ಹಾಸನ: ನಗರದ ರಾಜೀವ್ ಶಿಕ್ಷಣ ಮಹಾವಿದ್ಯಾಲಯವು ಹಾಸನ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ " Redefining Teacher Education for Transformative Practices " ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜನೆ ಮಾಡಲಾಗಿತ್ತು.

ಪ್ರೊ. ನಾಗರಾಜ ಎನ್. ಕುಲಸಚಿವರು, ಮೌಲ್ಯಮಾಪನ, ಹಾಸನ ವಿಶ್ವವಿದ್ಯಾಲಯ ಹಾಸನ, ಡಾ. ಮಹಾದೇವ ಪ್ರಸಾದ್ ಎಂ. ನಿರ್ದೇಶಕರು, ಕಾಲೇಜು ಅಭಿವೃದ್ಧಿ ಮಂಡಳಿ, ಹಾಸನ ವಿಶ್ವವಿದ್ಯಾಲಯ, ಹಾಸನ. ಡಾ. ನಿಂಗಮ್ಮ ಸಿ ಬೆಟ್ಸೂರ್, ಹಿರಿಯ ಪ್ರಾಧ್ಯಾಪಕರು, ಶಿಕ್ಷಣ ಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು., ಡಾ. ಪ್ರಿಯಾ ಮ್ಯಾಥ್ಯೂ, ಪ್ರಾಂಶುಪಾಲರು, ಸೇಂಟ್ ಜೋಸೆಫ್ ಶಿಕ್ಷಣ ಮಹಾವಿದ್ಯಾಲಯ, ಮೈಸೂರು, ಡಾ. ವಿವೇಕಾನಂದ ಜೆ. ಡೀನ್, ACT, ಬೆಂಗಳೂರು, ಡಾ. ಗುರುರಾಜ ಪಿ. , ಉಪಾಧ್ಯಕ್ಷರು, CSTA ಇಂಡಿಯಾ., ಡಾ. ಮಿನಿ ವರ್ಗೀಸ್, ಪ್ರಾಂಶುಪಾಲರು, ರಾಜೀವ್ ಶಿಕ್ಷಣ ಮಹಾವಿದ್ಯಾಲಯ, ಹಾಸನ, ಡಾ.ಮಂಜುನಾಥ ಕೆ. ಎಂ. ಸಹ ಪ್ರಾಧ್ಯಾಪಕರು, ರಾಜೀವ್ ಶಿಕ್ಷಣ ಮಹಾವಿದ್ಯಾಲಯ, ಹಾಸನ ಇವರು ಹಾಜರಿದ್ದರು. ಹಾಗೂ ವಿವಿಧ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ವಿಷಯದ ಕುರಿತಾದ ತಮ್ಮ ಲೇಖನಗಳನ್ನು ಪ್ರಸ್ತುತಪಡಿಸಿದರು.