾಡಿದರು. ಪ್ರಭಾರ ಪ್ರಾಂಶುಪಾಲ ಲಕ್ಷ್ಮಿಕಾಂತ್ , ಶಿಕ್ಷಕರಾದ ವರದೇಶ , ಸಿಆರ್.ಪಿ ನಾಗೇಶ್, ಧನರಾಜ್ ಮಾತನಾಡಿದರು.ಗ್ರಾಮದ ಮುಖಂಡರಾದ ನೀಲಕಂಠ ,ಸುರೇಶ್ ,ರವಿ ,ಹಾಗೂ ವಿದ್ಯಾರ್ಥಿಗಳಿಗೆ ಟಿ-ಶರ್ಟ್ ದಾನಿ ಡಿ,ಎಸ್ ನಂದೀಶ್, ಬಾಳೆ ಮಂಡಿ ಕೀರ್ತಿ , ಎ.ಆರ್ ಸಚಿನ್, ಮುಖ್ಯೋಪಾಧ್ಯಾಯ ನಾಗೇಶ್ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ರವಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇದ್ದರು.